ಗುರುವಾರ, ಏಪ್ರಿಲ್ 28, 2011

ಕವಿಕಿರಣ - ಜೂನ್, 2009

ಆತ್ಮೀಯರೇ,
                 'ಕವಿಕಿರಣ'ದ ಜೂನ್, 2009ರ ಸಂಚಿಕೆ ಇದೋ ನಿಮ್ಮ ಮುಂದಿದೆ. ನಿಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ, ಸೂಚನೆಗಳಿಗೆ ಸ್ವಾಗತವಿದೆ.
************************

ರಕ್ಷಾಪುಟ -1
**********************************

ಮೂಢ ಉವಾಚ     
      ಸಜ್ಜನನು ಬೇರಲ್ಲ ದುರ್ಜನನು ಬೇರಿಲ್ಲ|
      ಬುದ್ಧನೂ ಬೇರಲ್ಲ ಹಿಟ್ಲರನು ಬೇರಿಲ್ಲ||
      ಕೆಡುಕದು ಬೇರಲ್ಲ ಒಳಿತದು ಬೇರಿಲ್ಲ|
      ಎಲ್ಲ ನೀನೆ ಎಲ್ಲವೂ ನಿನ್ನೊಳಗೆ ಮೂಢ||
                               - ಕ.ವೆಂ.ನಾ.
* * * *
ಸಂಪಾದಕರು:    

     ಕ.ವೆಂ. ನಾಗರಾಜ್,
     ನಂ.೨೩೫೪, ನಾಗಾಭರಣ, ೭ನೆಯ ಅಡ್ಡರಸ್ತೆ.
     ೨ನೆಯ ಮುಖ್ಯರಸ್ತೆ, ಶಾಂತಿನಗರ,
     ಹಾಸನ - ೫೭೩೨೦೧. (ಖಾಯಂ ವಿಳಾಸ).
ಪ್ರಸ್ತುತದ ತಾತ್ಕಾಲಿಕ ವಿಳಾಸ:    

     ನಂ. ೫೬, ಸೌಪರ್ಣಿಕಾ, ರೋಟರಿ ಶಾಲೆ  
     ಹಿಂಭಾಗ, ೪ನೆಯ ಅಡ್ಡರಸ್ತೆ, ರಾಜೇಂದ್ರನಗರ,
     ಶಿವಮೊಗ್ಗ - ೫೭೭೨೦೪.
     ಮೊಬೈಲ್ ದೂ: ೯೪೪೮೫ ೦೧೮೦೪.
ಸಹಸಂಪಾದಕರು:
     ಕವಿ ವೆಂ. ಸುರೇಶ್,                                                 
     ಸೌಪರ್ಣಿಕಾ, ೩ನೆಯ ಮುಖ್ಯ ರಸ್ತೆ, ೩ನೆಯ       
     ಅಡ್ಡರಸ್ತೆ, ಅಕ್ಕಮಹಾದೇವಿ ಪಾರ್ಕ್ ಹತ್ತಿರ,   
     ಬಸವೇಶ್ವರ ನಗರ,     ಶಿವಮೊಗ್ಗ - ೫೭೭೨೦೪.
     ಮೊಬೈಲ್ ದೂ: ೯೪೪೮೯ ೩೨೮೬೬.
ಪ್ರಕಾಶಕರು:    

 ಕವಿ ಪ್ರಕಾಶನ, ಶಿವಮೊಗ್ಗ.
ಮುದ್ರಕರು:
     ರಾಯಲ್ ಪ್ರಿಂಟರ್ಸ್, ಶಿವಮೊಗ್ಗ.
****************
ಪತ್ರಿಕೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಲೇಖಕರದ್ದೇ ಹೊರತು ಪತ್ರಿಕೆಯದಲ್ಲ.

***************
ಕವಿ ಮನೆತನದ ಮಂಗಳನಿಧಿಗೆ ವಂತಿಕೆ ನೀಡಿದ ಮಹನೀಯರು
೨೦೦೮ನೆಯ ಸಾಲು

ಶ್ರೀ/ ಶ್ರೀಮತಿಯರಾದ:
೧. ಕೆ.ವಿ.ಅನಂತ, ನೋರಿಸ್ ಟೌನ್, ಯು.ಎಸ್.ಎ.  ರೂ.೫೦೦೦
೨. ಸಾ.ಕ.ಕೃಷ್ಣಮೂರ್ತಿ ಕುಟುಂಬ, ಬೆಂ.                       ೧೦೧೦
೩. ಕೆ. ಶ್ರೀಕಾಂತ, ಬೆಂಗಳೂರು                                  ೧೦೦೦
೪. ಕವಿ ವೆಂಕಟಸುಬ್ಬರಾವ್, ಶಿವಮೊಗ್ಗ                       ೫೦೦
೫. ಕ.ವೆಂ. ನಾಗರಾಜ್, ಹಾಸನ                                 ೫೦೦
೬. ಕವಿ ವೆಂ. ಸುರೇಶ್, ಶಿವಮೊಗ್ಗ                              ೫೦೦
೭. ಎಂ.ಎಸ್. ನಾಗೇಂದ್ರ, ಬೆಂಗಳೂರು                        ೫೦೦
೮. ಜಗದೀಶಚಂದ್ರ, ಬೆಂಗಳೂರು                                ೫೦೦
೯. ಮಹಾಲಕ್ಷ್ಮಿ ಮಂಜುನಾಥ, ಬೆಂಗಳೂರು                   ೫೦೦
೧೦. ಗಿರಿಜಾಲಕ್ಷ್ಮೀಪತಿ, ಬೆಂಗಳೂರು                           ೫೦೦
೧೧. ಅಶ್ವತ್ಥಪ್ರಸಾದ್, ಬೆಂಗಳೂರು                         ೧೦೫೦೦
೧೨. ದಿ.ಲಕ್ಷ್ಮಮ್ಮ ಸುಬ್ಬರಾವ್, ಹಳೇಬೀಡು ಇವರ    ನೆನಪಿನಲ್ಲಿ ಮಕ್ಕಳಿಂದ                                                                                  ೧೦೦೦
೧೩. ಎಸ್. ರಾಜಾರಾವ್, ಬೆಂಗಳೂರು                         ೫೦೨
೧೪. ಕೆ.ವಿ.ಲಲಿತಾಂಬಾವೆಂಕಟರಾಮಯ್ಯ, ಬೆಂ.            ೫೦೧
೧೫. ಎಸ್.ಕೆ. ರಾಮರಾವ್, ಬೆಂಗಳೂರು                      ೫೦೦
೧೬. ಕೃಷ್ಣಜೋಯಿಸ್, ಬೆಂಗಳೂರು                             ೫೦೦
೧೭. ಗುಂಡಾಜೋಯಿಸ್, ಕೆಳದಿ                                  ೫೦೦
೧೮. ರಾಮಮೂರ್ತಿ, ಕೆಳದಿ                                        ೫೦೦
೧೯. ವೆಂಕಟೇಶ ಜೋಯಿಸ್, ಕೆಳದಿ                             ೫೦೦
೨೦. ಹೆಬ್ಬೈಲು ಕೃಷ್ಣಮೂರ್ತಿರಾವ್, ಬೆಂಗಳೂರು             ೫೦೦
೨೧. ಸುಬ್ಬಲಕ್ಷ್ಮಮ್ಮ, ಎಸ್.ಎನ್.ಮೂರ್ತಿ, ಬೆಂ.              ೫೦೦
೨೨. ವಿಜಯಾ ಸುಬ್ರಾಮಯ್ಯ, ಬೆಂಗಳೂರು                   ೫೦೦
೨೩. ಕಾಶಿಬಾಯಿ, ಶಿಕಾರಿಪುರ                                      ೩೦೦
೨೪. ಬಿ.ಎಸ್. ಲಲಿತಾ, ಬೆಂಗಳೂರು                            ೧೦೦
                                                                ಒಟ್ಟು ೨೭೪೧೩ 


ವೆಚ್ಚದ ವಿವರ
೧. ಪ್ರಥಮ ಸಂಚಿಕೆ ಮುದ್ರಣ ವೆಚ್ಚ ರೂ.                      ೫೯೦೦
೨. ಪ್ಲಾಸ್ಟಿಕ್ ಕವರ್‌ಗಳು                                              ೧೦೦
ಒಟ್ಟು                                                                     ೬೦೦೦

ಜಮಾ ಖರ್ಚು ವಿವರ (೩೧-೧೨-೨೦೦೮ರವರೆಗೆ)
೧೩-೧೧-೦೮ರಲ್ಲಿದ್ದಂತೆ ಪ್ರಾರಂಭಶಿಲ್ಕು                 ರೂ.೧೦೫೧೦
ಸಂಗ್ರಹ (೧೩-೧೧-೦೮ರಿಂದ ೩೧-೧೨-೦೮ರವರೆಗೆ)      ೧೬೯೦೩
ಬಡ್ಡಿ ಮೊಬಲಗು                                                          -
ಒಟ್ಟು                                                                    ೨೭೪೧೩
ವೆಚ್ಚ                                                                        ೬೦೦೦
ಆಖೈರು ಶಿಲ್ಕು (೩೧-೧೨-೦೮ ರಲ್ಲಿದ್ದಂತೆ)                ೨೧೪೧೩ 

೨೦೦೯ನೆಯ ಸಾಲು
ವಂತಿಕೆ ನೀಡಿದವರು

೧. ಹೆಚ್.ಎಸ್. ಪುಟ್ಟರಾಜು, ಜಾವಗಲ್  ರೂ                 .೫೦೦೦
೨. ಸುಬ್ಬಲಕ್ಷ್ಮಮ್ಮ ಸುಬ್ಬರಾವ್, ಬೆಂಗಳೂರು                  ೫೦೦೦
೩. ಕ.ವೆಂ. ನಾಗರಾಜ್, ಹಾಸನ                                      ೮೨೦
ಒಟ್ಟು                                                              ರೂ.೧೦೮೨೦ 


ಜಮಾ ಖರ್ಚು ವಿವರ (೦೧-೦೧-೦೯ರಿಂದ ೩೧-೦೫-೦೯ರವರೆಗೆ)
೦೧-೦೧-೦೯ರಲ್ಲಿದ್ದಂತೆ ಪ್ರಾರಂಭಶಿಲ್ಕು                    ರೂ.೨೧೪೧೩
ಸಂಗ್ರಹ (೦೧-೦೧-೦೯ರಿಂದ ೩೧-೦೫-೦೯ರವರೆಗೆ)          ೧೦೮೨೦
ಬಡ್ಡಿ ಮೊಬಲಗು                                                             247
ಒಟ್ಟು                                                                         32480
ವೆಚ್ಚ (ಪ್ರಥಮ ಸಂಚಿಕೆಗೆ ಸಂಬಂಧಿಸಿದಂತೆ)                        ೮೨೦
ಆಖೈರು ಶಿಲ್ಕು (೩೧-೦೫-೦೯ ರಲ್ಲಿದ್ದಂತೆ)                     31660

* * * *
     ಕವಿಕಿರಣದ ಮುಂದಿನ ಸಂಚಿಕೆ ಡಿಸೆಂಬರ್, ೨೦೦೯ರಲ್ಲಿ ಪ್ರಕಟವಾಗಲಿದೆ. ಎಂದಿನಂತೆ ಎಲ್ಲರ ಪ್ರೋತ್ಸಾಹ, ಸಹಕಾರ ನಿರೀಕ್ಷಿಸಿದೆ.                                       -ಸಂ.

* * * *
-ರಕ್ಷಾಪುಟ -2-
************************************************

ಉತ್ತಮ ಬಾಂಧವ್ಯದೆಡೆಗೆ...


     "ವಾವ್!, ನಿಜಕ್ಕೂ ಹೊಸ ಅನುಭವ. ಇಂತಹ ಕಾರ್ಯಕ್ರಮ ನಾನು ಮೊದಲು ನೋಡಿರಲಿಲ್ಲ. ಬಹಳ ಉತ್ತಮವಾದ ಕಾರ್ಯಕ್ರಮ, ಅಭಿನಂದನೆಗಳು!"
     ಇದು ದಿನಾಂಕ ೨೮-೧೨-೨೦೦೮ರಂದು ಬೆಂಗಳೂರಿನಲ್ಲಿ ನಡೆದ ಕೆಳದಿ ಕವಿ ಮನೆತನದವರ ಮತ್ತು ಬಂಧು ಬಳಗದವರ ಮೂರನೆಯ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿದ್ದವರೊಬ್ಬರ ಪ್ತತಿಕ್ರಿಯೆ. ಉಳಿದವರಿಂದಲೂ ಇದೇ ರೀತಿಯ ಉದ್ಗಾರಗಳು, ಪ್ರತಿಕ್ರಿಯೆಗಳು! ನಿಜ, ಈ ಕಾರ್ಯಕ್ರಮ ಅನುಕರಣೀಯವಾಗಿತ್ತು ಮತ್ತು ಭಿನ್ನವಾಗಿತ್ತು. ಈ ಸಮಾರಂಭದಲ್ಲಿ ಕುಟುಂಬಗಳ ಸಂವಹನಾ ಮಾಧ್ಯಮವಾಗಿ, ಉತ್ತಮ ಬಾಂಧವ್ಯ ವೃದ್ಧಿ ಹಾಗೂ ಸಜ್ಜನಶಕ್ತಿಯ ಜಾಗರಣೆಗಾಗಿ, ಕವಿ ಪ್ರತಿಭೆಗಳ ಅನಾವರಣಕ್ಕಾಗಿ ರೂಪಿಸಿದ ಈ ಪತ್ರಿಕೆ ಕವಿಕಿರಣ ಬಿಡುಗಡೆಯಾಯಿತು. ಗೊತ್ತ್ತಿಲ್ಲದೇ ಇದ್ದ ಅನೇಕ ಬಂಧುಗಳು ಪ್ರಥಮ ಬಾರಿಗೆ ಭೇಟಿಯಾಗಿ ಪರಸ್ಪರ ಪರಿಚಯ ಮಾಡಿಕೊಂಡರು. ಹಿರಿಯರನ್ನು ಸ್ಮರಿಸಿಕೊಂಡರು. ನಾವೂ ಏನನ್ನಾದರೂ ಮಾಡಬೇಕೆಂಬ ಪ್ರೇರಣೆ ಪಡೆದರು. ಪರಸ್ಪರ ಉತ್ತಮ ಬಾಂಧವ್ಯ ಮುಂದುವರೆಸುವ ಪ್ರಯತ್ನಕ್ಕೆ ಮನಸಾರೆ ಬೆಂಬಲಿಸಿದರು.

     ಮನುಷ್ಯನ ಜೀವನದಲ್ಲಿ ಸಂಬಂಧಗಳು - ತಾಯಿ, ತಂದೆ, ಮಕ್ಕಳು, ಅಜ್ಜ, ಅಜ್ಜಿ, ಅಣ್ಣ, ತಂಗಿ, ಅಕ್ಕ, ತಮ್ಮ, ಗಂಡ, ಹೆಂಡತಿ, ಇತ್ಯಾದಿ - ಹಾಸುಹೊಕ್ಕಾಗಿದೆ. ಈ ಸಂಬಂಧಗಳು ಮಧುರವಾಗಿದ್ದರೆ ಚೆನ್ನ. ಇಲ್ಲದಿದ್ದರೆ. . . .? ನನ್ನ ಸ್ನೇಹಿತರೊಬ್ಬರು ಹೇಳುತ್ತಿದ್ದಂತೆ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಮುಂದೊಮ್ಮೆ ಚಿಕ್ಕಪ್ಪ, ದೊಡ್ಡಮ್ಮ, ಷಡ್ಡಕ, ಓರಗಿತ್ತಿ, ಅತ್ತಿಗೆ, ಮೈದುನ, ದಾಯಾದಿ, ಸೋದರತ್ತೆ, ಇತ್ಯಾದಿ ಸಂಬಂಧಗಳ ಅರ್ಥವೇ ಮಕ್ಕಳಿಗೆ ತಿಳಿಯದೇ ಹೋಗಬಹುದು. ಈಗ ಹೆಚ್ಚಿನ ಕುಟುಂಬಗಳಲ್ಲಿ ಒಂದೇ ಮಗುವಿರುವುದರಿಂದ ಅಣ್ಣ, ತಮ್ಮ, ಅಕ್ಕ, ತಂಗಿಯರ ಪ್ರೀತಿಯ ಅನುಬಂಧಗಳ ಅನುಭವಗಳೂ ಸಹ ಆ ಮಕ್ಕಳಿಗೆ ಆಗುತ್ತಿಲ್ಲ. ಗಂಡ, ಹೆಂಡತಿ ಇಬ್ಬರೂ ಒಟ್ಟಿಗೆ ಇದ್ದರೆ ಅದೇ ಅವಿಭಕ್ತ ಕುಟುಂಬ ಎಂದು ಹೇಳುವ ಪರಿಸ್ಥಿತಿ ಇಂದು ಇದೆ. ಸಂಬಂಧಗಳು ಚೆನ್ನಾಗಿರಬೇಕೆಂದರೆ ನಾವು ಎಲ್ಲರೊಂದಿಗೆ ಚೆನ್ನಾಗಿರಬೇಕೆಂಬ ಮೂಲ ತತ್ವ ನೆನಪಿಡಬೇಕು.
     ಬಾಂಧವ್ಯಗಳು ಸುಮಧುರವಾಗಿರಲು ಕೆಲವು ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳಬಹುದು. ೧.ಒಳ್ಳೆಯ ಕೆಲಸಗಳನ್ನು ಮಾಡಿದಾಗ  ಮೆಚ್ಚುಗೆ ವ್ಯಕ್ತಪಡಿಸುವುದು, ಪ್ರೋತ್ಸಾಹಿಸುವುದು. ೨.ತಪ್ಪಾದಾಗ ಸರಿಪಡಿಸಲು ಪ್ರಾಮಾಣಿಕ ಯತ್ನ ಮಾಡುವುದು. ೩.ಮಾಡಿದ ತಪ್ಪನ್ನು ಒಪ್ಪಿಕೊಳ್ಳಲು ಹಿಂಜರಿಯದಿರುವುದು. ೪.ಸಂಬಂಧಗಳು ಕೆಡುವಂತಹ ಯಾವುದೇ ಕೆಲಸಗಳನ್ನು ಮಾಡದಿರುವುದು. ೫.ಬಂಧುಗಳೊಳಗೆ ಸಾಧ್ಯವಾದಷ್ಟೂ ಹಣಕಾಸಿನ ವ್ಯವಹಾರಗಳನ್ನು ಇಟ್ಟುಕೊಳ್ಳದಿರುವುದು. ೬.ಸಭೆ, ಸಮಾರಂಭಗಳಿಗೆ ಆಹ್ವಾನ ಬಂದಾಗ ಹಾಜರಾಗುವುದು. ೭.ಹುಟ್ಟುಹಬ್ಬ, ವಿವಾಹದ ದಿನ, ಹಬ್ಬ ಹರಿದಿನಗಳು, ಇತ್ಯಾದಿ ದಿನಗಳಲ್ಲಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು. ೮.ಕಷ್ಟ ಕಾಲದಲ್ಲಿ ನೆರವಾಗುವುದು, ಸಾಧ್ಯವಿಲ್ಲದಿದ್ದಲ್ಲಿ ಸಾಂತ್ವನ ಹೇಳುವುದು. ೯.ನೇರವಾಗಿ ಅಥವಾ ಹಿಂದಿನಿಂದ ದೂರದಿರುವುದು. ೧೦.ಭಿನ್ನಾಭಿಪ್ರಾಯ ಬಂದಾಗ ಮುಖಾಮುಖಿ ಮಾತನಾಡಿ ಭಿನ್ನತೆ ಪರಿಹರಿಸಿಕೊಳ್ಳುವುದು. ೧೧.ಹೇಳುವುದಕ್ಕಿಂತ ಕೇಳುವುದಕ್ಕೆ ಆದ್ಯತೆ ನೀಡುವುದು. . . . .ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಒಟ್ಟಿನಲ್ಲಿ ಸಮಯ, ಸಂದರ್ಭ, ಪರಿಸರಕ್ಕೆ ಅನುಗುಣವಾಗಿ ನಡೆಯುತ್ತಾ ನಮ್ಮ ಕಡೆಯಿಂದ ತಪ್ಪಾಗದಿರುವಂತೆ ನೋಡಿಕೊಂಡರೆ ಬಾಂಧವ್ಯಗಳು ಎಲ್ಲರಿಗೂ ಹಿತಕಾರಿಯಾಗಿರುತ್ತದೆ.
     ದ್ವೇಷಿಸಲು ನಮಗೆ ಹಲವಾರು ಕಾರಣಗಳು ಸಿಗುತ್ತವೆ. ಆದರೆ ಪ್ರೀತಿಸಲೂ ನಮಗೆ ಕಾರಣಗಳು ಇರುತ್ತವೆಂಬುದನ್ನು ಮರೆಯದಿರೋಣ. ಇದು ನಾವು ನೋಡುವ ದೃಷ್ಟಿಯನ್ನು ಅವಲಂಬಿಸಿದೆ. ದ್ವೇಷದ ಪರಿಣಾಮ ಇತರರನನ್ನೂ ಹಾಳು ಮಾಡಿ ನಮ್ಮನ್ನೂ ಹಾಳು ಮಾಡುತ್ತದೆ ಎಂಬುದನ್ನು ಮರೆಯಬಾರದು. ದ್ವೇಷದಿಂದ ಇತರರಿಗೆ ಆಗುವ ಹಾನಿಗಿಂತ ಸ್ವಂತಕ್ಕೆ ಮತ್ತು ತನ್ನ ಕುಟುಂಬದ ಸದಸ್ಯರಿಗೆ ಆಗುವ ಹಾನಿಯೇ ಹೆಚ್ಚು. ಕತ್ತಲೆಯನ್ನು ಕತ್ತಲೆಯಿಂದ ಓಡಿಸಲಾಗುವುದಿಲ್ಲ. ಅದಕ್ಕೆ ಬೆಳಕೇ ಬರಬೇಕು. ಹಾಗೆಯೇ ದ್ವೇಷವನ್ನು ದ್ವೇಷದಿಂದ ತೊಡೆಯಲಾಗುವುದಿಲ್ಲ. ಹಾಗೆ ಮಾಡಿದರೆ ದ್ವೇಷ ಇನ್ನೂ ಹೆಚ್ಚುವುದಲ್ಲದೆ ಅದರ ವ್ಯಾಪ್ತಿ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗೂ ಹಬ್ಬುತ್ತದೆ. ದೊಡ್ಡವರ ತಪ್ಪಿಗೆ ಮಕ್ಕಳು ಬಲಿಯಾಗಬಾರದಲ್ಲವೇ? ದ್ವೇಷವನ್ನು ಗೆಲ್ಲಲು ಪ್ರೀತಿಗೆ ಮಾತ್ರ ಸಾಧ್ಯ. ತಪ್ಪು ಮಾಡಿಯೂ, ತಪ್ಪೆಂದು ಗೊತ್ತಿದ್ದೂ ತಿದ್ದಿಕೊಂಡು ನಡೆಯಲು ಬಯಸದವರು, ಅವರದೇ ಆದ ಕಾರಣಗಳಿಗಾಗಿ ಸುಳ್ಳು ಆರೋಪಗಳನ್ನು ಮಾಡಿ ಸಂಬಂಧಗಳನ್ನು ಕೆಡಿಸುವವರು ಕೆಲವರು ಇರುತ್ತಾರೆ. ಅಂತಹವರಿಂದ ದೂರವಿರುವುದು ಒಳ್ಳೆಯದು. ಅವರನ್ನೂ ಸಾಧ್ಯವಾದರೆ ಪ್ರೀತಿಸೋಣ; ಆಗದಿದ್ದರೆ ಸುಮ್ಮನಿರೋಣ! ಆದರೆ ಯಾವ ಕಾರಣಕ್ಕೂ ದ್ವೇಷಿಸದಿರೋಣ!! ಇತರರು ಇಷ್ಟಪಡುವ ವ್ಯಕ್ತಿತ್ವ ಬೆಳೆಸಿಕೊಳ್ಳೋಣ!!! ಇತರರು ಇಷ್ಟಪಡುವ ವ್ಯಕ್ತಿತ್ವ ನಮ್ಮದಾಗಬೇಕೆಂದರೆ ಇತರರನ್ನು ಇಷ್ಟಪಡುವ ಮನೋಭಾವ ನಾವು ಬೆಳೆಸಿಕೊಂಡರೆ ಮಾತ್ರ ಸಾಧ್ಯ. ಇತರರ ಪ್ರೀತಿ, ವಿಶ್ವಾಸ, ಸ್ನೇಹ, ಸಹಕಾರ ನಮಗೆ ಬೇಕೆಂದರೆ ಮೊದಲು ಅದನ್ನು ಇತರರಿಗೆ ನಾವು ನೀಡಬೇಕು. ಹಣ ಖರ್ಚು ಮಾಡಿದಷ್ಟೂ ಕಡಿಮೆಯಾಗುತ್ತದೆ. ಆದರೆ ಪ್ರೀತಿ, ವಿಶ್ವಾಸಗಳು ನೀಡಿದಷ್ಟೂ ಹೆಚ್ಚಾಗುತ್ತಾ ಹೋಗುತ್ತದೆ. ಪ್ರೀತಿಗೆ ಮಾಂತ್ರಿಕ ಶಕ್ತಿಯಿದೆ. ಪ್ರೀತಿಯ ಭಾಷೆಯನ್ನು ಮೂಕ ಮಾತನಾಡಬಲ್ಲ; ಕಿವುಡ ಕೇಳಬಲ್ಲ; ಪ್ರೀತಿಯ ಹಾಡಿಗೆ ಹೆಳವ ಕುಣಿಯಬಲ್ಲ; ಪ್ರೀತಿಯ ಕಣ್ಣಿನಲ್ಲಿ ಕುರುಡ ನೋಡಬಲ್ಲ. ಜೀವನವನ್ನು ನೋಡುವ ರೀತಿ ಬದಲಾಯಿಸಿಕೊಂಡಲ್ಲಿ, ಪ್ರತಿಯೊಂದರಲ್ಲಿ, ಪ್ರತಿಯೊಬ್ಬರಲ್ಲಿ ತಪ್ಪು ಹುಡುಕದೆ ಒಳ್ಳೆಯ ಅಂಶಗಳನ್ನು ಗುರುತಿಸುವ ಅಭ್ಯಾಸ ಬೆಳೆಸಿಕೊಂಡಲ್ಲಿ, ನಮ್ಮನ್ನು ಇತರರು ಇಷ್ಟಪಡದಿದ್ದರೂ ದ್ವೇಷಿಸುವುದಿಲ್ಲ.
     ವೈರಿಯ ಅಬ್ಬರಕೆ ಬರೆಯೆಳೆಯಬಹುದು|
     ಕಪಟಿಯಾಟವನು ಮೊಟಕಿಬಿಡಬಹುದು||
     ಮನೆಮುರುಕರನು ತರುಬಿಬಿಡಬಹುದು|
     ಪ್ರೀತಿಯ ಆಯುಧಕೆ ಎಣೆಯುಂಟೆ ಮೂಢ||
     ಕವಿ ಕುಟುಂಬಗಳ ವಾರ್ಷಿಕ ಸಮಾವೇಶಗಳ ಪ್ರಮುಖ ಉದ್ದೇಶ ಸಹ ಬಾಂಧವ್ಯಗಳನ್ನು ಉತ್ತಮಗೊಳಿಸುವುದೇ ಆಗಿದೆ. ನಮ್ಮ ಪೂರ್ವಜರ, ಹಿರಿಯರ ಒಳ್ಳೆಯ ಸಾಧನೆಗಳನ್ನು ನೆನೆಸಿಕೊಂಡು ನಾವೂ ಸಹ ಏನನ್ನಾದರೂ ಸಾಧಿಸಲು ಪ್ರೇರಿಸಬೇಕೆಂಬುದು ಇದರ ಹಿನ್ನೆಲೆಯಾಗಿದೆ. ಒಂದೇ ಕುಟುಂಬದ ಒಟ್ಟಿಗೆ ಸೇರದ ಸದಸ್ಯರುಗಳೂ ಸಹ ಸಮಾವೇಶದಲ್ಲಿ ಒಟ್ಟಿಗೆ ಸೇರುತ್ತಿರುವುದು ಒಳ್ಳೆಯ ಬೆಳವಣಿಗೆ.  ಒಳ್ಳೆಯ ಸಂಗತಿಗಳಿಗೆ ಪ್ರಾಧಾನ್ಯತೆ ನೀಡಿದಷ್ಟೂ ಕೆಟ್ಟ ಸಂಗತಿಗಳಿಗೆ ಹಿನ್ನಡೆಯಾಗುತ್ತದೆ. ವಾರ್ಷಿಕ ಸಮಾವೇಶಗಳಲ್ಲಿ ನಮ್ಮ ಪೂರ್ವಜರ ಕೃತಿಗಳನ್ನು ಆಧರಿಸಿದ ರೂಪಕ, ನಾಟಕ, ಸಂಗೀತ, ಇತ್ಯಾದಿಗಳನ್ನು ಏರ್ಪಡಿಸಬಹುದು. ಇದಕ್ಕೆ ಪೂರ್ವ ತಯಾರಿ ಮಾಡಬಹುದು. ಪ್ರತಿ ಕುಟುಂಬದ ಕಡೆಯಿಂದ ವರ್ಷದ ಸಾಧನೆಯಾಗಿ ಏನನ್ನಾದರೂ ಮಾಡಲು ಕುಟುಂಬದ ಒಬ್ಬರು ಸದಸ್ಯರಾದರೂ ಮನಸ್ಸು ಮಾಡಬೇಕು. ಆ ಸಾಧನೆ ಬರವಣಿಗೆಯಿರಬಹುದು,  ನಟನೆ, ಆಟೋಟ, ಸಂಗೀತ,ನಾಟ್ಯವಿರಬಹುದು, ಚಿತ್ರಕಲೆಯಾಗಿರಬಹುದು, ನಾವು ತೊಡಗಿಕೊಂಡಿರುವ ವೃತ್ತಿ ಅಥವಾ ಪ್ರವೃತ್ತಿಯಲ್ಲಿರಬಹುದು,  ಗಮನಿಸಬಹುದಾದ ಯಾವುದೇ ಸಂಗತಿಯಿರಬಹುದು. ಸಮಾವೇಶಗಳಲ್ಲಿ ಇಂತಹ ಸಾಧನೆಗಳನ್ನು ಮಾಡಿದವರನ್ನು ಗುರುತಿಸಿ ಬೆನ್ನು ತಟ್ಟಬಹುದು, ಗೌರವಿಸಬಹುದು. ಇತರರು ಮಾಡಲಿ, ನಾವು ಪ್ರೋತ್ಸಾಹಿಸೋಣ ಎಂಬುದರ ಬದಲಿಗೆ ನಾವೂ ಏನನ್ನಾದರೂ ಜೀವಿತಕಾಲದಲ್ಲಿ ಸಾಧಿಸೋಣ ಎಂಬ ಭಾವನೆ ಬಂದಲ್ಲಿ ಉತ್ತಮ ಬೆಳವಣಿಗೆಯೇ ಸರಿ. ಕವಿ ಕುಟುಂಬಗಳವರು ಮನಸ್ಸು ಮಾಡಿ ಕಾರ್ಯ ಪ್ರವೃತ್ತರಾಗುತ್ತಾರೆ, ವಾರ್ಷಿಕ ಸಮಾವೇಶಗಳು ಇಂತಹ ಆರೋಗ್ಯಕರ ಸ್ಪರ್ಧೆಗೆ ಉತ್ತಮ ವೇದಿಕೆಯಾಗುತ್ತದೆ ಎಂಬ ನಿರೀಕ್ಷೆಯೊಂದಿಗೆ,
ಉತ್ತಮ ಬಾಂಧವ್ಯಕ್ಕಾಗಿ ತಮ್ಮವನು,
-ಕ.ವೆಂ. ನಾಗರಾಜ್.
********************

ಜೀವನ
ಜೀವನ ಯಶಸ್ಸು ಮತ್ತು ಸೋಲುಗಳ ಮಿಶ್ರಣ; ಉತ್ತಮ ಬದುಕಿಗೆ ಇವೆರಡೂ ಇರಬೇಕು.
***************************
-ಪುಟಗಳು 1,2-
******************************

'ಸೇರಿದೆವು ನಾವು'
ಕವಿಕುಟುಂಬಗಳ ಮತ್ತು ಬಂಧು ಬಳಗದವರ ಮೂರನೆಯ ವಾರ್ಷಿಕ ಸಮಾವೇಶದ ವರದಿ
     ದಿನಾಂಕ ೨೮-೧೨-೨೦೦೮ರ ಭಾನುವಾರದ ಮುಂಜಾನೆ ಬೆಳಿಗ್ಯೆ ೮.೩೦ರಿಂದಲೇ ಕವಿ ಕುಟುಂಬಗಳ ಸದಸ್ಯರು ಮತ್ತು ಬಂಧು ಬಳಗದವರು ಬೆಂಗಳೂರಿನ ಜೆ.ಪಿ. ನಗರದ ೨ನೆಯ ಹಂತದ ರಾಗಿಗುಡ್ಡದ ಆಂಜನೇಯ ದೇವಸ್ಥಾನದ ಸಮೀಪವಿರುವ ಮಾ ಆನಂದಮಯಿ ಆಶ್ರಮದ ಸಭಾಭವನದಲ್ಲಿ ಸೇರಲಾರಂಭಿಸಿ ಬೆ. ೯.೩೦ರ ವೇಳೆಗೆ ಸಕಾಲದಲ್ಲಿ ಒಟ್ಟುಗೂಡಿದರು. ಉಪಾಹಾರದ ಬಳಿಕ ೧೦.೦೦ಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಯಿತು. ವೇದಿಕೆಗೆ ಆಗಮಿಸಿದ ಹಿರಿಯರಾದ ಶ್ರೀ ಹೆಬ್ಬೈಲು ಕೃಷ್ಣಮೂರ್ತಿ, ಶ್ರೀ ಕವಿ ವೆಂಕಟಸುಬ್ಬರಾವ್, ಶ್ರೀ ಡಾ. ಕೆಳದಿ ಕೃಷ್ಣಾಜೋಯಿಸ್, ಶ್ರೀ ಸಾ.ಕ. ಕೃಷ್ಣಮೂರ್ತಿ, ಶ್ರೀ ಎಂ. ಎಸ್. ನಾಗೇಂದ್ರ ಮತ್ತು ಶ್ರೀಮತಿ ಪದ್ಮಾವತಮ್ಮ ಸುಬ್ಬರಾವ್‌ರವರು ವೇದಘೋಷಸಹಿತ  ಜ್ಯೋತಿ ಬೆಳಗಿಸಿ ಸಭಾ ಕಾರ್ಯಕ್ರಮ ಆರಂಭಿಸಿದರು. ಪ್ರಾರಂಭದಲ್ಲಿ ದಿ. ಕವಿ ಸುಬ್ರಹ್ಮಣ್ಯಯ್ಯರವರ ತಂಗಿ ದಿ. ಶ್ರೀಮತಿ ಸುಂದರಮ್ಮರವರ ಮಗ ಶ್ರೀ ಸತ್ಯನಾರಾಯಣರಾವ್ ಮತ್ತು ದಿ. ಕವಿ ಸುಬ್ರಹ್ಮಣ್ಯಯ್ಯರವರ ಅಳಿಯ ಶ್ರೀ ನಾರಾಯಣರಾವ್‌ರವರ ನಿಧನಕ್ಕೆ ಸಂತಾಪ ಸೂಚಿಸಿ ಅವರ ಗೌರವಾರ್ಥ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು. ಕು. ನಿರಂಜನನ ಸುಶ್ರಾವ್ಯ ಪ್ರಾರ್ಥನೆ ಗಮನ ಸೆಳೆಯಿತು. ಹಿರಿಯರಾದ ಶ್ರೀ ಕೃಷ್ಣಮೂರ್ತಿಯವರು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು.

'ಕವಿಕಿರಣ' ಪತ್ರಿಕೆ ಬಿಡುಗಡೆ     ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಕ.ವೆಂ.ನಾಗರಾಜ್ ರವರು ಕಾರ್ಯಕ್ರಮದ ರೂಪು ರೇಷೆ, ಅವರ ಸಂಪಾದಕತ್ವದಲ್ಲಿ ಕವಿ ಕುಟುಂಬದ ಪತ್ರಿಕೆ ಕವಿಕಿರಣ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಸ್ಪರ ಸಂವಹನದ ಅಗತ್ಯ, ಸಜ್ಜನ ಶಕ್ತಿ ಜಾಗೃತಗೊಳಿಸಲು, ಸದಸ್ಯರ ಸುಪ್ತ ಶಕ್ತಿ ಅನಾವರಣ ಮಾಡಲು ಪತ್ರಿಕೆ ವಹಿಸಬಹುದಾದ ಪಾತ್ರ ಕುರಿತು ತಿಳಿಸಿದರು. ಸಮಾರಂಭದಲ್ಲಿ ಬಿಡುಗಡೆಯಾಗಲಿದ್ದ ಅವರೇ ರಚಿಸಿದ ಕವಿ ಮನೆತನದ ಏಳನೆಯ ಪೀಳಿಗೆಗೆ ಸೇರಿದ 'ಕವಿ ಸುಬ್ರಹ್ಮಣ್ಯಯ್ಯ' ಪುಸ್ತಕದ ಕುರಿತು ಮಾಹಿತಿ ನೀಡಿದರು. ಶ್ರೀ ಕವಿ ಸುರೇಶ್ ಸಂಪಾದಿಸಿದ ಹಾಗೂ ಸಮಾರಂಭದಲ್ಲಿ ಅರ್ಪಿತಗೊಳ್ಳಲಿದ್ದ 'ಕವಿ ಕುಟುಂಬಗಳ ಮತ್ತು ಬಂಧುಗಳ ದೂರವಾಣಿ ಮತ್ತು ವಿಳಾಸಗಳ ಕೈಪಿಡಿ' ಸಿದ್ಧಪಡಿಸಲು ಅವರು ಪಟ್ಟ ಶ್ರಮಕ್ಕಾಗಿ ಅಭಿನಂದಿಸಿದರು. ವಾರ್ಷಿಕ ಸಮಾವೇಶಗಳನ್ನು ರಚನಾತ್ಮಕವಾಗಿ ನಡೆಸಲು ಸಲಹೆಗಳನ್ನು ನೀಡಿದರು.

     'ಕವಿಕಿರಣ' ಪತ್ರಿಕೆಯನ್ನು ಬಿಡುಗಡೆಗೊಳಿಸಿದ ೯೪ ವರ್ಷಗಳ ವಯೋವೃದ್ಧ, ಜ್ಞಾನವೃದ್ಧರಾದ ಶ್ರೀ ಹೆಬ್ಬೈಲು ಕೃಷ್ಣಮೂರ್ತಿಯವರು ಸಮಾರಂಭದಲ್ಲಿ ಭಾಗವಹಿಸಿ ಪತ್ರಿಕೆ ಬಿಡುಗಡೆಗೊಳಿಸುವ ಅವಕಾಶ ಸಿಕ್ಕಿದ್ದಕ್ಕೆ ಹರ್ಷಪಟ್ಟು ಇಂತಹ ಒಳ್ಳೆಯ ಕಾರ್ಯಗಳು ನಿರಂತರವಾಗಿ ಮತ್ತು ಚೆನ್ನಾಗಿ ನಡೆಯಲೆಂದು ಹರಸಿದರು.

'ಕವಿ ಸುಬ್ರಹ್ಮಣ್ಯಯ್ಯ' ಪುಸ್ತಕ ಬಿಡುಗಡೆ
     'ಕವಿ ಸುಬ್ರಹ್ಮಣ್ಯಯ್ಯ' ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಶ್ರೀ ಕವಿ ವೆಂಕಟಸುಬ್ಬರಾಯರು ತಮ್ಮ ತಂದೆಯ ಬಗ್ಗೆ ತಮ್ಮ ಮಗ ನಾಗರಾಜ ಬರೆದು, ತಮ್ಮ ಮೊಮ್ಮಕ್ಕಳು ಬಿಂದು ಮತ್ತು ವಿನಯ ಪ್ರಾಯೋಜಿಸಿದ ಪುಸ್ತಕವನ್ನು ತಮ್ಮಿಂದ ಬಿಡುಗಡೆಗೊಳಿಸಿದ್ದಕ್ಕೆ ಸಂತೋಷಿಸಿ, ತಮ್ಮ ಮಕ್ಕಳಿಂದ ಇಂತಹ ಇನ್ನೂ ಹೆಚ್ಚು ಒಳ್ಳೆಯ ಕೆಲಸಗಳಾಗಲಿ ಎಂದು ಆಶೀರ್ವದಿಸಿದರು. ಕುಟುಂಬದ ಕೊಡುಗೆಯಾಗಿ ಪುಸ್ತಕವನ್ನು ಉಚಿತವಾಗಿ ಎಲ್ಲರಿಗೂ ನೀಡಲಾಯಿತು.
 


 ಕವಿ ಕುಟುಂಬಗಳ ದೂರವಾಣಿ ಕೈಪಿಡಿ ಬಿದುಗಡೆ    

     ಕವಿ ಕುಟುಂಬಗಳ ಮತ್ತು ಬಂಧು ಬಳಗದವರ ವಿಳಾಸ ಮತ್ತು ದೂರವಾಣಿ ವಿವರಗಳ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಡಾ. ಕೆ. ಕೃಷ್ಣಾಜೋಯಿಸರು ಸ್ವಂತ ಖರ್ಚಿನಲ್ಲಿ ಕೈಪಿಡಿ ಸಿದ್ಧಪಡಿಸಿ ಎಲ್ಲರಿಗೂ ಉಚಿತವಾಗಿ ನೀಡಿದ ಶ್ರೀ ಕವಿ ಸುರೇಶ್‌ರವರ ಕಾರ್ಯವನ್ನು ಮನತುಂಬಿ ಶ್ಲಾಘಿಸಿದರು. 



     ನಂತರದಲ್ಲಿ ಹಿಂದಿನ ಸಮಾವೇಶಗಳಿಗೆ ಬರದೆ ಇದೇ ಪ್ರಥಮವಾಗಿ ಬಂದ ಬಂಧುಗಳ ಪರಿಚಯವನ್ನು ಸಭೆಗೆ ಮಾಡಿಕೊಡಲಾಯಿತು. ಹಲವರಿಗೆ ಇದು ಅವಿಸ್ಮರಣೀಯ ಅನುಭವ ನೀಡಿತು. ನಿರಂಜನ, ಕಾಶೀಬಾಯಿ, ದೀಪಕ್, ಮತ್ತು ಹಲವರು ತಮ್ಮ ಗಾನಸುಧೆ ಹರಿಸಿದರು. ರಚಿಸಿದ್ದ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು.

     ಬೆಂಗಳೂರಿನ ಶ್ರೀ ಶ್ರೀಕಂಠ ಕುಟುಂಬದವರು ಬಂದಿದ್ದ ಎಲ್ಲಾ ಮಹಿಳಾ ಸದಸ್ಯರಿಗೆ ಅರಿಶಿನ-ಕುಂಕುಮ,ಬಳೆ, ರವಿಕೆಕಣಗಳನ್ನು ನೀಡಿ ಶುಭ ಕೋರಿದರು.
                                                   ಶ್ರೀಮತಿ ಪದ್ಮಾವತಮ್ಮ ಸುಬ್ಬರಾಯರಿಗೆ ಗೌರವ
     ಮಧ್ಯಾಹ್ನದ ಅಚ್ಚುಕಟ್ಟಾದ ರುಚಿಯಾದ ಭೋಜನದ ನಂತರದಲ್ಲಿ ಸದಸ್ಯರು ಮುಕ್ತವಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು. ಕವಿಕಿರಣದ ಮುಂದಿನ ಸಂಚಿಕೆಯನ್ನು ಪ್ರಾಯೋಜಿಸಲು ಶ್ರೀ ಪುಟ್ಟರಾಜು, ಜಾವಗಲ್ ರವರು ಮುಂದೆ ಬಂದರು. ಮುಂದಿನ ವಾರ್ಷಿಕ ಸಮಾವೇಶವನ್ನು ತೀರ್ಥಹಳ್ಳಿಯಲ್ಲಿ ದಿನಾಂಕ ೨೭-೧೨-೨೦೦೯ ರಂದು ಆಯೋಜಿಸುವುದಾಗಿ ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರ ಪರವಾಗಿ ಅವರ ಸಹೋದರರಾದ ಶ್ರೀ ಸುಬ್ರಹ್ಮಣ್ಯ ದೀಕ್ಷಿತ್ ರವರು ಘೋಷಿಸಿದರು. ಸಭೆ ಇವರುಗಳನ್ನು ಅಭಿನಂದಿಸಿತು.

                                  ಸನ್ಮಾನಿತರು: ಶ್ರೀಮತಿ ಮತ್ತು ಶ್ರೀ ಎಂ.ಎಸ್. ನಾಗೇಂದ್ರ, ಬೆಂಗಳೂರು
     ಸಮ್ಮೇಳನದ ಆಯೋಜಕರಾದ ಶ್ರೀಮತಿ ಪದ್ಮಾವತಮ್ಮ ಸುಬ್ಬರಾವ್, ಶ್ರೀಮತಿ ಮತ್ತು ಶ್ರೀ ಎಂ.ಎಸ್. ನಾಗೇಂದ್ರ ಕುಟುಂಬದವರು ಸಮ್ಮೇಳನಕ್ಕಾಗಿ ಮಾಡಿದ್ದ ಅಚ್ಚುಕಟ್ಟಾದ ವ್ಯವಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅಭಿನಂದನೆ ಮತ್ತು ವಂದನೆಗಳೊಂದಿಗೆ ಸಭೆ ಸಂಪನ್ನವಾಯಿತು.

***************

ಬನ್ನಿ ತೀರ್ಥಹಳ್ಳಿಗೆ

   ಕವಿಕುಟುಂಬಗಳ ಮತ್ತು ಬಂಧುಬಳಗದವರ ನಾಲ್ಕನೆಯ ವಾರ್ಷಿಕ ಸಮಾವೇಶ ದಿನಾಂಕ ೨೭-೧೨-೨೦೦೯ರ ಭಾನುವಾರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆಯಲಿದ್ದು, ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರು ಮತ್ತು ಸಹೋದರರು ಆಯೋಜಿಸಲಿರುವ ಈ ಸಮಾವೇಶಕ್ಕೆ ತಪ್ಪದೆ ಎಲ್ಲರೂ ಭಾಗವಹಿಸಲು ಕೋರಿದ್ದಾರೆ. ಅವರಿಗೆ ಅಭಿನಂದನೆಗಳು.
**************

ದೊಡ್ಡತನದ ದೊಡ್ಡಮ್ಮ
    
     ನನ್ನ ಮದುವೆಯಾಗಿ ಮೂರು ವರ್ಷಗಳಾಗಿತ್ತು. ಗರ್ಭಿಣಿಯಾಗಿದ್ದೆ. ನನ್ನ ಪತಿ ಗ್ರಾಮಲೆಕ್ಕಿಗರಾಗಿ ಕೆಲಸ ಮಾಡುತ್ತಿದ್ದ ಹಳ್ಳಿಯಲ್ಲಿದ್ದೆವು. ನನಗೆ ಸತ್ಯನಾರಾಯಣ ಪೂಜೆ ಮಾಡಬೇಕೆಂದು ಬಯಕೆಯಾಯಿತು. ಹಳ್ಳಿಯಲ್ಲಿ ಅನುಕೂಲವಿಲ್ಲದ ಪ್ರಯುಕ್ತ ನನ್ನ ಪತಿಯ ಅಣ್ಣನ ಮನೆಯಲ್ಲಿ ಮಾಡೋಣವೆಂದು ಹೋದಾಗ ಗರ್ಭಿಣಿಯಾದ್ದರಿಂದ ಧರ್ಮಶಾಸ್ತ್ರ ಅಡ್ಡಬರುತ್ತದೆಂದು ಮಾಡಿಸಲಿಲ್ಲ. ಅಲ್ಲಿದ್ದ ನನ್ನತ್ತೆಯ ತಾಯಿ ಮೂಕಾಂಬಿಕಮ್ಮನವರು (ಗುಂಡಾಜೋಯಿಸರ ತಾಯಿ) ನನ್ನ ಮನಸ್ಥಿತಿ ಅರಿತು ಕೆಳದಿಯಲ್ಲಿ ನನ್ನ ಮನೆಯಲ್ಲೇ ಮಾಡು. ಕೃಷ್ಣಭಟ್ಟರು ಪೂಜೆ ಮಾಡಿಸುತ್ತಾರೆ, ನಾನು ಹೇಳ್ತೀನಿ ಎಂದು ಹೇಳಿ ಅವರ ಸೊಸೆ ಶಾರದಮ್ಮನಿಂದ ಪ್ರಸಾದ ಮಾಡಿಸಿ, ಪೂಜೆ ಪರಿಕರಗಳನ್ನು ಅವರೇ ಸಿದ್ಧಪಡಿಸಿ ನನ್ನಿಂದ ಪೂಜೆ ಮಾಡಿಸಿದರು. ಮೂಕಾಂಬಿಕಮ್ಮನವರನ್ನು ನಾವೆಲ್ಲರೂ ದೊಡ್ಡಮ್ಮ ಎಂದೇ ಕರೆಯುತ್ತಿದ್ದೆವು. ಅವರ ದೊಡ್ಡತನದಿಂದ ನನ್ನ ಮನದ ದುಗುಡ ದೂರವಾಯಿತು.
-ಹೆಚ್.ಎಸ್. ವಿಮಲಮ್ಮ, ಶಿವಮೊಗ್ಗ.

************************
-ಪುಟಗಳು 3,4-
^^^^^^^^^^^^^^^^^^^^^^^^^^^^^^

ಕೆಳದಿ ಕವಿ ಮನೆತನದ ಪೂರ್ವಜರು -೨
ವೆಂಕಭಟ್ಟ (ವೆಂಕ ಕವಿ)/ ಕವಿ ವೆಂಕಣ್ಣ  
-ಸಂಗ್ರಹ ಮತ್ತು ಪ್ರಸ್ತುತಿ: ಕವಿ ವೆಂ. ಸುರೇಶ್

      ಸುಮಾರು ಕ್ರಿ.ಶ. ೧೭೭೦ರಲ್ಲಿದ್ದ ವೆಂಕ ಕವಿ, ಕವಿ ಲಿಂಗಣ್ಣನ ಮಗ.  ಈತನ ಪತ್ನಿಯ ಹೆಸರು  ದೇವಮ್ಮ. ಇವರಿಗೆ ಚೆನ್ನಯ್ಯ ಮತ್ತು ಸುಬ್ಬಾಭಟ್ಟ ಎಂಬ ಇಬ್ಬರು ಮಕ್ಕಳು. ಈತನೂ ಕೆಳದಿಯಲ್ಲಿಯೇ ವಾಸವಾಗಿದ್ದಿರಬಹುದು. ಈತನ ವೈಯುಕ್ತಿಕ ಜೀವನದ ಬಗ್ಗೆ ಯಾವುದೇ ನಿಖರವಾದ ಮಾಹಿತಿಗಳು ಲಭ್ಯವಿಲ್ಲದಿದ್ದರೂ ಈತ ರಚಿಸಿದ ಅನೇಕ ಕೃತಿಗಳ ಬಗ್ಗೆ ಮಾಹಿತಿ ಇರುವುದು ಸುದೈವ. ಈತನ ಪ್ರಮುಖ ಕೃತಿಗಳು: ೧) ಗಣಸಹಸ್ರನಾಮ, ೨) ಪಾರ್ವತಿವಲ್ಲಭ ಶತಕ, ೩)ನರಹರಿ ವಿಜಯ ಮತ್ತು ೪)ಕೆಳದಿ ರಾಮೇಶ್ವರರನ್ನು ಕುರಿತ ಭಕ್ತಿ ಗೀತೆಗಳು.
ಗಣ ಸಹಸ್ರನಾಮ:
 ಇದು ವಾರ್ಧಕ, ಭಾಮಿನಿ, ಪರಿವರ್ಧಿನಿ ಈ ಷಟ್ಪದಿಗಳು ೧೦೦ ಮತ್ತು ೧ ವಚನ - ಒಟ್ಟು ೧೦೧ ಪದ್ಯ ಸಂಖ್ಯೆಯುಳ್ಳ ಕಿರುಕೃತಿ.  ಕೆಳದಿ ರಾಮೇಶ್ವರನಿಗೂ ಮತ್ತು ಇತರೆ ದೇವರುಗಳಿಗೂ ವಂದಿಸಿ ಆರಂಭವಾಗುವ ಈ ಕೃತಿಯಲ್ಲಿ ಒಟ್ಟು ೧೦೨೪ ನಾಮಾವಳಿಗಳಿವೆ. ಕೃತಿಯಲ್ಲಿ ತನ್ನ ಸ್ವವಿವರ ಇರುವ ಈ ಸಾಲುಗಳು ಗಮನಾರ್ಹ:
      ಧರಣಿದೇವ ಲಲಾಮನೆನಿಸಿದ
      ವರ ಕೆಳದಿ ಲಿಂಗಾರ್ಯ ತನುಭವ
      ಗರುವ ವೆಂಕಪನೀ ಗಣಾಧೀಶ್ವರರ ನಾಮಗಳು ||
      ಹರುಷದಿಂ ಶಿವನಿತ್ತ ಮತಿಯಿಂ
      ವಿರಚಿಸಿದನೇ ಪದವನನಿಶಂ
      ಸರಸದಿಂ ಬರೆದೋದಿ ಕೇಳ್ದರ ಪೊರೆವನಾ ಶಿವನು ||

ಪಾರ್ವತೀ ವಲ್ಲಭ ಶತಕ :
 ಇದೊಂದು ನೀತಿ ಶತಕ -ದೈವಭಕ್ತಿ, ಗುರುಭಕ್ತಿ, ಗುರು-ಹಿರಿಯರಲ್ಲಿ ಶ್ರದ್ಧೆ, ಧರ್ಮದಲ್ಲಿ ಒಲವು ಹಾಗೂ ನಿಷ್ಠೆಯ ನಿಲುವನ್ನು ನಿರೂಪಿಸುವ ಒಂದು ತಾತ್ವಿಕ ಕೃತಿ. ಇದರಲ್ಲಿ ೧೦೧ ಪದ್ಯಗಳಿವೆ. ಗಣಸಹಸ್ರನಾಮ ಷಟ್ಪದಿಗಳ ರಚನೆಯಾದರೆ ಇದು ವೃತ್ತಗಳ ರಚನೆ  (ಶಾರ್ದೂಲ, ಚಂಪಕ, ಮತ್ತೇಭವಿಕ್ರೀಡಿತ ಇತ್ಯಾದಿ.) (ಪಾರ್ವತಿ ವಲ್ಲಭ ಶತಕ ಕೃತಿಯನ್ನು    ಕೆಳದಿಯ ಡಾ: ವೆಂಕಟೇಶ್ ಜೊಯಿಸ್‌ರವರು ಸಂಪಾದಿಸಿ ೨೦೦೭ ರಲ್ಲಿ ಪ್ರಕಟಿಸಿದ್ದಾರೆ).
ನರಹರಿ ವಿಜಯ: 
ಭಾಮಿನಿ ಷಟ್ಪದಿಯಲ್ಲಿರುವ ಈ ಕೃತಿ ಗಮನಾರ್ಹ. ಇದರಲ್ಲಿ ೮೫ ಪದ್ಯಗಳು ಮತ್ತು ೭ ಗರಿಗಳಿದ್ದು, ಇದು ನೃಸಿಂಹಾವತಾರಕ್ಕೆ ಸಂಬಂಧಿಸಿದ ಕಾವ್ಯ.  ಈ ಕೃತಿಯ ಬಗ್ಗೆ ವಿಮರ್ಶಿಸುತ್ತಾ ಸಾ.ಶಿ.ಮರುಳಯ್ಯನವರು ತಮ್ಮ ಕೆಳದಿ ಅರಸರು ಮತ್ತು ಕನ್ನಡ ಸಾಹಿತ್ಯ ಎಂಬ ಪುಸ್ತಕದಲ್ಲಿ ಕವಿಯ ಬಗ್ಗೆ ....ವೆಂಕಣ್ಣ ಬಹಳ ಸಂಗ್ರಹಶೀಲನಾದ ವ್ಯಕ್ತಿ. ಅಪ್ಪನಂತೆ ಅನಗತ್ಯ ವರ್ಣನೆಯಲ್ಲೇ ಕಾಲಹರಣ ಮಾಡುವವನಲ್ಲ..... ಎಂದು ಅಭಿಪ್ರಾಯ ಪಟ್ಟಿದ್ದಾರೆ.  ಕಾವ್ಯದ ಮುಕ್ತಾಯ ಇಂತಿದೆ:
     ನರಹರಿಯ ವಿಜಯವನು ಕೇಳುವ |
     ನರರಿಗಷ್ಟೈಶ್ವರ್ಯಸಿದ್ಧಿಯ |
     ಸರಸದಿಂದಲಿ ಶತ್ರು ವಿಜಯವ ಪುತ್ರ ಪೌತ್ರನು ||
     ಪರಮಸಂತೋಷದಲಿ ವೋದುವ |
     ಬರವ ಸ್ಮರಿಸುವವರಭಿಮತಂಗಳ |
     ಕರುಣಿಸುವ ಲಕ್ಷ್ಮಿನ್ರುಸಿಂಹನು ಪೂರ್ಣ ಕೃಪೆಯಿಂದ||
_________________________________________________________
ಕೆಳದಿ ಕವಿ ಮನೆತನದ ಸಂಬಂಧ ಮಾಲೆಯ ಕಳಚಿದ ಮೊದಲ ಕೊಂಡಿ - ಶ್ಯಾಮಭಟ್ಟ   
      ಕೆಳದಿ ನೃಪವಿಜಯವೆಂಬ ಐತಿಹಾಸಿಕ ಕಾವ್ಯ, ದಕ್ಷಾಧ್ವರ ವಿಜಯ, ಶಿವಪೂಜಾ ದರ್ಪಣ, ಮುಂತಾದ ಕೃತಿಗಳನ್ನು ರಚಿಸಿದ ಮತ್ತು ಕವಿ ಮನೆತನ ಎಂದು ಹೆಸರು ಬರಲು ಕಾರಣನಾದ ಲಿಂಗಣ್ಣ ಕವಿಯ ಪರಿಚಯವನ್ನು ಕಳೆದ ಸಂಚಿಕೆಯಲ್ಲಿ ಮಾಡಿಕೊಡಲಾಗಿದೆ. ಕೆಳದಿ ನೃಪವಿಜಯದಲ್ಲಿ ಮತ್ತು ಇತರ ಕೃತಿಗಳಲ್ಲಿ ಕವಿಯೇ ತಿಳಿಸಿದಂತೆ ಈತನ ತಂದೆಯ ಹೆಸರು ವೆಂಕಪ್ಪ ಎಂದು ಗೊತ್ತಾಗುತ್ತದೆ. ಈತನ ತಾಯಿಯ ಮತ್ತು ಪತ್ನಿಯ ವಿವರ ತಿಳಿದಿಲ್ಲ. ಈತನಿಗೆ ಶ್ಯಾಮಭಟ್ಟ ಮತ್ತು ವೆಂಕಭಟ್ಟ ಎಂಬ ಇಬ್ಬರು ಮಕ್ಕಳು ಇದ್ದುದು ತಿಳಿಯತ್ತದೆ. ಇಬ್ಬರಿಗಿಂತ ಹೆಚ್ಚು ಮಕ್ಕಳು ಇದ್ದರೋ ಇಲ್ಲವೋ ಎಂಬುದೂ ಗೊತ್ತಿಲ್ಲ. ಹಿರಿಯನಾದ ಶ್ಯಾಮಭಟ್ಟನ ಕುರಿತು ಪ್ರಸ್ತುತ ವಿವರ ಲಭ್ಯವಿಲ್ಲ. ಈತ ಕ್ರಿ.ಶ. ೧೭೫೦-೭೦ರ ಸುಮಾರಿಗೆ ಇದ್ದಿರಬಹುದು. ಈತನ ವಂಶಸ್ಥರ ಕುರಿತೂ ಸಹ ಗೊತ್ತಾಗುತ್ತಿಲ್ಲ. ಹಿರಿಯರಾದ ಸಂಶೋಧನಾ ರತ್ನ ಗುಂಡಾಜೋಯಿಸರು,  ಅವರ ಮಗ ಡಾ. ವೆಂಕಟೇಶಜೋಯಿಸರು ಹಾಗೂ ಆಸಕ್ತರು ಈ ಕುರಿತು ಸಂಶೋಧನೆ ನಡೆಸಿದರೆ ಉಪಯುಕ್ತ ಮಾಹಿತಿ ಸಂಗ್ರಹಿಸಬಹುದು.
     ಲಿಂಗಣ್ಣಕವಿಯ ಎರಡನೆಯ ಮಗ ವೆಂಕಣ್ಣನ ಪರಿಚಯವನ್ನು ಶ್ರೀ ಗುಂಡಾಜೋಯಿಸರು, ಡಾ. ವೆಂಕಟೇಶಜೋಯಿಸರು ನೀಡಿದ ವಿವರಗಳು ಹಾಗೂ ವೆಂಕಣ್ಣನ ಕೃತಿಗಳನ್ನು ಆಧರಿಸಿ ಕವಿ ಸುರೇಶ್ ಈ ಲೇಖನ ಪ್ರಸ್ತುತ ಪಡಿಸಿದ್ದಾರೆ. ಕೆಳದಿ ವೆಂಕಣ್ಣಕವಿಯ ಕೀರ್ತನೆಗಳ ಸೊಗಸು ಎಂಬ ಶೀರ್ಷಿಕೆಯಲ್ಲಿ ಹಾಸನದ ವಿಪ್ರವಾಹಿನಿಯ ಜುಲೈ, ೨೦೦೭ರ ಸಂಚಿಕೆಯಲ್ಲಿ ಸಹ ಈ ಲೇಖಕರ ಲೇಖನ ಪ್ರಕಟವಾಗಿದೆ.                           --ಸಂಪಾದಕ

----------------------------------------------------------
ಶ್ರೀ ರಾಮೇಶ್ವರರ ಮೇಲಿನ ಭಕ್ತಿ ರಚನೆಗಳು:
      ಕೆಳದಿ ಶ್ರೀ ರಾಮೇಶ್ವರ ದೇವರನ್ನು ಮತ್ತು ಕುಲದೇವರಾದ ಕೊಲ್ಲೂರು ಮೂಕಾಂಬಿಕೆಯನ್ನು ಅಂಕಿತನಾಮವನ್ನಾಗಿಟ್ಟುಕೊಂಡು ವೆಂಕಣ್ಣ ಕವಿ ಭಕ್ತಿಯಿಂದ ರಚಿಸಿದ ಹಲವಾರು ಕೀರ್ತನೆಗಳು ತಾಡವೋಲೆಯಲ್ಲಿ ದೊರೆತಿದ್ದು, ಕೆಳದಿ ಗುಂಡಾಜೊಯಿಸರು ಕೆಳದಿ ವೆಂಕಣ್ಣಕವಿಯ ಕೀರ್ತನೆಗಳು ಎಂಬ ಪುಸ್ತಕದಲ್ಲಿ ಸಂಪಾದಿಸಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಕಟಿಸಿದ್ದಾರೆ (೧೯೭೭). ಅನೇಕ ಹಾಡುಗಳಿಗೆ ಸಂಗೀತ ಶಾಸ್ತ್ರದಲ್ಲಿ ಹೇಳಿದ ರಾಗಗಳನ್ನು ತಾಳೆಗರಿಯಲ್ಲಿ ಕವಿಯು ಸೂಚಿಸಿದ್ದು, ಇದರಿಂದ ಕವಿಗೆ ಸಂಗೀತ ಶಾಸ್ತ್ರದಲ್ಲಿ ಸಾಕಷ್ಟು ಜ್ಞಾನವಿತ್ತೆಂದು ತಿಳಿಯಬಹುದಾಗಿದೆ.
    
ಕೆಳದಿ ವೆಂಕಣ್ಣ ಕವಿಯ ಕೀರ್ತನೆಗಳ ಸೊಗಸು:    

 ವೆಂಕಣ್ಣನ ಅನೇಕ ಕೃತಿಗಳು ಭಕ್ತಿಭಾವದ ಜೊತೆಗೆ ಪುರಂದರ ದಾಸರ ಹಾಗೂ ಕನಕದಾಸರ ಕೀರ್ತನೆಗಳಂತೆ ಪಾಮರರನ್ನು ಸನ್ಮಾರ್ಗಕ್ಕೆ ಒಯ್ಯುವಲ್ಲಿ ಅತ್ಯಂತ ಸಹಕಾರಿಯಾಗಿವೆ. ಬದುಕಿನಾರ್ಥದ ಬಗ್ಗೆ ಹಾಗೂ ಹಲವು ದೇವರ ಮಹಿಮೆಯ ಬಗ್ಗೆ ವಿವರಣೆಗಳು ಬಲು ಮನೋಜ್ಞವಾಗಿದ್ದು, ಅಂತಹ ಕೆಲವು ರಚನೆಗಳಿಂದ ಆಯ್ದ ಕೆಲವುಸಾಲುಗಳನ್ನು ಇಲ್ಲಿ ಪ್ರಸ್ತುತ ಪಡಿಸುವ, ತನ್ಮೂಲಕ ಆ ರಚನೆಗಳ ಒಂದು ಸೂಕ್ಷ್ಮ ಪರಿಚಯವನ್ನೂ ಮಾಡಿಕೊಡುವ ಪ್ರಯತ್ನ ಇದಾಗಿದೆ.
     ಹೂವ ಕೊಡೇ ದೇವಿ ಎಂಬ ಕೀರ್ತನೆಯಲ್ಲಿ ಸುಮಂಗಲಿಯರು ದೇವಿಯನ್ನು ಸ್ತುತಿಸಿ ಬೇಡುವ ಈಸಾಲುಗಳು ಅತ್ಯಂತಸುಂದರವಾಗಿವೆ:
         ಮುತ್ತೈದೆತನವನು ನಿತ್ಯ ಸೌಬಾಗ್ಯವ
         ಉತ್ತಮ ಧನಕನಕಾಂಬರವ
         ಪುತ್ರ ಸಂತಾನವ ಕೊಡುವೆನೆನುತ ಕರ-
         ವೆತ್ತಿ ಅಭಯವಿತ್ತು | ಹೂವ ಕೊಡೆ | ಹೂವ...

         ಎಂದೆಂದೂ ಈ ಮನೆಗೆ ಕುಂದದ ಭಾಗ್ಯವ
         ಚಂದವಾಗಿಹ ಛತ್ರ ಚಾಮರವ
         ಚಂದ್ರ ಸೂರ್ಯರ ಪೊಲ್ವ ನಂದನರನುದಯ
         ದಿಂದಲಿ ಕೊಟ್ಟು ರಕ್ಷಿಪೆನೆಂದು ಸೂಡಿದ ಹೂವ...
ಕಮಾಚ್ ರಾಗದಲ್ಲಿರುವ ಈ ಹಾಡು ಶಾಸ್ತ್ರೀಯ  ಸಂಗೀತದಲ್ಲೂ ಹಾಗೂ ಸುಗಮ ಸಂಗೀತದಲ್ಲೂ ಪ್ರಸ್ತುತ   ಪಡಿಸಲು ಬಲು ಸೊಗಸಾಗಿದೆ. ಅದೇ ರೀತಿ ನೀಲಾಂಬರಿ ರಾಗದಲ್ಲಿ ರಚಿತವಾದ ಮಕ್ಕಳಿಗೆ ಆಶೀರ್ವಾದವ ಕೋರುವ ಕೀರ್ತನೆಯಲ್ಲಿ ಮಕ್ಕಳು ಮುಂದೆ ಯಾವ ರೀತಿ ಆಗಬೇಕೆಂಬುದನ್ನು ಕವಿ ಈರೀತಿ ವಿವರಿಸಿದ್ದಾನೆ.
     ಇಂದ್ರನಾಗು ಭೋಗದೊಳು ಸತ್ಯವಾಕ್ಯದೊಳು ಹರಿ-
      ಶ್ಚಂದ್ರನಾಗು ಪಾಲನೆಯ ಮಾಡುವದರೊಳಗೆ ಉ-
      ಪೇಂದ್ರನಾಗು ಬುದ್ಧಿ ಕೌಶಲದೊಳು ತಿಳಿಯಲು ನಾ-
      ಗೇಂದ್ರ ನೀನಾಗು
ಇದಕ್ಕಿಂತ ಮಕ್ಕಳಿಗೆ ಹೆಚ್ಚಿನ ಆಶೀರ್ವಾದ/ಹಾರೈಕೆ ಬೇಕೇ?  ಇಡೀ ಕೀರ್ತನೆ ಆಶೀರ್ವಾದದ ಜೊತೆಗೆ ಮಕ್ಕಳಿಗೆ ಮುಂದೆ ಜೀವನದಲ್ಲಿ ಹೇಗೆ ಬದುಕಬೇಕು; ನಡೆದುಕೊಳ್ಳಬೇಕು ಎಂಬ ಬಗ್ಗೆ ಕೂಡಾ ಸಾಕಷ್ಟು ಮಾರ್ಗದರ್ಶನವನ್ನೂ ಒಳಗೊಂಡಿರುವುದು ಗಮನಾರ್ಹ.
ಮತ್ತೊಂದು ಕೃತಿಯಲ್ಲಿ ಗೃಹಿಣಿಯನ್ನು ಉದ್ದೇಶಿಸಿ ಬರೆದ ಈ ಸಾಲುಗಳು ಸ್ವಯಂ-ವೇದ್ಯವಾಗಿವೆ:
  ಪರಿಮಳಿಸುವ ಪುಷ್ಪ ಸರಗಳ ಮುಡಿದು
  ಗುರು ಹಿರಿಯರ ಆಶೀರ್ವಾದವ ಪಡೆದು
  ಹರುಷದಿ ಪುತ್ರ ಪೌತ್ರರ ಸಲಹುತ ಪತಿ
  ಚರಣ ಸೇವೆಯ ಮಾಡಿ ಸುಖವಿರು ಕುಕ್ಕೆಯ
         ವರ ಸುಬ್ರಹ್ಮಣ್ಯನ ಕೃಪೆಯಿಂದಾ
     ಪೂರ್ವಿಕಲ್ಯಾಣಿ ರಾಗದಲ್ಲಿ ರಚಿತವಾದ ಮತ್ತೊಂದು ಅಪೂರ್ವ ಕೀರ್ತನೆ ಆಧ್ಯಾತ್ಮ ಚಿಂತನೆಯತ್ತ ನಮ್ಮನ್ನು ಸೆಳೆಯುತ್ತದೆ. ಅದರಲ್ಲಿ ಬರುವ ಈ ಸಾಲುಗಳು ಅತ್ಯಂತ ನೀತಿ ಬೋಧಕವೂ, ಅನುಕರಣೀಯವೂ ಆಗಿವೆ:
    ತನ್ನ ತಾನೇ ತಿಳಿಯಬೇಕು | ತೋರುವ ಲೋಕ-
      ವನ್ನು ದೃಶ್ಯವೆಂದಿರಬೇಕು
      ತನ್ನಂತೆ ಸಕಲರ ನೋಡಲು ಬೇಕು
     ಮಾನ್ಯರ ಕಂಡರೆ ಮನ್ನಿಸಬೇಕು
      ಅನ್ಯನಾದರು ಹಿತವನೆ ಮಾಡಬೇಕು
     ಪ್ರಸನ್ನ ರಾಮೇಶನ ನೆನಹಿರಬೇಕು ||
ಭಗವದ್ಗೀತೆಯಲ್ಲಿ ಬರುವಂತೆ ನಾವು ಈ ಸಂಸಾರ ಬಂಧದಲ್ಲಿದ್ದರೂ ಕೂಡ ಮಾನಸಿಕವಾಗಿಯಾದರೂ ಆ ಜಂಜಾಟಕ್ಕೆ ಸಿಲುಕಬಾರದು. ನಾವು ಮಾಡಬೇಕಾದ ಕರ್ತವ್ಯಗಳನ್ನು ಯಾವುದೇಫಲಾಪೇಕ್ಷೆಯಿಲ್ಲದೇ, ನಿರ್ವಿಕಾರ ಭಾವದಿಂದ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು; ಎಲ್ಲಾ ಜೀವಿಗಳನ್ನು ಸಮಭಾವದಿಂದ ನೋಡುವ ಹಾಗೂ ಪೂಜ್ಯರನ್ನು ಗೌರವಭಾವದಿಂದ ಕಾಣುವ ಪರಿ ನಮದಾಗಬೇಕು; ಅನ್ಯರಿಗೆ ಹಿತವಾಗುವಂತೆ - ಅದಿಲ್ಲದಿದ್ದರೆ - ನೋವಾಗದಂತೆ ನಮ್ಮನಡೆ-ನುಡಿಯಿರಬೇಕು; ಹಾಗೂ ರಾಮೇಶ್ವರನ (ಭಗವಂತನ) ಸ್ಮರಣೆ ಸದಾ ಇರಬೇಕೆಂಬ ಕವಿವಾಣಿ ಜೀವನ್ಮುಕ್ತಿಯೆಡೆಗೆ ನಮ್ಮನ್ನು ಕರೆದೊಯ್ಯುವ ಹಾಯಿ ದೋಣಿಯೆಂದರೂ ತಪ್ಪಾಗಲಾರದು.   ಪುರಂದರದಾಸರು ರಚಿಸಿದ ರಾಮ ಮಂತ್ರವ ಜಪಿಸೋ ಹೇ   ಮನುಜ... ಎಂಬ ಧಾಟಿಯಲ್ಲಿಯೇ ಕವಿ ವೆಂಕಣ್ಣನು   ಮಧ್ಯಮಾವತಿ ರಾಗದಲ್ಲಿ ಶಿವ ಮಂತ್ರವ ಜಪಿಸೋ ಮೂಢ ಎಂಬ ಸುಂದರ ಕೀರ್ತನೆಯನ್ನು ಸಹ ರಚಿಸಿದ್ದಾನೆ. ಸದಾ ಭಗವಂತನ ನಾಮಸ್ಮರಣೆಯೇ ಜೀವನದ ತಾರಕ ಮಂತ್ರ ವೆಂಬ ನಿತ್ಯಸತ್ಯ ಇದರಲ್ಲಡಗಿದೆ. ಸುಶ್ರಾವ್ಯವಾಗಿ ಹಾಡಲು    ಕೂಡ ಈ ಕೀರ್ತನೆ ಪ್ರಶಸ್ತವಾಗಿದೆ.
       ತುಳಸಿ ನಮ್ಮೆಲ್ಲರಿಗೂ   ಅತ್ಯಂತ   ಪೂಜನೀಯವಾದ ಗಿಡ. ಆಯುರ್ವೇದದ ದೃಷ್ಟಿಯಲ್ಲಿ ಇದೊಂದು ಸಂಜೀವಿನಿ. ತುಳಸಿ ಮಹಿಮೆ ಸಾರುವ ಕೀರ್ತನೆಯ ಪರಿ ಇಂತಿದೆ:
        ತುಳಸಿಯ ವೃಕ್ಷಗಳ ದಳದಳಗಳ ಮೇಲೆ
          ನೆಲಸಿಹನು ಹರಿಯು ಮುದದಿಂದ
         ಮುದದಿ ತುಲಸಿಯ ಪೂಜೆಗಳ
          ಮಾಡಬೇಕು ಸುಜನರು ||

          ತುಲಸಿಯ ಮೂಲದೆ ನದಿಗಳು
           ತುಲಸಿಯ ದಳದೊಳೆ ಶ್ರೀ ಹರಿಯು
           ತುಲಸಿಯ ಶಾಖೆಯೊಳೆ ಸುರರೆಲ್ಲಾ
           ನೆಲಸಿಹರು ಶ್ರೀ ತುಲಸಿಯ
           ಮಹಿಮೆಗೆಣೆಯುಂಟೆ ||
     ಕೆಳದಿ ಕವಿ ಮನೆತನದ ಆರಾಧ್ಯದೇವತೆಯಾದ ಕೊಲ್ಲೂರು ಮೂಕಾಂಬಿಕೆಯ ಕುರಿತು ರಚಿಸಿದ ಕೃತಿ ಇರುವ ತಾಳೆಗರಿಯು ಈಗಲೂ ಕೆಳದಿ ವಸ್ತು ಸಂಗ್ರಹಾಲಯದಲ್ಲಿದ್ದು, ಆ ಕೃತಿಯಿಂದ ಆರಿಸಿದ ಕೆಲವು ಸಾಲುಗಳಿವು:
            ಮಂಗಲಂ ಜಯ ಮಂಗಲಂ
       ತ್ರಿಜಗಂಗಳ ಪೊರೆವ ಶ್ರೀ ಮೂಕಾಂಬೆಗೆ (ಪಲ್ಲವಿ) ||
       ಗೌರಿಗೆ ಗುಜನನಿಗೆ ಗಿರಿಜಾತೆಗೆ
             ಧೀರಮಹಿಷ ದೈತ್ಯಮರ್ಧಿನಿಗೆ
             ಕಾರುಣ್ಯನಿಧಿಗೆ ಕಾಮಿತಫಲದಾತೆಗೆ
             ನಾರದನುತೆಗೆ ನಾರಾಯಣಿಗೆ || ....
     ಲಭ್ಯವಿರುವ ಓಲೆಗರಿಗಳಲ್ಲಿ ಹೀಗೆ ಹಲವಾರು ಮನೋಜ್ಞ ರಚನೆಗಳನ್ನು ವೆಂಕಣ್ಣ ಕವಿಯು ಮಾಡಿದ್ದು, ಬಹುಶ: ಸೂಕ್ತ ಪ್ರಚಾರದ ಕೊರತೆಯಿಂದ ಹೆಚ್ಚು ಪ್ರಚಲಿತವಾಗಿಲ್ಲವೆಂದು ತೋರುತ್ತದೆ.  ಅನೇಕ ಕೀರ್ತನೆಗಳು ಸಂಗೀತ ಕಛೇರಿಗಳಲ್ಲಿ ಪ್ರಸ್ತುತ ಪಡಿಸಲು ಅತ್ಯಂತ ಪ್ರಶಸ್ತವಾಗಿವೆ. ಸಂಗೀತ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಂಗೀತ ವಿದ್ವಾಂಸರುಗಳು ಈ ಕೃತಿಗಳನ್ನು ಹೆಚ್ಚು ಪ್ರಚುರ ಪಡಿಸಿ ಮತ್ತು ಪ್ರಸ್ತುತ ಪಡಿಸಿ, ತನ್ಮೂಲಕ ಭಕ್ತಿ-ಸನ್ಮಾರ್ಗದ ಪಥದಲ್ಲಿ ಎಲ್ಲರನ್ನೂ ಮುನ್ನಡೆಸುವತ್ತ ಸೂಕ್ತ ಶ್ರಮ ವಹಿಸಿದಲ್ಲಿ ಕವಿ ವೆಂಕಣ್ಣನ ಸಾಧನೆ ಮತ್ತು ಶ್ರಮ ಸಾರ್ಥಕವಾಗುತ್ತದೆ.

  ಒಟ್ಟಾರೆ ನೋಡಿದಾಗ ವೆಂಕ ಕವಿ ತನ್ನ ತಂದೆಯ ಹಾದಿಯಲ್ಲೇ ನಡೆದು ತನ್ನ ಅನುಪಮ ಕೃತಿಗಳಿಂದ ಮತ್ತು ಭಕ್ತಿ ರಚನೆಗಳಿಂದ ಕವಿ ಪರಂಪರೆಯನ್ನು ಯಶಸ್ವಿಯಾಗಿ ಮುನ್ನಡೆಸಿದ ಕೀರ್ತಿಗೆ ಮತ್ತು ಎಲ್ಲರ ಗೌರವಾದರಗಳಿಗೆ ಭಾಜನನಾಗಿರುವುದರಲ್ಲಿ ಸಂಶಯವಿಲ್ಲ.
           * * * * * * * * *


ಕೆಳದಿ ವೆಂಕಣ್ಣ ಕವಿಯ ಒಂದು ಭಕ್ತಿ ಸ್ತುತಿ
ರಾಗ|| ಮಧ್ಯಮಾವತಿ           ತಾಳ|| ಆದಿ ||
 ಶಿವಮಂತ್ರವ ಜಪಿಸೋ | ಮೂಢ |
 ಶಿವಮಂತ್ರವ ಜಪಿಸೋ
 ಶಿವನೇ ನೀನಾಗುವೆಯೆಂದು ನಂಬುತ || ಪಲ್ಲವಿ ||
 ಸ್ನಾನ ಬೇಡ ಸಂಧ್ಯಾಕರ್ಮವು ಬೇಡ
 ಧ್ಯಾನ ಬೇಡ ಧಾರಣೆ ಬೇಡ
 ಮೌನ ಬೇಡ ಮಣಿಮಾಲಿಕೆ ಬೇಡ
 ಧ್ಯಾನ ಬೇಡ ಪಶುವಧೆಗಳು ಬೇಡ || ೧ ||
 ದೇಶಕಾಲ ಪಾತ್ರವ ನೋಡಬೇಡ
 ಕಾಷಾಯಾಂಬರ ಧಾರಣೆ ಬೇಡ
 ಭಾಸುರ ಜಡೆಯನು ಬೆಳೆಸಲು ಬೇಡ
 ಈ ಶರೀರವನೆ ದಂಡಿಸಬೇಡ  || ೨ ||
 ಕಾಲನ ದೂತರು ಎಳೆಯುವ ಮುನ್ನ
 ನಾಲಿಗೆ ತನ್ನಾಧೀನವಾಗಿರುವಾಗ
 ಏಳುಕೋಟಿ ಮಂತ್ರಕೆ ಮಣಿಯಾದ ವಿ
 ಶಾಲ ಕೆಳದಿ ರಾಮೇಶ್ವರನೆ ಗತಿಯೆಂದು|| ೩ ||

********
ಪುರುಸೊತ್ತಿಲ್ಲ. . .?
     ಸಮಯವಿಲ್ಲವೆನ್ನುವವರು ಮತ್ತು ಸಮಯಪಾಲನೆ ಮಾಡದವರು ಪ್ರಗತಿ ಸಾಧಿಸಲಾರರು. ಸಮಯಪಾಲನೆ ಮಾಡುವವರನ್ನು ಆಡಿಕೊಳ್ಳುವವರು ಪ್ರಗತಿಗೆ ಅಡ್ಡಗಾಲಾಗುವರು.
**************

ಅಜ್ಜಿಯ ಹುಟ್ಟಿದ ಹಬ್ಬ ಮಾಡಿದ್ದು
    
     ನಾನು ಆಗ ಹಳೇಬೀಡಿನಲ್ಲಿ ೮ನೆಯ ತರಗತಿಯಲ್ಲಿ ಓದುತ್ತಿದ್ದೆ. ಒಂದು ದಿನ ಅಮ್ಮ ಯಾವುದೋ ಕೆಲಸದ ಮೇಲೆ ಊರಿಗೆ ಹೋಗಿದ್ದರು. ನನಗೆ ಅಡುಗೆ ಕೆಲಸ ಬರುತ್ತಿತ್ತು. ಅವತ್ತು ಮೊದಲ ಬಾರಿಗೆ ರವೆ ಉಂಡೆ ಮಾಡುವುದನ್ನು ಕಲಿತಿದ್ದೆ. ಅಪ್ಪನ ಹತ್ತಿರ ರವೆ ಉಂಡೆ ಮಾಡುತ್ತೇನೆಂದು ಹೇಳಿದಾಗ ಬೇಡ ಎಂದು ಹೊರಟುಹೋದರು. ನನಗೆ ತುಂಬಾ ಬೇಜಾರಾಯಿತು. ಆದಿನ ಮಾತಿನ ಮಧ್ಯದಲ್ಲಿ ನಮ್ಮ ಅಜ್ಜಿ (ದಿ. ಲಕ್ಷ್ಮಮ್ಮ ಸುಬ್ಬರಾಯರು) ಇವತ್ತು ನನ್ನ ಹುಟ್ಟಿದ ಹಬ್ಬ ಅಂದಾಗ ನನಗೆ ಖುಷಿಯಾಯಿತು. ರವೆ ಉಂಡೆ ಮಾಡಿ ಅಜ್ಜಿಯ ಹುಟ್ಟಿದ ಹಬ್ಬಕ್ಕೆ ಸ್ವೀಟ್ ಮಾಡಿದೆ ಎಂದರೆ ಅಪ್ಪ ಏನೂ ಅನ್ನುವುದಿಲ್ಲ ಎಂದುಕೊಂಡು ರವೆ ಉಂಡೆ ಮಾಡಿದೆ. ನನಗೆ ರವೆ ಉಂಡೆಯನ್ನು ಶುಭದಿವಸಗಳಲ್ಲಿ ಮಾಡುವುದಿಲ್ಲ ಎಂದು ಗೊತ್ತಿರಲಿಲ್ಲ. ಅಜ್ಜಿಗೂ ಕೊಟ್ಟೆ. ಖುಷಿಪಟ್ಟು ತಿಂದರು. ಅದೇ ದಿನ ನಮ್ಮ ದೊಡ್ಡಮ್ಮ ವೈದೀಕ ಎಂದು ಹೇಳಿ ಪ್ರಸಾದವೆಂದು ಉದ್ದಿನ ವಡೆ, ಪಾಯಸ ಬೇರೆ ತಂದುಕೊಟ್ಟರು. ನಮ್ಮ ಮುದ್ದಿನ ಅಜ್ಜಿ ರವೆ ಉಂಡೆ ಮಾಡಿದ್ದು ತಪ್ಪು ಎಂದು ನನಗೆ ಹೇಳಲಿಲ್ಲ. ನನ್ನ ಮೊಮ್ಮಗಳು ನನ್ನ ಹುಟ್ಟಿದ ಹಬ್ಬ ಮಾಡಿದಳು ಎಂದು ಅಜ್ಜಿ ಎಲ್ಲರಿಗೂ ಖುಷಿಯಿಂದ ಹೇಳಿಕೊಂಡು ಬಂದರು. ಕೊನೆಗೆ ವಡೆ, ಪಾಯಸ ಬಂದಿದ್ದೂ ಹೇಳಿ ಬಿದ್ದು ಬಿದ್ದು ನಗುತ್ತಿದ್ದರು. ನನಗೂ ಸಂತೋಷವಾಯಿತು. ಈ ಸಂಗತಿ ಈಗಲೂ ನನಗೆ ನೆನಪಾಗುತ್ತಿರುತ್ತದೆ.

-ಹೆಚ್.ಪಿ. ರಶ್ಮಿ, ಬೆಂಗಳೂರು.

-ಪುಟಗಳು ೫,೬,೭-
***************
ಲಿಂಗಣ್ಣ ಕವಿಯ
ಕೆಳದಿ ನೃಪವಿಜಯ
ಗದ್ಯಾನುವಾದ: ಕೆ. ಗುಂಡಾಜೋಯಿಸ್

ಪ್ರಥಮಾಶ್ವಾಸಂ
-೨-

(ಹಿಂದಿನ ಸಂಚಿಕೆಯಿಂದ ಮುಂದಕ್ಕೆ. . . .)
     ಮೇನಾಧಾರಂ ವಿನತಾ
     ಸೂನುವಿನೊಲ್ಸತ್ಪಥಾಶ್ರಯಂ ಸುಜನನೊಲಾ
     ಯ್ತಾನಗಮಸ್ತ್ರೀಕೃತ ಜಿತ
     ದಾನವನೊಲನಂತಕಟಕಭೂಷಿತಪಾದಂ          | ೯ |

     ಆ ಹಿಮಾಲಯ ಪರ್ವತವು ವೈನತೇಯನಂತೆ ಮೇನಾಧಾರವಾಗಿ (ಮೇನೆಯೆಂಬವಳ ಪತಿ, ಮತ್ತು ಮಾ+ಇನ= ಲಕ್ಷ್ಮೀಪತಿಯಾದ ವಿಷ್ಣುವಿನ ವಾಹನ) ಸಜ್ಜನನ ಹಾಗೆ ಸತ್ಪಥಾಶ್ರಯ (ದೇವತೆಗಳಿಗೆ ಮತ್ತು ಸಜ್ಜನರಿಗೆ ಆಶ್ರಯ). (ತ್ರಿಪುರಾಸುರಸಂಹಾರ ಕಾಲದಲ್ಲಿ ಶಿವನ) ಅಸ್ತ್ರವಾದ ವಿಷ್ಣುವಿನಂತೆ ಅಸಂಖ್ಯವಾದ ತೊಪ್ಪಲುಗಳಿಂದ ಭೂಷಿತವಾದ ಸಮೀಪವರ್ತಿ ಬೆಟ್ಟಗಳುಳ್ಳವನು. ವಿಷ್ಣುಪಕ್ಷದಲ್ಲಿ- ಆದಿಶೇಷನೆಂಬ ಕಾಲ್ಗಡಗದಿಂದ ಭೂಷಿತವಾದ ಪಾದವುಳ್ಳವನು.
ವ|| ಇಂತು ಹಿಮಾಚಲಂ ವಿರಾಜಿಸುತ್ತುಮಿರಲ್
     ಆ ಗಿರಿಯ ದಕ್ಷಿಣಾಶಾ
     ಭಾಗದೊಳುರೆ ಕರ್ಮಭೋಮುಸಂಜ್ಞೆಯಿನಧಿಕ
     ಶ್ರೀಗೆಡೆಯೆನಿಸಿ ಮನೋಹರ
     ಮಾಗಿರ್ಪುದು ಭರತಖಂಡಮನಘಕರಂಡಂ   | ೧೦ |

     ವ|| ಈ ರೀತಿ ಹಿಮಾಚಲ ಪರ್ವತವು ಶೋಭಿಸುತ್ತಿರಲಾಗಿ
     ಆ ಪರ್ವತದ ದಕ್ಷಿಣ ದಿಕ್ಕಿನಲ್ಲಿ ಕರ್ಮಭೂಮಿಯೆಂದೆನಿಸಿ ಹೆಚ್ಚು ಸಂಪತ್ತಿಗೆ ಆಶ್ರಯವಾಗಿ ಭರತಖಂಡವು ಪುಣ್ಯದ ಪೆಟ್ಟಿಗೆಯೆನಿಸಿ ಮನೋಹರವಾಗಿದೆ.
                                          
ವ|| ಇಂತೆಸೆವ ಭರತಖಂಡದ ತೆಂಕಣಾಶಾಭಾಗದೊಳ್          ನಾನಾವಿಧವರ್ಣಾಶ್ರಮಸುಖಸಂಪತ್ಸಮಾಜಕಾಸ್ಪದಮೆನಿಸಿ ಮೆರೆವ ಕನ್ಯಾಖಂಡಪ್ರದೇಶದೊಳ್
     ಅಗಣಿತತೀರ್ಥ ನದೀಜದ
     ನಗಪುಣ್ಯಾರಣ್ಯವಿಷಯಸುಕ್ಷೇತ್ರಸಮೂ
     ಹಗಳಿಗೆಡೆಯೆನಿಸಿ ಮೆಗೆ ಝಗ
     ಝಗಿಪುದು ಸಹ್ಯಾಚಲಂ ಮಹಾಸುಖಮೂಲಂ     | ೧೧

     |ವ|| ಈ ರೀತಿ ಶೋಭಿಸುವ ಭರತಖಂಡದ ದಕ್ಷಿಣಭಾಗದಲ್ಲಿ ಅನೇಕ ವರ್ಣಧರ್ಮಾಶ್ರಮಗಳ ಜನಸಮಾಜಕ್ಕೆ ಆಶ್ರಯವಾಗಿ ಮೆರೆಯುವ ಕನ್ಯಾಖಂಡ ಪ್ರದೇಶದಲ್ಲಿ
ಲೆಕ್ಕವಿಲ್ಲದ ತೀರ್ಥಗಳು, ನದಿಗಳು, ಪರ್ವತಗಳು, ಪುಣ್ಯಾರಣ್ಯಗಳಿರುವ ಪವಿತ್ರಕ್ಷೇತ್ರಗಳಿಗೆ ಆಶ್ರಯಭೂತವಾಗಿರುವ ಸಹ್ಯಾಚಲವು ಹೆಚ್ಚಿನ ಸುಖಕ್ಕೆ ಕಾರಣೀಭೂತವಾಗಿ ಮೆರೆಯುತ್ತಿದೆ.
ಆ ಸಹ್ಯಾದ್ರಿಯೊಳೊಪ್ಪುವ
     ದೇಶಂಗಳೊಳಧಿಕಮೆನಿಸಿ ನಿರುಪಮಲಕ್ಷ್ಮೀ
     ಕೋಶಂ ವಿಲತ್ಪುಣ್ಯನಿ
     ವೇಶಂ ಕರ್ಣಾಟಕದೇಶಮುರೆ ರಂಜಿಸುಗುಂ        | ೧೨ |

     ಆ ಸಹ್ಯಾದ್ರಿ ಭಾಗದಲ್ಲಿ ಮೆರೆಯುತ್ತಿರುವ ಅನೇಕ ದೇಶಗಳಲ್ಲಿ ಹೆಚ್ಚಿನದಾದ, ಅಸಮಾನ ಸಂಪತ್ತಿನಿಂದ ಕೂಡಿದ ಪುಣ್ಯದ ನೆಲೆಯಾದ ಕರ್ನಾಟಕ ದೇಶವು ಅಧಿಕವಾಗಿ ಕಂಗೊಳಿಸುತ್ತಿದೆ.
ಕೆರೆಯಿಂ ಕಾಳ್ಪುರದಿಂ ಕನತ್ಕುವಲಯಾಂಭೋಜಂಗಳಿಂ ಶೋಭಿಪೊ
ಳ್ಸರದಿಂ ಪುಷ್ಪಲತಾಪ್ರತಾನ ಲಸದಾರಾಮ ಪ್ರದೇಶಂಗಳಿಂ
ತೊರೆಯಿಂ ರಾಜಿಪ ಗಂಧಶಾಲಿವನದಿಂ ಕ್ರೀಡಾದ್ರಿಯಿಂ ಕಣ್ಗೆ ಭಾ
ಸುರಮಾಗಿರ್ದುದು ದೇಶಮುನ್ನತಸುಖಾವಾಸಂ ದಲೇಂ ವರ್ಣಿಪೆಂ                          | ೧೩ |

     ಆ ದೇಶವು ಕೆರೆಯಿಂದಲೂ, ಹಳ್ಳದಿಂದಲೂ, ನೈದಿಲೆ ತಾವರೆಯುಳ್ಳ ಸರೋವರದಿಂದಲೂ, ಹೂಬಳ್ಳಿಗಳಿಂದ ಮೆರೆಯುವ ಉದ್ಯಾನವನಗಳಿಂದಲೂ, ಹೊಳೆಯಿಂದಲೂ, ಭತ್ತದ ಹೊಲದಿಂದಲೂ, ಆಟದ ಬೆಟ್ಟಗಳಿಂದಲೂ, ಹೆಚ್ಚಿನ ಸುಖದ ನೆಲೆಯಾಗಿದೆ. ಇದನ್ನು ಏನೆಂದು ವರ್ಣಿಸಲಿ?
ವ|| ಮತ್ತಮದಲ್ಲದಾದೇಶಂ ಸ್ವರ್ಲೋಕದಂತೆ ಸುರಚಿರ ಸುರಭಿ ಸುಮನೋವೃಕ್ಷ ಪರಿಶೋಭಿತಮುಂ ಸುತ್ರಾಮನೋಲಗಶಾಲೆಯಂತೆ ಸುಧರ್ಮಾನ್ವಿತಮುಂ, ವಧೂಪಯೋಧರದಂತಗ್ರಹಾರ-ಮಾಲಾಲಂಕೃತಮುಂ, ಗಗನಮಂಡಲದಂತೆ ಭಾಸ್ವದ್ದ್ವ್ವಿಜರಾಜಾಭಿ ರಾಮಮುಂ, ಅಳಕಾನಗರದಂತಗಣ್ಯಪುಣ್ಯಜನಾದಿಷ್ಠಿತಮುಂ, ಸಮಾಸಚಕ್ರದಂತೆ ಬಹುವ್ರೀಹಿಸಮಾವೃತಮುಂ, ಪದ್ಮಪೀಠ-ನಂತನಂತನಿಗಮಾಶ್ರಯಮುಂ, ನಾರಾಯಣನಂತೆ ಸುದರ್ಶನೋ-ಪಸೇವ್ಯಮುಂ, ಮಹಾದೇವನಂತಚಲಿತದುರ್ಗಾಸ್ಪದಮುಮೆನಿಸಿ ವಿರಾಜಿಸುತಿರ್ದುದಂತು ಮಲ್ಲದೆಯುಂ-
     ಪುಸಿ ಕಳವು ಪಾದರಂ ಬೇ
     ವಸಮಟ್ಟುಳಿ ದಾಳಿ ಠೌಳಿಯಪಹೃತಿ ಮೋಸಂ
     ಪಿಸುಣನ್ಯಾಯಮೆನಿಪ್ಪೀ
     ಪೆಸರ್ಗಳ್ ಪೆಸರ್ಗೊಂಬೊಡಿಲ್ಲವಂತಾ ನಾಡೊಳ್   | ೧೪ |

     ವ|| ಇಷ್ಟು ಮಾತ್ರವಲ್ಲದೆ ಆ ದೇಶವು ಸುಂದರವಾದ ಪರಿಮಳಭರಿತವಾದ ಮನೋಹರ ವೃಕ್ಷಗಳಿಂದ ಕೂಡಿದ, ಸುಧರ್ಮ ಎಂಬ ಹೆಸರುಳ್ಳ ಇಂದ್ರನ ಓಲಗಶಾಲೆಯ ಹಾಗೆ ಸುಧರ್ಮದಿಂದ ಕೂಡಿದೆ. (ಸುಧರ್ಮ- ದೇವಸಭೆ ಮತ್ತು ಧರ್ಮ) ಮೇಲುಬದಿಯ ಹಾರ-ಮಾಲೆಗಳಿಂದ ಶೋಭಿಸುವ ವಧೂಸ್ತನದಂತೆ ಅಗ್ರಹಾರಗಳ ಸಾಲಿನಿಂದ ಶೋಬಿಸುತ್ತಿದೆ. ಹೊಳೆಯುವ ಚಂದ್ರನಿಂದ ಸುಂದರವಾದ ಆಕಾಶಮಂಡಲದಂತೆ ಪ್ರಕಾಶಿಸುವ ಬ್ರಾಹ್ಮಣಶ್ರೇಷ್ಠರ ವಿಹಾರಸ್ಥಾನವಾಗಿದೆ. ಅಸಂಖ್ಯಾತ ಯಕ್ಷರಿಂದ ಕೂಡಿದ ಅಲಕಾಪಟ್ಟಣದ ಹಾಗೆ ಲೆಕ್ಕವಿಲ್ಲದಷ್ಟು ಪುಣ್ಯಾತ್ಮರಿಂದ ಕೂಡಿದೆ. ಬಹುವ್ರೀಹಿ ಸಮಾಸವುಳ್ಳ ಸಮಾಸಚಕ್ರದ ಹಾಗೆ ತುಂಬಾ ಭತ್ತದಿಂದ ಕೂಡಿದೆ. ಅನಂತ ವೇದಗಳಿಗೆ ಆಶ್ರಯನಾದ ಬ್ರಹ್ಮನಂತೆ ಅನೇಕ ಆಶ್ರಯನೀಯವೂ ಆಗಿದೆ. ದುರ್ಗಾವಲ್ಲಭನಾದ ಮಹದೇವನಂತೆ ಸ್ಥಿರವಾದ ಕೋಟೆಗಳಿಂದ ಕೂಡಿದೆ. ಇಷ್ಟು ಮಾತ್ರವಲ್ಲದೆ
     ಸುಳ್ಳು, ಕಳ್ಳತನ, ಹಾದರ, ದಬ್ಬಾಳಿಕೆ, ಆಕ್ರಮಣ, ಮುತ್ತಿಗೆ, ಸೆಣಸಾಟ, ಅಪಹರಣ, ಮೋಸ, ಚಾಡಿ, ಅನ್ಯಾಯ ಎಂಬವುಗಳು ಹೆಸರು ಹೇಳುವುದಕ್ಕೂ ಆ ನಾಡಿನಲ್ಲಿಲ್ಲ.
ವ|| ಮತ್ತಮಂತುಮಲ್ಲದೆ
     ಪೊಡೆಯೆಂಬರ್ಶಾಲಿಯನಾ
     ರಡಿಯೆಂಬರ್ಷಟ್ಟದಾಳಿಯಂ ಕರಿಣಿಯುಮಂ
     ಪಿಡಿಯೆಂಬರಲ್ಲದೀಪರಿ
     ನುಡಿಯಾಲಿಪೊಡಿಲ್ಲ ಜನರೊಳಂತಾ ನಾಡೊಳ್     | ೧೫ |

     ವ|| ಮತ್ತೆ ಮಾತ್ರವಲ್ಲದೆ
    ಭತ್ತವನ್ನು ಪೊಡೆ ಎನ್ನುತ್ತಾರೆಯೇ ಹೊರತು, ಜನರನ್ನು ಹೊಡೆ ಎಂಬರ್ಥದಲ್ಲಿ ಆ ಶಬ್ದವನ್ನು ಬಳಸುವುದೇ ಇಲ್ಲ. ದುಂಬಿಗಳ ಸಮೂಹವನ್ನು ಆರಡಿ ಎನ್ನುತ್ತಾರೆ. ಹೆಣ್ಣಾನೆಯನ್ನು ಪಿಡಿ ಎನ್ನುತ್ತಾರೆ. ಈ ಶಬ್ದಗಳು ಬೇರೆ ಅರ್ಥದಲ್ಲಿ ಆ ನಾಡಿನಲ್ಲಿ ಇರುವುದಿಲ್ಲ.
     ಕಡೆಯೆಂಬರ್ದಧಿಮಥನದೊ
     ಳೊಡೆಯೆಂಬರ್ಭಕ್ಷ್ಯಭೇದದೊಳ್ ಕಬರಿಗಳೊಳ್
     ಮುಡಿಯೆಂಬರಲ್ಲದೀ ಬಿರು
     ನುಡಿ ಕನಸಿನೊಳಾದೊಡಂ ವಿಚಾರಿಪೊಡಿಲ್ಲಂ       | ೧೬ |

     ಮೊಸರು ಕಡೆಯುವುದನ್ನು ಕಡೆ ಎನ್ನುತ್ತಾರೆ. ಒಡೆ ಎಂಬುದು ಒಂದು ಭಕ್ಷ್ಯದ ಹೆಸರು. ಮುಡಿ ಎಂದರೆ ತುರುಬು ಮಾತ್ರ. ಇದರ ಹೊರತು ಕಡೆ, ಒಡೆ, ಮುಡಿ ಎಂಬ ಬಿರುನುಡಿಗಳು ಆ ನಾಡಿನಲ್ಲಿ ಕನಸಿನಲ್ಲಿಯೂ ಇಲ್ಲ.
     ಅಳಿಯಿಲ್ಲದಬ್ಜಮಬ್ಜಾ
     ವಳಿಯಿಲ್ಲದ ಸರಸಿ ಸರಸಿಯಿಲ್ಲದ ಸನ್ಮಂ
     ಜುಳನಂದನ ಮುರುನಂದನ
     ಕುಳಮಿಲ್ಲದ ಪೊಳಲ್ಗಳಿಲ್ಲವಂತಾ ನಾಡೊಳ್        | ೧೭ |

     ದುಂಬಿಯಿಲ್ಲದ ತಾವರೆ, ತಾವರೆಗಳಿಲ್ಲದ ಸರೋವರ, ಸರೋವರಗಳಿಲ್ಲದ ಉದ್ಯಾನವನ, ಉದ್ಯಾನವನಗಳಿಲ್ಲದ ಪಟ್ಟಣಗಳು ಆ ನಾಡಿನಲ್ಲಿಲ್ಲ.
ವ|| ಮತ್ತಮದಲ್ಲದೆ
     ಎಳಎಲರಿಂದೊಡೆದೊಸರ್ವು
     ಜ್ಜ್ವಲ ಧವಳೇಕ್ಷುಗಳ ಪಾಳಿ ಕಾಲ್ಗಳಿನೆತ್ತಂ
     ಬೆಳದಾ ಶಾಲಿವನಂ ಕಂ
     ಗೊಳಿಪುದು ಭೂವನಿತೆಯುಟ್ಟ ಪೊಂಬಟ್ಟೆಯವೋಲ್ | ೧೮ |

     ವ|| ಮತ್ತೆ ಅದಲ್ಲದೆ
     ಎಳೆಗಾಳಿಯಿಂದಲೇ ಒಡೆದು ರಸ ಸುರಿಸುವ ಬಿಳಿಕಬ್ಬುಗಳ ಸಾಲು ಅಲ್ಲಿದೆ. ನೀರ್ಗಾಲುವೆಗಳಿಂದ ಸುತ್ತಲೂ ಬೆಳೆದಿರುವ ಭತ್ತದ ಹೊಲವು, ಭೂಮಿ ಎಂಬ ಹೆಂಗಸು ಉಟ್ಟ ಬಂಗಾರದ ಬಟ್ಟೆಯ ಹಾಗೆ ಇದೆ.
ನೆರೆ ತಿಳಿದು ನಿಂದ ನೀರೊಳ್
     ತರದಿಂ ಮಾರ್ಪೊಳೆವ ಶಾಲಿಮಂಜರಿ ನಿಕರಂ
     ವರಭೂಸಾರತೆಯಿಂ ತಾ
     ನುರೆ ಬೇರೊಳ್ ಬೇರೆ ಫಲಿಸಿತೆಂಬವೊಲೆಸಗುಂ | ೧೯ |

     ತಿಳಿಯಾದ ನೀರಿನಲ್ಲಿ ಪ್ರತಿಬಿಂಬಿಸಿದ ಬತ್ತದ ತೆನೆಗಳ ಸಮೂಹವು ಸಾರವತ್ತಾದ ಭೂಮಿಯಲ್ಲಿ ಬೇರಿನಲ್ಲಿಯೂ ತೆನೆಬಂದ ಹಾಗೆ ಕಾಣುತ್ತದೆ.
ವ|| ಮತ್ತಮದಲ್ಲದೆ
     ಜಲಜಜನಮರ್ದಂ ಬೆಳ್ಳಿಯ
     ಕೊಳವಿಗಳೊಳ್ ತುಂಬಿ ಗಂಟನೊಂದಿಸಿ ಗರುಡಂ
     ತಿಳಿಯದೊಲವನಿಳೆಯೊಳ್ನೆಲೆ
     ಗೊಳಿಸಿದನೆನೆ ಮೆರೆದುದಮಳಪುಂಡ್ರೇಕ್ಷುವನಂ | ೨೦ |

     ವ|| ಮತ್ತೆ ಅದಲ್ಲದೆ           ಬ್ರಹ್ಮನು ಅಮೃತವನ್ನು ಬೆಳ್ಳಿಯ ಕೊಳವೆಗಳಲ್ಲಿ ತುಂಬಿಸಿ, ಗಂಟು ಮುಚ್ಚಿ, ಅಪಹರಿಸಲು ಬರುವ ಗರುಡನಿಗೆ ತಿಳಿಯದ ಹಾಗೆ ಈ ಭೂಮಿಯಲ್ಲಿ ಇಟ್ಟ ರೀತಿಯಲ್ಲಿ ಪಟ್ಟೆ ಕಬ್ಬುಗಳ ಹೊಲ ಅಥವಾ ತೋಟ ಕಾಣಿಸುತ್ತಿದೆ.
     ಹರಿಯೊರ್ಮೆಯಮರ್ದನಮರ
     ರ್ಗೆರೆದೊಡೆ ನವಸುಧೆಯನೆರೆದಪೆವು ನಿಮಗನಿಶಂ
     ನರರಿತ್ತ ಬನ್ನಿಮೆನುತುಂ
     ಕರೆವಂತಿರೆ ಮೊರೆವುವಿಕ್ಷುಯಂತ್ರಪ್ರಚಯಂ  | ೨೧ |

     ಹರಿಯು ಒಂದು ಸಲ ಮಾತ್ರ ದೇವತೆಗಳಿಗೆ ಅಮೃತವನ್ನು ನೀಡಿದ್ದಾನೆ, ನಿಮಗೆ ನಿತ್ಯವೂ ಹೊಸ ಅಮೃತವನ್ನು ಹೊಯ್ಯುತ್ತೇವೆ; ಮನುಷ್ಯರೆಲ್ಲರೂ ಬನ್ನಿ ಎಂದು ಕರೆಯುತ್ತಿರುವ ಹಾಗೆ ಕಬ್ಬಿನ ಗಾಣಗಳು ಶಬ್ದ ಮಾಡುತ್ತವೆ.
ವ|| ಮತ್ತಮದಲ್ಲದೆ
     ಮಿಂಚುವ ಪೊಸ ನೆಲ್ದೆನೆಗಳ
     ಗೊಂಚಲ್ಗಳನಡಸಿ ಬಾಯ್ಗಳೊಳ್ ನಲಿಯುತ್ತುಂ
     ಚಂಚುಗಳಿನಲೆವ ಗಿಳಿಗಳ
     ಸಂಚಯಮಂ ಸೋವುತಿರ್ಪರುರೆ ಪಾಮರಿಯರ್ | ೨೨ |

     ವ|| ಮಾತ್ರವಲ್ಲದೆ
     ಹೊಳೆಯುವ ಹೊಸಭತ್ತದ ತೆನೆಗಳ ಗೊಂಚಲುಗಳನ್ನು ಬಾಯೊಳಗೆ ಕಚ್ಚಿಕೊಂಡು ಹಾರಾಡುವ ಗಿಳಿಗಳ ಸಮೂಹವನ್ನು ಹಳ್ಳಿಯ ಹೆಂಗಸರು ಓಡಿಸುತ್ತಿರುತ್ತಾರೆ.
    ಸಲೆ ಸೋವ ಪಾಮರಿಯರು
     ಜ್ಜ್ವಲಿಪಧರವನೀಕ್ಷಸುತ್ತೆ ಪಣ್ತುರುಬಿಂಬೀ
     ಫಲವೆಂದು ಕರ್ದುಕಬಗೆದವ
     ರ್ಗಳ ಸಿರಿಮೊಗಕೆರಪುವಲ್ಲಿ ಗಿಳಿಗಳ ಬಳಗಂ        | ೨೩ |

     ಹಕ್ಕಿಗಳನ್ನು ಓಡಿಸುವ ರೈತಹೆಂಗಸರ ಹೊಳೆಯುವ ತುಟಿಯನ್ನು ನೋಡಿ ಮಾಗಿದ ತೊಂಡೆಹಣ್ಣೆಂದು ಭ್ರಮಿಸಿ, ಗಿಳಿಗಳ ಬಳಗವು ಕಚ್ಚುವುದಕ್ಕಾಗಿ ಅವರ ಸುಂದರಮುಖಕ್ಕೆ ಎರಗುತ್ತದೆ.
. . . . . . .ಮುಂದುವರೆಯುವುದು.

*****************************
-ಪುಟಗಳು 8,9-
*****************************
*****************

UÀªÀÄ£ÀPÉÌ
     PÀ«QgÀtzÀ ¸ÀzÀÄzÉñÀ, ¸ÀzÁ±ÀAiÀÄUÀ½UÉ ¥ÀÆgÀPÀªÁzÀ PÀxÉ , PÀªÀ£À, ¯ÉÃR£À, EvÁå¢UÀ½UÉ DºÁ£À«zÉ. ¸ÀPÁ®zÀ°è PÀ¼ÀÄ»¹PÉÆqÀ®Ä PÉÆÃjzÉ. ¹Ã«ÄvÀ ¥ÀÄl¸ÀASÉåUÀ¼À PÁgÀt QgÀħgÀºÀUÀ½UÉ DzÀåvɬÄzÉ.
******************

¥ÁAiÉÆÃdPÀvÀé
      ¥ÀwPÉAiÀÄ ¸ÀAaPÉUÀ¼À£ÀÄß ¥ÁAiÉÆÃf¸À®Ä CªÀPÁ±À«zÉ. gÀÆ. 5000/- ªÀÄvÀÄÛ ªÉÄîlÄÖ ªÉƧ®UÀÄ ¤ÃrzÀ°è CªÀgÀ£ÀÄß ¸ÀAaPÉAiÀÄ ¥ÁAiÉÆÃdPÀgÉAzÀÄ ¥ÀjUÀt¹ ¥ÀwæPÉAiÀÄ°è CªÀgÀ PÀÄlÄA§zÀ ¥ÀÆtð  ¥ÀÄlzÀ ¨ÁªÀavÀæ ¥ÀPÀn¹ ¸Àäj¸À¯ÁUÀĪÀÅzÀÄ. ¥ÁAiÉÆÃdPÀgÀÄ ªÀÄÄAzÉ §gÀ®Ä PÉÆÃjzÉ.
¥ÀxÀªÀÄ ¸ÀAaPÉAiÀÄ ¥ÁæAiÉÆÃdPÀgÀÄ:
PÉ.«. C£ÀAvÀ ªÀÄvÀÄÛ PÀÄlÄA§,
£ÉÆÃj¸ï mË£ï, ¦J- 19403,
CªÉÄjPÁ ¸ÀAAiÀÄÄPÀÛ ¸ÀA¸Á£À.

F ¸ÀAaPÉAiÀÄ ¥ÁAiÉÆÃdPÀgÀÄ:
ºÉZï. J¸ï. ¥ÀÄlgÁdÄ ªÀÄvÀÄÛ PÀÄlÄA§,
²æà PÀȵÀÚ ¨ÉÃPÀj, eÁªÀUÀ¯ï, CgÀ¹PÉgÉ vÁ., ºÁ¸À£À f¯Éè.
ªÀÄÄA¢£À ¸ÀAaPÉAiÀÄ ¥ÁAiÉÆÃdPÀgÀÄ:
¤ÃªÉà EgÀ§ºÀÄzÉ?
* * * * *

ªÀÄ£À«
     EzÀÄ PÀ« ªÀA±À¸ÀgÀ PÀÄlÄA§zÀ ºÁUÀÆ §AzÀÄ §¼ÀUÀzÀªÀgÀ ¥ÀwPÉAiÀiÁVzÀÄÝ, F ¥ÀwPÉUÉ PÀÄlÄA§zÀªÀgÉà DzÁgÀ. FUÁUÀ¯Éà ¤zÁðgÀªÁVgÀĪÀAvÉ ¥Àw PÀÄlÄA§zÀ ¥Àw WÀlPÀ¢AzÀ ªÁ¶ðPÀ gÀÆ. 500/- C£ÀÄß ªÀAwPÉAiÀiÁV ¸ÀAUÀ»¸À®Ä GzÉò¹zÀ «µÀAiÀÄ w½zÀzÉà DVzÉ.  F ºÀtªÀ£ÀÄß ¥ÀwPÉUÉ ªÀiÁvÀªÀ®zÉ PÀÄlÄA§UÀ¼À ªÁ¶ðPÀ ¸ÀªÉÄäüÀ£À £ÀqɸÀ®Ä AiÀiÁgÀÆ ªÀÄÄAzÉ §gÀ¢zÀÝ ¸ÀAzÀ¨ÀðzÀ°è ¸ÀºÀ §¼À¸À®Ä GzÉò¹gÀĪÀÅzÀjAzÀ J®gÀ ¸ÀºÀPÁgÀ PÉÆÃjzÉ. ªÁ¶ðPÀªÁV gÀÆ. 500/- ¤ÃqÀĪÀÅzÀÄ PÀµÀªÁUÀ¯ÁgÀzÁzÀgÀÆ, EµÉà PÉÆqÀ¨ÉÃPÉAzÀÄ MvÁAiÀÄ«gÀĪÀÅ¢®è. ¥ÁªÀwUÉ gÀ¹Ã¢ ¤ÃqÀ¯ÁUÀĪÀÅzÀÄ.
     PÀ«ªÀÄ£ÉvÀ£ÀzÀ ºÉtÄÚ ªÀÄPÀ¼ÀÄ ¸ÉÃjgÀĪÀ §¼ÀUÀzÀ PÀÄlÄA§UÀ¼ÀªÀgÀÄ ºÁUÀÆ »vÉʶUÀ¼ÀÄ ¸Àé EZɬÄAzÀ ¸ÀºÀPÁgÀ ¤ÃrzÀ°è ¸ÁUÀvÀ«zÉ.
     ¸ÀAUÀºÀªÁzÀ ªÉƧ®UÀ£ÀÄß ²æà ¸Á.PÀ. PÀȵÀªÀÄÆwð ªÀÄvÀÄÛ ²æà PÀ«¸ÀÄgÉñÀgÀ ºÉ¸Àj£À°è ¨ÉAUÀ¼ÀÆj£À §£À±ÀAPÀj 2£ÉAiÀÄ ºÀAvÀzÀ ¹ArPÉÃmï ¨ÁåAPï£À ±ÁSÉAiÀÄ°è dAn SÁvÉAiÀÄ°è  dªÀiÁ Ej¹, ¸À«Äw ¤zÁðgÀ ¥ÀqÉzÀÄ ªÉZÀÑ ªÀiÁqÀ¯ÁUÀĪÀÅzÀÄ. SÁvɸÀA. 04782010037650   DVzÀÄÝ, F SÁvÉUÉ £ÉÃgÀªÁV dªÀiÁ ªÀiÁqÀ®Æ CªÀPÁ±À«zÉ. DzÁAiÀÄ ªÉZÀzÀ «ªÀgÀUÀ¼À£ÀÄß ¥ÀwPÉAiÀÄ°è ¥ÀPÀn¸À¯ÁUÀÄwzÉ. ¥Àj²Ã®£ÉUÀÆ CªÀPÁ±À«zÉ.
     ¸ÀAUÀºÀªÁUÀĪÀ ªÉƧ®UÀÄ ¸ÀzÀÄzÉñÀPÉÌ/ ¸ÀªÀiÁdPÁAiÀÄðPÉÌ ªÀiÁvÀæ §¼ÀPÉAiÀiÁUÀĪÀÅzÀjAzÀ ªÀÄ£ÉUÀ¼À°è ±ÀĨÀPÁAiÀÄð £ÀqÉAiÀÄĪÀ ªÀÄvÀÄÛ  EvÀgÀ ¸ÀAzÀ¨ÀðUÀ¼À°è ºÁUÀÆ »jAiÀÄgÀ £É£À¦UÁV ‘ªÀÄAUÀ¼À¤¢ü’ ºÉ¸Àj£À°è zÉÃtUÉ ¤ÃqÀ§ºÀÄzÀÄ.
* * * * *

¸ÁxÀðPÀ
     °AUÀtÚ PÀ«AiÀĪÀjAzÁgÀA©¹ CªÀgÀ ªÀA±ÀzÀ EzÀĪÀgÉV£À ¸ÁzÀPÁ PÀÈwUÀ¼À£ÀÄß, ¸ÁzÀ£ÉUÀ¼À£ÀÄß D¸ÀPÀÛ NzÀÄUÀjUÉ ¤gÀAvÀgÀªÁV ¤ÃqÀÄvÁÛ- PÀ«ªÀA±ÀzÀ vÀ¯ÉªÀiÁgÀÄUÀ¼À ¥ÀgÀ¸ÀgÀ ¥ÀjZÀAiÀÄ C£ÀħAzÀUÀ¼À£ÀÄß ¨É¼É¸ÀÄvÀÛ §gÀĪÀ F µÁuÁä¹PÀ ¥ÀwPÉAiÀÄ ¥ÀæPÀluÉ vÀÄA¨Á OavÀå¥ÀÆtðªÁzÀÄzÀÄ. “gÀ« PÁtzÀ£ÀÄß PÀ« PÀAqÀ”; ¸ÀÆAiÀÄð£À «±ÀéªÁå¦ QgÀtUÀ¼ÀÄ J®ªÀ£ÀÆß PÁt§®ªÀÅ. DzÀgÉ PÀ«AiÀÄ HºÁvÀäPÀ zÀȶAiÀiÁzÀgÉÆà gÀ«AiÀÄÄ PÁt¯ÁUÀzÀ£ÀÄß PÀÆqÁ PÀAqÀÄ ಪ್ರPÁ±ÀPÉÌ vÀgÀ§ಲ್ಲುzÀÄ. F zÀȶ¬ÄAzÀ F ¥ÀwPÉUÉ “PÀ«QgÀt” vÀÄA§ ¸ÁxÀðPÀªÁzÀ ºÉ¸ÀgÀÄ.
     PÀ« ªÉA. £ÁUÀgÁeï ªÀÄvÀÄÛ PÀ« ªÉA.¸ÀÄgÉñïgÀªÀgÀ F PÀ£ÀßqÀ ¸Á»vÀå ¸ÉÃªÉ ¤gÀAvÀgÀªÁV ªÀÄÄ£ÀßqÉAiÀÄÄvÁÛ AiÀıÀ¹éAiÀiÁUÀ°.
       -ºÀjºÀgÀ¥ÀÄgÀ ©. ¸ÀħæºÀätåA, ¸ÀA¥ÁzÀPÀgÀÄ,
¸ÀAiÀÄA ಪ್ರPÁ±À, DzÁåwäPÀ-zÁ«ÄðPÀ ªÀiÁ¸À¥ÀwæPÉ.

***

ಅಭಿನಂದನೆ
     GvÀÛªÀÄ Gದ್ದೇñÀPÉÌ §¼À¸À®Ä ¸ÀÆa¹ ²æà J¸ï.PÉ. gÁªÀÄgÁAiÀÄgÀ ªÀÄUÀ ²æà C±ÀévÀÜ¥Àæ¸Ázï, ¨ÉAUÀ¼ÀÆgÀÄ EªÀgÀÄ gÀÆ. 10000/- ªÀÄvÀÄÛ ²æêÀÄw ¸Àħâ®PÀëöäªÀÄä ¸ÀħâgÁAiÀÄgÀÄ, ¨ÉAUÀ¼ÀÆgÀÄ EªÀgÀÄ gÀÆ. 5000/- ¤ÃrzÀÄÝ SÁvÉUÉ dªÀiÁ ªÀiÁqÀ¯ÁVzÉ. F ªÉƧ®UÀ£ÀÄß AiÉÆÃUÀå GzÉÝñÀPÉÌ zÁ¤UÀ½UÉ w½¹ «¤AiÉÆÃV¸À¯ÁUÀĪÀÅzÀÄ. EªÀgÀÄUÀ¼À ¸ÀªÀiÁdªÀÄÄT PÀ¼ÀPÀ½UÉ Cಭಿ£ÀAzÀ£ÉUÀ¼ÀÄ. -¸ÀA.

**********************************  
-ಪುಟ10-   
**********************************                                     

ಕೆಳದಿ ಕವಿಮನೆತನದ ಸಮಕಾಲೀನರು-೨ 
ಸಾಗರದ ಕವಿ ಕೃಷ್ಣಮೂರ್ತಿ - ಅನಸೂಯಮ್ಮ

----------------------------------------------------------
     ಶ್ರೀ ಸಾ.ಕ. ಕೃಷ್ಣಮೂರ್ತಿಯವರು ಕವಿ ಮನೆತನದ ಏಳನೆಯ ಪೀಳಿಗೆಗೆ ಸೇರಿದ ಹಿರಿಯರು. ಸಾತ್ವಿಕ ಜೀವನ ನಡೆಸುತ್ತಿರುವ ಈ ಹಿರಿಯರು ಕವಿ ಕುಟುಂಬಗಳ ಒಳ್ಳೆಯ ಕಾರ್ಯಗಳಿಗೆ ಪ್ರೇರಕ ಮತ್ತು ಮಾರ್ಗದರ್ಶಕರಾಗಿದ್ದಾರೆ.  ೧೧-೦೩-೦೯ರಂದು ೮೨ನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿರುವ  ಇವರ ಪರಿಚಯ ಲೇಖನ ಬರೆದಿರುವರು ವಿದ್ವಾನ್ ಡಾ. ಕೆ. ಕೃಷ್ಣಜೋಯಿಸ್, ಎಂ.ಎ., ಬಿ.ಎಡ್.ರವರು ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಂಶುಪಾಲರು. ಬೆಂಗಳೂರಿನಲ್ಲಿ ನೆಲೆ ನಿಂತಿರುವ ಇವರು ಉತ್ತಮ ಬರಹಗಾರರು, ವಾಗ್ಮಿಗಳು. ಇವರ ತಾಯಿಯ ತಮ್ಮನವರೇ ಶ್ರೀ ಕೃಷ್ಣಮೂರ್ತಿಯವರು. 
ಶ್ರೀ ಕೃಷ್ಣಮೂರ್ತಿಯವರ ವಿಳಾಸ: ಶಶಿಕಿರಣ, ನಂ. ೧೦೦೧, ೧೫ನೆಯ ಅಡ್ಡರಸ್ತೆ, ಬನಶಂಕರಿ- ೨ನೆಯ ಹಂತ, ಬೆಂಗಳೂರು -೫೬೦೦೭೧. ದೂ. ೦೮೦- ೨೬೭೧೦೨೦೫
ಲೇಖಕರ ವಿಳಾಸ: ಡಾ. ಕೆ.ಕೃಷ್ಣಾಜೋಯಿಸ್,   ನಂ. ೧೨೨೦, ಶ್ರೀವತ್ಸ, ೧೨ನೆಯ ಅಡ್ಡರಸ್ತೆ, ಗಿರಿನಗರ- ೨ನೆಯ ಹಂತ, ಬೆಂಗಳೂರು- ೫೬೦೦೮೫. (ದೂ. ೦೮೦-೨೬೪೨೧೦೭೪). -ಸಂ.

------------------------------------------------------------
     ಕೆಳದಿ ಸಂಸ್ಥಾನದಲ್ಲಿ ಪ್ರಸಿದ್ಧವಾದವುಗಳು ಜೋಯಿಸರ ಮತ್ತು ಕವಿ ಮನೆತನಗಳು. ಜೋಯಿಸರ ಮನೆತನ ಕೆಳದಿನಾಯಕರ ರಾಜ್ಯ ಕಟ್ಟಲು ಸಹಾಯಕವಾಗಿದ್ದರೆ ಕವಿ ಮನೆತನ ಕಲೆ, ಸಾಹಿತ್ಯ, ಸಂಗೀತ, ಕವಿತ್ವರಚನೆ ಮೊದಲಾದ ಕೆಳದಿ ಸಂಸ್ಥಾನದ ಸಂಸ್ಕೃತಿಯನ್ನು ಬೆಳಸುವುದಾಗಿದೆ. ಇದಕ ಕೆಳದಿ ನೃಪವಿಜಯ ವೆಂಬ ಗ್ರಂಥವನ್ನು ರಚಿಸಿದ ಲಿಂಗಣ್ಣ ಕವಿಯೇ ಮೂಲ. ಈ ಮನೆತನದಲ್ಲಿ ಕವಿ ರಾಮಣ್ಣ, ವೆಂಕಣ್ಣ ಹಾಗೂ ಲಿಂಗಣ್ಣ ಇವರುಗಳು ಪ್ರಸಿದ್ಧರಾದವರು. ಯದ್ಯಪಿ ಇವರುಗಳು ಸಂಸ್ಥಾನದ ಪ್ರಸಿದ್ಧ ಸ್ಥಳವಾದ ಸಾಗರದವರಾಗಿದ್ದರೂ (ಕೆಳದಿ ನೃಪವಿಜಯದಲ್ಲಿ ಸಾಗರವು ಸದಾಶಿವಸಾಗರವೆಂದು ಉಲ್ಲೇಖಿಸಲಾಗಿದೆ) ಕಾಲಕ್ರಮೇಣ ವಿದ್ಯಾಭ್ಯಾಸ ಹಾಗೂ ಜೀವನ ನಿರ್ವಹಣೆಯಿಂದಾಗಿ ಒಬ್ಬೊಬ್ಬರು ಒಂದೊಂದು ಕಡೆ ನೆಲೆಸಿದರು. ಶ್ರೀ ರಾಮಣ್ಣನವರು ಹಾಗೂ ಮಕ್ಕಳು ಕೆಳದಿಯಲ್ಲಿಯೂ, ಶ್ರೀ ವೆಂಕಣ್ಣಯ್ಯನವರ ಮಕ್ಕಳು ಶಿವಮೊಗ್ಗ, ಕೊಪ್ಪಗಳಲ್ಲಿಯೂ, ಶ್ರೀ ಲಿಂಗಣ್ಣನವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು ಸೇರಿದ್ದರಿಂದಲೂ, ಕಾಲಕ್ರಮೇಣ ಸರ್ಕಾರಿ ಕೆಲಸದಲ್ಲಿದ್ದುದರಿಂದ ಅವರ ಮಕ್ಕಳೂ ಸಹ ಬೆಂಗಳೂರಿನಲ್ಲಿಯೇ ನೆಲೆಸಿದರು. ಶ್ರೀ ಲಿಂಗಣ್ಣಯ್ಯವರು ಚಿತ್ರರಾಮಾಯಣ, ಚಿತ್ರಭಾಗವತ, ಭಗವದ್ಗೀತೆ ಲಲಿತಾತ್ರಿಶತಿ, ಮಾರುತೀಸ್ತುತಿ ಇವುಗಳನ್ನು ಚಿತ್ರಪಟದಲ್ಲಿ ದೇವನಾಗರೀ ಲಿಪಿಯಲ್ಲಿ ಕಲಾತ್ಮಕವಾಗಿ ರಚಿಸಿದ್ದಾರೆ. ಈಗಲೂ ಇವುಗಳನ್ನು ನೋಡಬಹುದು. ಅಲ್ಲದೆ ಇನ್ನೂ ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ಇವರು ವೀಣೆ ಹಾಗೂ ಸಂಗೀತದಲ್ಲಿ ಪ್ರಾವೀಣ್ಯತೆ ಪಡೆದಿದ್ದರು.
     ಶ್ರೀ ಲಿಂಗಣ್ಣಯ್ಯನವರ ಸಂಸಾರ ದೊಡ್ಡದು. ಅವರಿಗೆ ಶ್ರೀಯತರಾದ ಎಸ್.ಕೆ. ನಾರಾಯಣರಾವ್, ಎಸ್.ಕೆ. ಕೃಷ್ಣಮೂರ್ತಿ, ಎಸ್.ಕೆ. ರಾಮರಾವ್ ಎಂಬ ಮೂವರು ಗಂಡು ಮಕ್ಕಳು ಹಾಗೂ ಶ್ರೀಮತಿಯರಾದ ಮುತ್ತಮ್ಮ, ಮೂಕಮ್ಮ, ಜಾನಕಮ್ಮ, ಸರಸ್ವತಮ್ಮ, ಸುಬ್ಬಲಕ್ಷ್ಮಮ್ಮ, ನಾಗರತ್ನಮ್ಮ, ಪದ್ಮಾವತಮ್ಮ ಮತ್ತು ಗಿರಿಜಮ್ಮ ಎಂಬ ಎಂಟು ಜನ ಹೆಣ್ಣುಮಕ್ಕಳೂ ಇದ್ದರು. ಲಿಂಗಣ್ಣಯ್ಯನವರ ಅಕ್ಕ ಮತ್ತು ಮಗಳು ಕೆಳದಿ ಜೋಯಿಸರ ಸಂಬಂಧ ಮಾಡಿದ್ದು, ಕವಿ ಹಾಗೂ ಜೋಯಿಸರ ಸಂಬಂಧ ಹಿಂದಿನಿಂದಲೂ ಮುಂದುವರೆಯುತ್ತಿದೆ. ಗಂಡುಮಕ್ಕಳಲ್ಲಿ ಮೊದಲಿನ ಇಬ್ಬರೂ ತಂದೆಯಂತೆ ವೀಣಾಭ್ಯಾಸಮಾಡಿ ಸಂಗೀತದಲ್ಲಿ ಪ್ರೌಢಿಮೆ ಪಡೆದಿದ್ದಾರೆ. ಮೂರನೆಯವರು ವೇದಾಂತಿಗಳು.
     ಇವರ ಎರಡನೇಮಗನೇ ಸಾಗರದ ಕವಿ ಕೃಷ್ಣಮೂರ್ತಿ. ಇವರು  ದಿನಾಂಕಃ ೧೧-೩-೧೯೨೮ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದ್ದು ಅಲ್ಲಿಯೇ ವಿದ್ಯಾಭ್ಯಾಸ ಮಾಡಿದರು. ಇವರ ತಂದೆಯಿಂದ ರಚಿಸಲ್ಪಟ್ಟ ಭೂಪಟಗಳು ಹಿಂದಿನ ಮೈಸೂರು ರಾಜ್ಯದ ಎಲ ಶಾಲೆಗೂ ಸರ್ಕಾರದ ವತಿಯಿಂದ ವಿತರಿಸಲ್ಪಡುತ್ತಿದ್ದು ಆ ವೃತ್ತಿಯಲ್ಲಿಯೇ ಮಗನು ಮುಂದುವರೆಯಬೇಕೆಂಬ ಆಸೆ ಅವರ ತಂದೆಯದಾಗಿತ್ತು. ಅಲ್ಲದೆ ತಂದೆಗೆ ಅಚ್ಚುಮೆಚ್ಚಿನ ಮಗನಾಗಿದ್ದರು. ಮನೆಯ ದೊಡ್ಡ ಸಂಸಾರ, ತಂದೆಯ ಆಸೆ ಇವುಗಳಿಂದಾಗಿ ಕೃಷ್ಣಮೂರ್ತಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲಾಗಲಿಲ್ಲ. ತಂದೆ ಸುಮಾರು ೬೩ ರ ವಯಸ್ಸಿನಲ್ಲಿ ಕಾಲವಾದರು.  ಮನೆಯ ಜವಾಬರಿಯನ್ನು ಸ್ವಲ್ಪ ಮಟ್ಟಿಗಾದರೂ ನಿರ್ವಹಿಸಬೇಕೆಂದು ಬಿನ್ನಿಮಿಲ್ಲಿನಲ್ಲಿ ಕೆಲಸಕ್ಕೆ ಸೇರಿ, ಬೆರಳಚ್ಚುಗಾರರು, ಶೀಘ್ರಲಿಪಿಕಾರರು, ಸೆಕ್ರೆಟರಿ, ಮ್ಯಾನೇಜ್‌ಮೆಂಟ್ ಸ್ಟ್ಯಾಫ್, ಸ್ಟೋರ್ಸ್ ಆಫೀಸರ್, ಹೀಗೆ ನಾನಾ ಹುದ್ದೆಗಳಲ್ಲಿ ಕೆಲಸನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ನಿವೃತ್ತರಾಗಿದ್ದರೂ ಯುವಕರಂತೆ ಬನಶಂಕರಿಯ ದೇವಗಿರಿ ಶ್ರೀವೆಂಕಟೇಶ್ವರ ದೇವಾಲಯದ ಲೈಫ್‌ಟ್ರಸ್ಟಿಯಾಗಿದ್ದಾರೆ. ಅಲ್ಲದೆ ಇದೇ ದೇವಸ್ಥಾನದಲ್ಲಿ ಖಜಾಂಚಿಯಾಗಿಯೂ ಕೆಲಸನಿರ್ವಹಿಸಿದ್ದಾರೆ. ಚಿನ್ಮಯ ಮಿಷನ್ನಿನ ಬೋಡ್ ಸದಸ್ಯರಾಗಿಯೂ, ಸಂಗೀತದಲ್ಲಿ ಆಸಕ್ತಿ ಇರುವುದರಿಂದಲೂ, ವೀಣೆಯ ಅಭಸವಾಗಿರುವುದರಿಂದಲೂ ದೇವಗಿರಿ ಶ್ರೀವೆಂಕಟೇಶ್ವರ ದೇವಸ್ಥಾನದ ಸಂಗೀತ ಕಮಿಟಿಯಲ್ಲಿದ್ದು ಸುತ್ತಮುತ್ತಲ ಜನರಿಗೆ ಇಂಪಾದ ಸಂಗೀತವನ್ನು ದೇವಸ್ಥಾನದ ಮೂಲಕ ಒದಗಿಸುತ್ತಿರುತ್ತಾರೆ.
     ಅಲ್ಲದೆ ಇವರಿಗೆ ಆಧ್ಯಾತ್ಮಿಕದಲ್ಲಿಯೂ  ವಿಶೇಷವಾದ ಆಸಕ್ತಿ ಇರುವುದರಿಂದ ಸಂಗೀತದ ಜೊತೆಗೆ ದೇವಸ್ಥಾನದ ಮೂಲಕ ವೇದಾಂತದ ಉಪನ್ಯಾಸಗಳನ್ನೂ ಏರ್ಪಾಟು ಮಾಡುವ ಜವಾಬ್ದಾರಿ ಹೆತ್ತಿದ್ದಾರೆ. ಇವರ ಎರಡು ಕಣ್ಣುಗಳೋ ಎಂಬಂತೆ ಇಬ್ಬರು ಗಂಡುಮಕ್ಕಳೂ (ಚಿ|| ಪ್ರಕಾಶ್ ಮತ್ತು ಚಿ|| ಗೋಪಿನಾಥ್) ಹಾಗೂ ಮನೆಯವರೆಲ್ಲರೂ ಅವರ ಕಾರ್ಯದಲ್ಲಿ ಉತ್ಸಾಹ ತುಂಬುತ್ತಿರುತ್ತಾರೆ.
     ಇವರ ಧರ್ಮಪತ್ನಿ ಶ್ರೀಮತಿ ಅನಸೂಯಾರವರು ಹೆಸರಿಗೆ ಅನ್ವರ್ಥರಾಗಿದ್ದು ೧೯೩೩ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಶ್ರೀ ವೆಂಕಟಾಚಲಯ್ಯ ಹಾಗೂ ಶ್ರೀಮತಿ ಮೀನಾಕ್ಷಮ್ಮನವರ ಚತುರ್ಥಪುತ್ರಿಯಾಗಿ ಜನ್ಮ ತಾಳಿ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು. ಬನಶಂಕರಿ ಎರಡನೇಹಂತದ ಮಹಿಳಾಮಂಡಳಿಯ ಸಂಸ್ಥಾಪಕರಲ್ಲೊಬ್ಬರಾಗಿ ಮಹಿಳೆಯರ ಉನ್ನತಿಗಾಗಿ ದುಡಿದರು. ಮಂಡಳಿಗೆ ಸಾರ್ವಜನಿಕರ ಸಹಕಾರದಿಂದ ಒಂದು ನಿವೇಶನ ದೊರಕಲು ಸಾಹಸ ಮಾಡಿ ಯಶಸ್ವಿಯಾದರು. ಬಹಳಕಾಲ ಮಂಡಳಿಯ ಖಜಾಂಚಿಯಾಗಿ ಕಟ್ಟಡ ಕಟ್ಟಿಸಿ ಹೆಲಿಗೆ, ಸಂಗೀತ ಮೊದಲಾದವುಗಳನ್ನು ಆಸಕ್ತಿ ಇರುವ ಹೆಣ್ಣು ಮಕ್ಕಳಿಗೆ ಮಂಡಳಿಯ ಮೂಲಕ ಸಹಾಯ ಮಾಡಿದರು, ಹೀಗೆ ಸಮಾಜ ಸೇವಾಕರ್ತೆಯಾಗಿ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಜೀವನ ಪರ್ಯಂತ ದುಡಿದು  ೨೮-೨-೨೦೦೬ ರಂದು ಕೀರ್ತಿಶೇಷರಾದರು.
     ಈ ದಂಪತಿಗಳು ತಮ್ಮ ಹಿರಿಯರ ಆಧ್ಯಾತ್ಮಿಕ ಮೇಲ್ಪಂಕ್ತಿಯನ್ನು ಅನುಸರಿಸುತ್ತಿದ್ದರು. ಶ್ರೀ ಕೃಷ್ಣಮೂರ್ತಿಯವರು ತಂದೆಯಂತೆಯೇ ಇಳಿವಯಸ್ಸಿನಲ್ಲಿ ಅವರು ಮಾಡುತ್ತಿದ್ದ ಪ್ರಾರ್ಥನೆಯನ್ನೇ ಈಗಲೂ ಅನುಸರಿಸುತ್ತಿದ್ದಾರೆ. ಆ ಪ್ರಾರ್ಥನೆಯ ಸಾರಾಂಶವನ್ನು ಹೀಗೆ ಸಂಗ್ರಹಿಸಲಾಗಿದೆ:
     "ಓ ಪರಮಾತ್ಮನೇ, ನನಗೆ ವಯಸ್ಸಾಗುತ್ತಿದೆ. ಆದ್ದರಿಂದ ಮಾತು ಕಡಿಮೆ ಮಾಡುವಂತೆಮಾಡು, ಪ್ರತಿ ವಿಷಯದಲ್ಲೂ ತಲೆಹಾಕದಂತೆ ಮಾಡು. ಎಲ್ಲರ ತಪ್ಪನ್ನೂ ತಿದ್ದುವ ಕಾಳಜಿ ನನಗೆ ಬೇಡ. ಎಲ್ಲರ ವಿಚಾರಗಳನ್ನು ತಿಳಿದುಕೊಳ್ಳುವುದೂ ಬೇಡ. ಇಂತಹ ಬುದ್ಧಿ ನನಗೆ ಕೊಡು. ಇತರರ ನೋವು ನಲಿವುಗಳ ಬಗ್ಯೆ ನನಗೆ ಅನುಕಂಪ ಬರಲಿ. ಏಕೆಂದರೆ ನನ್ನ ನೋವುಗಳೇ ದಿನೇದಿನೇ ಹೆಚ್ಚಾಗಬಹುದು, ಅದನ್ನು ಇತರರೊಡನೆ ಆದಷ್ಟೂ ಕಡಿಮೆ ಹಂಚಿಕೊಳುತ್ತೇನೆ. ಅನೇಕವೇಳೆ ನನ್ನ ಅಭಿಪ್ರಾಯಗಳೂ ತಪ್ಪಾಗಬಹುದೆಂಬ ಅರಿವೂ ನನಗಾಗಲಿ, ಹಸನ್ಮುಖಿಯಾಗಿರಲು ಕರುಣಿಸು. ನಾನೇನೂ ಮಹಾತ್ಮನಲ್ಲ. ಆದರೆ ಸಪ್ಪೆಮುಖದಿಂದ ಖಿನ್ನನಾಗಿ ಬಾಳಲಾರೆ. ನನ್ನನ್ನು ವಿಚಾರವಂತನನ್ನಾಗಿ ಮಾಡು. ಆದರೆ ಭಾವನಾಜೀವಿಯಾಗಿಸಬೇಡ. ಇತರರಿಗೆ ಸಹಾಯಕನಾಗಿ ಬಾಳುತ್ತೇನೆ, ಆದರೆ ಇತರರನ್ನು ವತ್ತಾಯ ಮಾಡುವುದಿಲ್ಲ, ಸ್ವಾವಲಂಬಿಯಾಗಿರುತ್ತೇನೆ. ಇತರರ ಔದಾರ್ಯಕ್ಕೆ ಋಣಿಯಾಗಿರುತ್ತೇನೆ. ನನಗೆ ವಯಸ್ಸಾಗಿದೆ ಎಂಬ ಕಾರಣದಿಂದ ಇತರರಿಗಿಂತ  ವಿವೇಕಿ ಎಂಬ ಭಾವನೆ ನನಗೆ ಉಂಟಾಗದಿರಲಿ. ಇತ್ತೀಚಿನ ದಿನಗಳಲ್ಲಿ ಆಗಿರುವ ಬದಲಾವಣೆಗಳು ನನಗೆ ಇಷ್ಟವಾಗಿರದಿದ್ದರೆ ಅದನ್ನು ನಾನು ವ್ಯಕ್ತಪಡಿಸದೆ ಮೌನವಾಗಿರುವಂತೆ ಮಾಡು. ಇನ್ನೆಷ್ಟುದಿನ ಇರುತ್ತೇನೋ ನಾನರಿಯೆ. ಕಡೆಗಾಲದಲ್ಲಿ ನನಗೆ ಸ್ನೇಹಿತರು ಒಬ್ಬಿಬ್ಬರಾದರೂ ಉಳಿದಿರಲಿ ಎಂಬುದು ನನ್ನ ಆಶಯ".   
      ಈ ಮೇಲಿನಂತೆ ನಡೆಯುತ್ತಿದ್ದ ತಂದೆಯಂತೆಯೇ ಇವರೂ ನಡೆದುಕೊಳ್ಳುತ್ತಿದ್ದು, ಈ ಮಾತುಗಳು ಎಲ್ಲರಿಗೂ ಮಾರ್ಗದರ್ಶಕವಾಗಲಿ. ಇದರಿಂದ ಎಲ್ಲರಿಗೂ ಸಂತೋಷವಾದರೆ ಅದೇ ಒಂದು ಪೂಜೆ.    ಸಂತೋಷಂ ಜನಯೇತ್ ಪ್ರಾಜ್ಞಃ ತದೇವೇಶ್ವರ ಪೂಜನಂ ಎಂದು ಈಗಲೂ ಹೇಳುತ್ತಿರುತ್ತಾರೆ. ಇವರ ಸ್ಪೂರ್ತಿದಾತರೆಂದರೆ ತೀರ್ಥರೂಪುರವರು ಮತ್ತು ಸ್ವಾಮಿ ಚಿನ್ಮಯಾನಂದರು. ಇವರಿಗೆ ಒಬ್ಬ ಮೊಮ್ಮಗ ಮತ್ತು ಒಬ್ಬ ಮೊಮ್ಮಗಳು ಇದ್ದು ಅವರೊಡನೆ ಯಾವಾಗಲೂ ಸಂತೋಷವಾಗಿ ಕಾಲಕಳೆಯುತ್ತಾ ಪದ್ಮಪತ್ರ  ಮಿವಾಂಭಸಾ ಎಂಬಂತೆ ನಿರ್ಲಿಪ್ತತೆಯ ಜೀವನವನ್ನು ನಡೆಸುತ್ತಿದ್ದಾರೆ. ಇವರ ಮಕ್ಕಳೂ ಹಾಗೂ ಸೊಸೆಯರೂ ಕೂಡ ಇವರ ಮನಸ್ಸಿಗೆ ಯಾವ ವಿಧವಾದ ನೋವೂ ಉಂಟಾಗದಂತೆ ನಡೆದುಕೊಳ್ಳುತ್ತಿರುವುದು ಈಗಿನ ಕಾಲಕ್ಕೆ ವಿಶೇಷವೇ ಸರಿ.
     ಇವರ ದಾಂಪತ್ಯ ಜೀವನವು ನಮ್ಮೆಲ್ಲರಿಗೂ ಆದರ್ಶವಾಗಲಿ ಎಂದು ನಮ್ಮನ್ನು ಆಶೀರ್ವದಿಸಲು ಪ್ರಾರ್ಥಿಸುತ್ತಾ ಅವರ ಚರಣಕಮಲಗಳಿಗೆ ಈ ಚಿಕ್ಕ ಲೇಖನವನ್ನು ಅರ್ಪಿಸುತ್ತೇನೆ. 
             
         -  ಡಾ|| ಕೆಳದಿ ಕೃಷ್ಣಜೋಯ್ಸ್
 * * * * *

ಸಂಪ್ರದಾಯ
ಹಸೆಮಣೆ
     ವ್ರತ ಮಾಡುವಾಗ, ಎಣ್ಣೆಶಾಸ್ತ್ರ ಮಾಡುವಾಗ, ಮಡಿಲು ತುಂಬುವಾಗ, ಮದುವೆ, ಮುಂಜಿ, ಮಕ್ಕಳ ಹುಟ್ಟಿದಹಬ್ಬ ಇತ್ಯಾದಿ ಯಾವುದೇ ಮಂಗಳಕಾರ್ಯ ಮಾಡುವಾಗ ಹಸೆಮಣೆ ಬೇಕೇ ಬೇಕು. ಸೂಕ್ತ ಜಾಗದಲ್ಲಿ ರಂಗೋಲೆ ಹಸೆಯಿಟ್ಟು ಅದರ ಮೇಲೆ ಮಣೆಯಿಡಬೇಕು. ಮಣೆಯ ಮೇಲೆ ಶುಭ್ರವಾದ ವಸ್ತ್ರ -ಶಾಲು, ಶಲ್ಯ, ಇತ್ಯಾದಿ- ಹಾಸಬೇಕು. ಹಸೆಮಣೆಯಿಡುವ ಸ್ಥಳದಲ್ಲಿ ಸಾಮಾನ್ಯವಾಗಿ ಹಾಕುವ ರಂಗೋಲಿ ಈ ರೀತಿ ಇರುತ್ತದೆ.
-ಸಂಗ್ರಹ ಮತ್ತು ಪ್ರಸ್ತುತಿ: ಭಾರತಿ ನಾಗರಾಜ್, ಹಾಸನ.

**********************
-ಪುಟಗಳು 11,12-
**********************
ಕೆಳದಿ ವಸ್ತುಸಂಗ್ರಹಾಲಯ
-ಡಾ.ಕೆ.ವೆಂಕಟೇಶ ಜೋಯಿಸ್.

     ಕ್ರಿ.ಶ ೧೪೯೯ ರಲ್ಲಿ ಜನ್ಮ ತಾಳಿದ ಕೆಳದಿ ಸಂಸ್ಥಾನಕ್ಕೆ ದಕ್ಷಿಣ ಭಾರತದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವಿದೆ. ಮಧ್ಯಕಾಲೀನ ಇತಿಹಾಸ ಕೊನೆಯ ಹಾಗೂ ಆಧುನಿಕ ಯುಗದ ಮೊದಲ ಕಾಲದ ಅರಸು ಮನೆತಗಳಲ್ಲಿ ಈ ಮನೆತನವು ಪ್ರಮುಖವಾದುದು. ಕ್ರಿ. ಶ. ೧೫೬೫ ರಲ್ಲಿ ವಿಜಯನಗರದ ಪತನದ ನಂತರ ಇವರು ಸ್ವತಂತ್ರರಾದರೂ ವಿಜಯನಗರದವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಮುನ್ನಡೆದವರಿವರು. ತಮ್ಮ ೨೬೩ ವರ್ಷ ಆಡಳಿತದ ಅವಧಿಯಲ್ಲಿ ರಾಜಕೀಯ. ಆಡಳಿತ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶೇಷ ನೈಪುಣ್ಯತೆಯನ್ನು ತೋರುತ್ತಾ ವಿಜಯನಗರದ ಸಂಸ್ಕೃತಿಗೆ ಕುಂದು ಬಾರದಂತೆ ನಡೆದು ಬಂದರು.
ಕೆಳದಿ ಅರಸರ ಮೊದಲ ರಾಜಧಾನಿ ಕೆಳದಿ. ಎರಡನೇ ರಾಜಧಾನಿ ಇಕ್ಕೇರಿ. ಮೂರು ಮತ್ತು ನಾಲ್ಕನೇ ರಾಜಧಾನಿಗಳು ಕ್ರಮವಾಗಿ ವೇಣುಪುರ, ಭುವನಗಿರಿ ದುರ್ಗ. ಸುಮಾರು ಕ್ರಿ. ಶ. ೧೪೯೮ ರಿಂದ ೧೭೬೩ ರವರೆಗೆ ೧೬ ರಾಜರು, ೨ ರಾಣಿಯರು ಈ ರಾಜ್ಯವನ್ನು ಆಳಿದ್ದಾರೆ. ವಿಜಯನಗರ ಪತನದ ನಂತರದಲ್ಲಿಯೂ ವಿಜಯನಗರವನ್ನು ಮತ್ತೊಮ್ಮೆ ಕಟ್ಟಿ ನಿಲ್ಲಿಸುವ ಕೆಲಸವನ್ನು ಇವರು ಮಾಡಿದರು. ಪೊರ್ಚುಗೀಸರು, ಇಂಗ್ಲಿಷರ ಜೊತೆಗೆ ಇವರು ಇಟ್ಟುಕೊಂಡ ಸಂಪರ್ಕ ಗಮನಾರ್ಹವಾದುದು. ವಿದೇಶಿ ಪ್ರವಾಸಿಗರು ಈ ರಾಜ್ಯಕ್ಕೆ ಭೇಟಿ ಇತ್ತಿದ್ದಾರೆ. ಹಿರಿಯ ವೆಂಕಟಪ್ಪನಾಯಕ, ಕೆಳದಿ ಶಿವಪ್ಪನಾಯಕ, ಕೆಳದಿ ರಾಣಿ ಚೆನ್ನಮ್ಮಾಜಿ ಮೊದಲಾದ ನಾಯಕರನ್ನು ಕೊಟ್ಟ ರಾಜ್ಯ ಕೆಳದಿ ರಾಜ್ಯ. ಕೆಳದಿ ಮನೆತನದ ವೈಭವದ ಪ್ರತೀಕವಾಗಿ ಇಂದು ಕೆಳದಿ, ಇಕ್ಕೇರಿ, ವೇಣುಪುರ, ಭುವನಗಿರಿದುರ್ಗ ಮುಂತಾದ ಸ್ಥಳಗಳು ಉಳಿದಿವೆ. ಅಲ್ಲಲ್ಲಿ ಗುಡಿ, ಆಲಯ, ಕೊಳ, ಕೋಟೆ, ಕೆರೆಗಳು ಪಾಳು ಬಿದ್ದಿವೆ.

     ಕೆಳದಿ ರಾಜ್ಯದ ಉದಯದಿಂದ ಅದರ ಅವಸಾನದವರೆಗಿನ ಬಗೆಗೆ ನಮಗೆ ಕೆಳದಿ ನೃಪ ವಿಜಯ,  ಶಿವತತ್ವ ರತ್ನಾಕರ ಮೊದಲಾದ ಪ್ರಾಚೀನ ಗ್ರಂಥಗಳು ತಿಳಿಸುತ್ತವೆ. ಶಿಲಾ ಶಾಸನಗಳು, ಕಾಗದ ಪತ್ರಗಳು ಕೆಳದಿ ಇತಿಹಾಸ ಮತ್ತು ಸಮಕಾಲೀನ ಇತಿಹಾಸ ರಚನೆಗೆ ಪ್ರಮುಖ ಆಕರವಾಗಿದೆ. ಈ ಐತಿಹಾಸಿಕ ಸಾಮಗ್ರಿಗಳನ್ನು ಸಂಗ್ರಹಿಸುವ. ಸಂಶೋಧನೆಗೆ ಒಳಪಡಿಸುವ ಕೆಳದಿ ಮತ್ತು ಸಮಕಾಲೀನ ಇತಿಹಾಸವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಸಲುವಾಗಿ ಕ್ರಿ. ಶ. ೧೯೬೦ ರಲ್ಲಿ ಕೆಳದಿ ವಸ್ತುಸಂಗ್ರಹಾಲಯ ತಲೆ ಎತ್ತಿತು. ಈ ವಸ್ತುಸಂಗ್ರಹಾಲಯ ಸ್ಥಾಪನೆಯಲ್ಲಿ ಏಕ ವ್ಯಕ್ತಿಯಾಗಿ ತಂದೆ ಶ್ರೀ ಕೆಳದಿ ಗುಂಡಾಜೋಯಿಸ್‌ರವರ ಶ್ರಮ ಉಲ್ಲೇಖಾರ್ಹ. ನನ್ನಜ್ಜಿ ಮೂಕಾಂಬಿಕಮ್ಮನವರು     ಈ ವಸ್ತುಸಂಗ್ರಹಾಲಯದ ಸ್ಥಾಪನೆ ಸಂದರ್ಭದಲ್ಲಿ ನನ್ನ ಗುಂಡ ಒಂದು ಆನೆಯನ್ನು ಕಟ್ಟಲು ಹೊರಟಿದ್ದಾನೆ. ಅದನ್ನು ಕಟ್ಟುವುದು ಸುಲಭ. ಆದರೆ ಅದನ್ನು ಸಾಕುವುದು ಕಷ್ಟ" ಎಂದು ಹೇಳುತ್ತಿದ್ದ ಮಾತು ಇಂದೂ ನನ್ನ ಕಿವಿಯಲ್ಲಿ ಆಗಾಗ್ಗೆ ಗುಯ್‌ಗುಡುತ್ತಿರುತ್ತದೆ. ಕ್ರಿ. ಶ. ೧೯೮೭-೮೯ ರಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದ್ದು ಇದಕ್ಕೆ ಶ್ರೀ ಜೋಯಿಸರು ಭೂಮಿ ದಾನ ಮಾಡಿದ್ದಾರೆ. ೨೦೦೦ದ ಸುಮಾರಿನಲ್ಲಿ ಇನ್ನೊಂದು ನಿವೇಶನವನ್ನು ಕೊಂಡುಕೊಂಡಿದ್ದು ಅಲ್ಲಿ ಪುನಃ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ.


     ವಸ್ತುಸಂಗ್ರಹಾಲಯವೊಂದು ಗ್ರಾಮಾಂತರ ಕ್ಷೇತ್ರದಲ್ಲಿ ಅಪೂರ್ವವೆನಿಸಿದುದು ಕೆಳದಿಯಲ್ಲಿದೆ. ಹಿಂದುಳಿದ ಜನತೆಗೆ ಅಧ್ಯಯನಾಸಕ್ತರಿಗೆ ಇದು ವರದಾನವಾಗಿದೆ. ಇದು ೧೯೬೨ ರಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿ ಈಗ ಬೃಹದಾಕಾರವಾಗಿ ಬೆಳೆದಿದೆ. ತಂದೆಯವರಾದ ಶ್ರೀ ಗುಂಡಾಜೋಯಿಸರು ಸಂಗ್ರಹಿಸಿದ ಎಲ್ಲಾ ವಸ್ತುಗಳನ್ನು, ಹಸ್ತಪ್ರತಿ, ಶಿಲ್ಪಗಳನ್ನು ಕೆಳದಿ ವಸ್ತುಸಂಗ್ರಹಾಲಯಕ್ಕೆ ಪ್ರತಿಫಲ ಅಪೇಕ್ಷೆ ಪಡದೆ ದೇಣಿಗೆಯಾಗಿ ಕೊಟ್ಟಿದ್ದಾರೆ. ಇಂದು ಕುವೆಂಪು ವಿಶ್ವವಿದ್ಯಾನಿಲಯ ಈ ವಸ್ತುಸಂಗ್ರಹಾಲಯವನ್ನು ಬೆಳೆಸುವ ಕೆಲಸ ಮಾಡುತ್ತಿದೆ. ಇಲ್ಲಿ ಆ ಕಾಲದ ಕತ್ತಿ, ಪಂಚವಾಳ, ಬಾಚಣಿಗೆ, ಕಂಚಿನ ವಿಗ್ರಹಗಳು ಲೇಖನಿಗಳು, ಬೀಗಗಳು, ಫಿರಂಗಿ ಗುಂಡುಗಳು, ವ್ಯಾಯಾಮ ಸಾಧನಗಳು, ಅವಶೇಷಗಳು, ಮಿರ್ಜಾ ಇಸ್ಮಾಯಿಲ್, ಜಯಚಾಮರಾಜ ಒಡೆಯರ್, ವಿಶ್ವೇಶ್ವರಾಯ ಮೊದಲಾದವರ ಸ್ವ ಹಸ್ತಾಕ್ಷರದ ಕಾಗದ ಪತ್ರಗಳು, ನಾಣ್ಯಗಳು, ತಾಡೆಯೋಲೆ ಹಸ್ತಪ್ರತಿಗಳು, ತಾಮ್ರಶಾಸನ, ಮಹಾಸತಿಕಲ್ಲು, ವೀರಗಲ್ಲು, ಮೊದಲಾದವುಗಳಿವೆ. ಇಲ್ಲಿಯ ತಾಡೆಯೋಲೆ ಸಂಗ್ರಹ ಮತ್ತು ವೈಜ್ಞಾನಿಕ ರೀತಿಯ ರಕ್ಷಣೆಗಾಗಿ ಕೇಂದ್ರ ಸರಕಾರ ಇದನ್ನು ಹಸ್ತಪ್ರತಿ ಸಂಪನ್ಮೂಲ ಕೇಂದ್ರವಾಗಿ ಗುರುತಿಸಿದೆ. ಈಗ ಸರಕಾರ ಇದನ್ನು ಕುವೆಂಪು ವಿಶ್ವವಿದ್ಯಾನಿಲಯದ ಜೊತೆ ವಿಲೀನಗೊಳಿಸಿದೆ.

     ಕೆಳದಿ ಲಿಂಗಣ್ಣ ಕವಿಯ ವಂಶಜರಾದ ಎಸ್. ಕೆ. ಲಿಂಗಣ್ಣಯ್ಯನವರ ತೈಲ ವರ್ಣಚಿತ್ರಗಳು, ರಾಮಾಯಣ, ಭಾಗವತ ಪುಸ್ತಕಗಳು, ಶ್ರೀರಾಮ ಪಟ್ಟಾಭಿಷೇಕ, ಅರ್ಚರಾಧಿಮಾರ್ಗ, ಭಗವದ್ಗೀತೆ, ವೀರಭದ್ರ ಅವತಾರ, ಲಲಿತಾ ತ್ರಿಪುರ ಸುಂದರಿ, ವಾಯುಸ್ತುತಿ ಮೊದಲಾದವು ಗಮನಿಸುವಂತಹವು. ಭಗವದ್ಗೀತೆಯ  ೧೮ ಅಧ್ಯಾಯಗಳನ್ನು ಪಟದಲ್ಲಿ ಬರೆಯಲಾಗಿದೆ. ಲಲಿತಾ ತ್ರಿಪುರ ಸುಂದರಿಯಲ್ಲಿ ಶ್ರೀ ಲಲಿತಾ ಸಹಸ್ರನಾಮವಿದೆ. ವಾಯುಸ್ತುತಿ ಪಟದಲ್ಲಿ ವಾಯುಸ್ತುತಿ ಇದೆ. ಇದು ಕನ್ನಡ ಮತ್ತು ಸಂಸ್ಕೃತದಲ್ಲಿದೆ. ವಿಕ್ಟೋರಿಯಾ ರಾಣಿ, ಇಂಗ್ಲಿಷರು ಭಾರತ  ಆಳುತ್ತಿದ್ದಾಗ ಎಷ್ಟು ವಸಾಹತು ಒಳಗೊಂಡಿತ್ತು ಎಂಬುದಕ್ಕೆ ಅನುಗುಣವಾಗಿ ಎಡಗೈ ಆಸ್ಟ್ರೇಲಿಯಾ, ಬಲಗೈ ಕೆನಡಾ, ತಲೆ ಸ್ಕಾಟ್ಲಾಂಡ್, ಐರ್ಲಾಂಡ್, ಎದೆ ಭಾಗ ಇಂಡಿಯಾ, ತೊಡೆಯ ಭಾಗ ಅಮೇರಿಕಾದ ಹದಿನಾಲ್ಕು ವಸಾಹತುಗಳು ಅಟ್ಲಾಂಟಿಕ್ ಸಾಗರದಲ್ಲಿ ಆಕೆ ನಿಂತಿರುವುದು ಮುಂತಾದವು ನೈಜತೆಯ ಜೊತೆಗೆ ಕಲ್ಪನೆ ಬೆರೆತ ಸುಂದರ ಕಲಾಕೃತಿಯಾಗಿದೆ. ಕೆಳದಿ ಕವಿಮನೆತನದ ವಂಶವೃಕ್ಷವನ್ನು ಸಹ ಈ ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ.  ಇಲ್ಲಿಯ ಸಂಗ್ರಹಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇತ್ತೀಚೆಗೆ ಇಕ್ಕೇರಿಯ ಹಳೆರಥವನ್ನು ವಸ್ತುಸಂಗ್ರಹಾಲಯದ ಸಂಗ್ರಹಕ್ಕೆ ಸೇರಿಸಿಕೊಂಡು ರಕ್ಷಣೆ ಮಾಡಲಾಗುತ್ತಿದೆ.
     ಈ ತರಹ ಐತಿಹಾಸಿಕ ಸಾಮಗ್ರಿಗಳನ್ನು ಸಂಗ್ರಹಿಸಿ. ಪ್ರದರ್ಶಿಸಿ ಆ ಮೂಲಕ ಗ್ರಾಮೀಣ ಪ್ರದೇಶದ ಜನತೆಯಲ್ಲಿ ಐತಿಹಾಸಿಕ ವಸ್ತುಗಳನ್ನು ಉಳಿಸುವತ್ತ ಗಮನ ಸೆಳೆಯುವ  ಪ್ರಯತ್ನವನ್ನು ಕೆಳದಿ ವಸ್ತು ಸಂಗ್ರಹಾಲಯ ಕಳೆದ ಹಲವು ವರುಷದಿಂದ ಮಾಡುತ್ತ ಬಂದಿದೆ. ಇದರ ಚಟುವಟಿಕೆಯನ್ನು ರಾಜ್ಯ, ಕೇಂದ್ರ ಸರಕಾರ, ರಾಷ್ಟ್ರೀಯ ಕಲೆ ಮತ್ತು ಸಂಸ್ಕೃತಿ ಕೇಂದ್ರ, ನವದೆಹಲಿ ಮೊದಲಾದವುಗಳು ಗುರುತಿಸಿವೆ. ಶಿವತತ್ವ ರತ್ನಾಕರ - ಎ ಕಲ್ಚರಲ್ ಸ್ಟಡಿ ಮೊದಲಾಗಿ ಹಲವು ಉತ್ತಮ ಪ್ರಕಟಣೆಗಳನ್ನು ವಸ್ತುಸಂಗ್ರಹಾಲಯ ಹೊರತಂದಿದೆ. ಕೆಳದಿ ಮತ್ತು ಆ ಕಾಲದ ಪಾಳೆಯಪಟ್ಟು, ಸಂಸ್ಥಾನಗಳ ಚರಿತ್ರೆಯ ಬಗ್ಗೆ ಸಂಶೋಧನೆ ನಡೆಸಿದೆ.
     ಕೆಳದಿ ವಸ್ತುಸಂಗ್ರಹಾಲಯದಲ್ಲಿ ಹಸ್ತಪ್ರತಿ ಶಾಸ್ತ್ರ, ಲಿಪಿ ಶಾಸ್ತ್ರ, ಶಾಸನ ಶಾಸ್ತ್ರ ಮೊದಲಾದ ಬಗ್ಗೆ ಸರ್ಟಿಫಿಕೇಟ್ ಕೋರ್ಸ್ ಪ್ರಾರಂಭವಾಗುವುದರಲ್ಲಿದೆ. ಇಂದು ಹೊಸ ಕಟ್ಟಡವನ್ನು ಕುವೆಂಪು ವಿಶ್ವವಿದ್ಯಾನಿಲಯ ನಿರ್ಮಿಸುವುದರ ಜೊತೆಗೆ ಈ ವಸ್ತುಸಂಗ್ರಹಾಲಯವನ್ನು ಮಾದರಿ ವಸ್ತುಸಂಗ್ರಹಾಲಯವನ್ನಾಗಿ ರೂಪಿಸುವುದಕ್ಕೆ ಶ್ರಮಿಸುತ್ತಿದೆ. ಆ ಮೂಲಕವಾಗಿ ಕೆಳದಿ ವಸ್ತುಸಂಗ್ರಹಾಲಯ ಕೆಳದಿ ಕವಿ ಮತ್ತು ಜೋಯಿಸ್ ಕುಟುಂಬಗಳ ಅವಿಸ್ಮರಣೀಯ ಸ್ಮಾರಕವಾಗಿ ನಿಲ್ಲುವುದರಲ್ಲಿ ಎರಡು ಮಾತಿಲ್ಲ.
* * * * *

ಗಾಢ ಪ್ರೇಮ 
 ಪ್ರೀತಿಗೂ ಹೊಂದಾಣಿಕೆಗೂ ಎಷ್ಟು ಗಾಢಪ್ರೇಮವೆಂದರೆ ಒಂದನ್ನು ಬಿಟ್ಟು ಒಂದು ಇರುವುದಿಲ್ಲ. ಪ್ರೀತಿ ಇರುವಲ್ಲೆಲ್ಲಾ ಹೊಂದಾಣಿಕೆ ಇರುತ್ತದೆ. ಹೊಂದಾಣಿಕೆ ಇಲ್ಲದ ಕಡೆ ಪ್ರೀತಿ ಇರುವುದಿಲ್ಲ.
*********************

ಈ ಚಿತ್ರಕ್ಕೆ ಹೊಂದುವ ಕಿರುಕವನ ಬರೆದು ಕಳುಹಿಸಿ

ಆಯ್ದ೨ ಕವನಗಳನ್ನು ಪ್ರಕಟಿಸಲಾಗುವುದು.
 **********************
 -ಪುಟಗಳು 13,14-
***********************
ಶ್ರೀ ಮೇಲುಕೋಟೆಯ (ಶ್ರೀ ಯದುಗಿರಿ) ಯತಿರಾಜಮಠದ ಶ್ರೀ ಪೀಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಯತಿರಾಜ ಸಂಪತ್ಕುಮಾರ ರಾಮಾನುಜ ಜೀಯರ್ ಮಹಾಸ್ವಾಮಿಗಳ ದಿನಾಂಕ ೨೭-೧೦-೧೯೯೯ರ  ಆಶೀರ್ವಾದ ಪತ್ರ
ಧರ್ಮೋ ರಕ್ಷತಿ ರಕ್ಷಿತಃ
     ನಮಗೆ ಗೋತ್ರ ಪ್ರವರ ಹೇಳುತ್ತೇವೆಯೇ ಹೊರತು, ಅದು ಏನು? ಅದರ ಅರ್ಥವೇನು? ಇತ್ಯಾದಿ ತಿಳಿಯದು. ಆದರೂ ನಮ್ಮ ಗುರುಗಳು ನಮಗೆ ತಿಳಿಸಿದಷ್ಟನ್ನು ಇಲ್ಲಿ ತಿಳಿಸಿರುತ್ತೇವೆ.
     ಲೋಕದಲ್ಲಿನ ಜನರು ತಾವು ಯಾರು? ಎಲ್ಲಿಂದ ಬಂದೆವು? ಯಾವ ಬುಡಕಟ್ಟಿಗೆ ಸೇರಿದವರು? ನಮ್ಮ ವಂಶದ ಪೂರ್ವಜರ ಚರಿತ್ರೆಯೇನು? ಇತ್ಯಾದಿ ವಿಷಯಗಳನ್ನು ತಿಳಿಯಲು ಉತ್ಸುಕರಾಗಿರುತ್ತಾರೆ. ಆಸೆ ಪಡುತ್ತಾರೆ. ಗೋತ್ರ ಎಂದರೆ, ತಾನು ಹುಟ್ಟಿದ ವಂಶದ ಮೂಲ ಪುರುಷನ ಹೆಸರು. ಯಾವ ಋಷಿಯ ವಂಶದಲ್ಲಿ ಹುಟ್ಟಿದನೋ ಅವನ ಹೆಸರು. ಅದನ್ನೇ ಮನೆತನ, ವಂಶ ಎಂದು ಕರೆಯುವುದು. ಪ್ರವರ ಎಂದರೆ, ಆಯಾ ವಂಶದಲ್ಲಿ ಬಂದ ಪ್ರಸಿದ್ಧರಾದ ನಮ್ಮ ತಾತ ಮುತ್ತಾತಂದಿರ ಹೆಸರು. ನಾವು ಬಂದ ವಂಶದಲ್ಲಿ ಪ್ರಸಿದ್ಧರಾದವರು ಅದು ಮುತ್ತಾತ, ತಾತ, ತಂದೆಯಾಗಿರಬಹುದು. ಅಥವಾ ಮುತ್ತಾತ, ಅವರಿಂದ ಕೆಲವು ತಲೆಮಾರುಗಳು ಬಿಟ್ಟು, ಇನ್ನೊಬ್ಬ ಪ್ರಸಿದ್ಧರಾದವರ ಹೆಸರು, ಅವರಿಂದ ಮೇಲೆ ಇನ್ನೂ ಕೆಲವು ತಲೆಮಾರುಗಳು ಬಿಟ್ಟು, ಬಂದವರ ಹೆಸರು. ಅವರು ಎಲ್ಲಾ ವಿಷಯಗಳಲ್ಲೂ ಪ್ರಸಿದ್ಧರಾಗಿರಬೇಕು. ಈ ರೀತಿ ಮೂರು ಜನರ ಹೆಸರು, ಅಥವಾ ಐದು ಜನರ ಹೆಸರುಗಳನ್ನು ಜ್ಞಾಪಿಸಿಕೊಂಡು, ಅವರ ಹೆಸರನ್ನು ಹೇಳುವುದು. ಇದು ಬದಲಾಗಬಹುದು. ಆಗದೆಯೂ ಇರಬಹುದು.
     ನಮ್ಮ ವಂಶದ ಎಲ್ಲರ ಹೆಸರುಗಳನ್ನು ಹೇಳುವುದಕ್ಕಾಗುವುದಿಲ್ಲವಾದ್ದರಿಂದ, ಪ್ರಸಿದ್ಧರಾದ ಮೂರು ಜನ, ಅಥವಾ ಐದು ಜನರ ಹೆಸರನ್ನು ಹೇಳುವುದು. ಅವರು ಜ್ಞಾನವಂತರಾದ್ದರಿಂದ ಅವರನ್ನೇ ಋಷಿ ಎಂದು ಕರೆಯುವರು. ತ್ರಯಾ ಋಷಿಯ, ಪಂಚಾಋಷಿಯ ಶಬ್ದದಿಂದ ಕರೆಯುತ್ತೇವೆ. ಅನಂತರ ನಮ್ಮ ಕೂಟಸ್ಥರು ಮೂಲ ಪುರುಷ ಋಷಿಯ ಹೆಸರನ್ನು ಹೇಳುವುದು. ಅದಕ್ಕೆ ಗೋತ್ರ ಎಂದು ಹೆಸರು.
     ಸೂತ್ರ ಎಂದರೆ- ವೇದ ಧರ್ಮ ತಿಳಿಯಲು, ಅದರಂತೆ ಆಚರಿಸಲು ಅನೇಕ ಸೂತ್ರಗಳು ಬರೆಯಲ್ಪಟ್ಟಿವೆ. ಅವುಗಳು:- ಆಪಸ್ತಂಭ, ಆಶ್ವಲಾಯನ, ದ್ರಾಹ್ಯಾಯಣ, ಇತ್ಯಾದಿ ಸೂತ್ರಗಳಿವೆ. ಇವುಗಳು ಇಂತಿವೆ: ೧. ಆಪಸ್ತಂಭ ಸೂತ್ರವು ಯಜುರ್ವೇದಕ್ಕೆ ಸೇರಿರುವುದು. ೨. ಆಶ್ವಲಾಯನ ಸೂತ್ರವು ಋಗ್ವೇದಕ್ಕೆ ಸೇರಿರುವುದು. ೩. ದ್ರಾಹ್ಯಾಯಣ ಸೂತ್ರವು ಸಾಮವೇದಕ್ಕೆ ಸೇರಿರುವುದು.
     ಗೋತ್ರವನ್ನು ಹೇಳಿದ ಮೇಲೆ ಇಂಥ ವೇದಕ್ಕೆ ಸೇರಿದ ಸೂತ್ರ ಎಂದರೆ - ಗೃಹ್ಯ ಸೂತ್ರದ ಪ್ರಕಾರ ಷೋಡಷ ಕರ್ಮಕ್ಕೆ ಒಳಪಟ್ಟವನು ಎಂದರ್ಥವು. ಅನಂತರ ವೇದ ಪರಂಪರೆಯಾಗಿ ಬಂದ ಇಂತಹ ವೇದ ವಿದ್ಯೆಯನ್ನು ಅಧಿಕರಿಸುವವನು ಎಂಬರ್ಥವು.
*******************************
ಅರಿಕೆ
     ಈ ಲೇಖನವು ಸರ್ವೋದಯ ಕಾರ್ಯಕರ್ತರಾದ ಶ್ರೀ ಹೆಚ್. ಆರ್. ಸಂಪತ್‌ಕುಮಾರನ್‌ರವರು ಸುಮಾರು ೧೨ ವರ್ಷಗಳ ಕಾಲ ಸಂಶೋಧನೆ ಮಾಡಿ ರಚಿಸಿದ ಗೋತ್ರ, ಪ್ರವರ, ಸೂತ್ರ, ಶಾಖಾ ವಿಚಾರಸೂಚಿ ಎಂಬ ಪುಸ್ತಕಕ್ಕೆ ಶ್ರೀ ಶ್ರೀ ಶ್ರೀಗಳವರು ಬರೆದ ಮುನ್ನುಡಿಯ ಆಯ್ದ ಭಾಗ. ಇದನ್ನು ಪ್ರಕಟಿಸಲು ವಯೋವೃದ್ಧ ಮತ್ತು ಜ್ಞಾನವೃದ್ಧರಾದ ಲೇಖಕರನ್ನು ಅವರ ಸ್ವಗೃಹದಲ್ಲಿ ಭೇಟಿ ಮಾಡಿ ಆಶೀರ್ವಾದಪೂರ್ವಕ ಅನುಮತಿ ಪಡೆಯಲಾಗಿದೆ. ಸಂಶೋಧನೆ, ತರ್ಕ, ಕುತೂಹಲಗಳಿಗೆ ಹೆಸರಾಗಿರುವ ಕವಿ ಕುಟುಂಬಗಳವರು ಈ ಪುಸ್ತಕವನ್ನು ಓದಿ ಜ್ಞಾನಭಂಡಾರ ಹೆಚ್ಚಿಸಿಕೊಳ್ಳಬಹುದಲ್ಲದೆ ವಿಷಯಕ್ಕೆ ಸಂಬಂಧಿಸಿದ ಇಂತಹ ಇತರ ಗ್ರಂಥಗಳನ್ನು ಅಭ್ಯಸಿಸಿ ಹರಿತಸರ ಬಗ್ಗೆ ತಿಳಿಯುವ ಹೆಚ್ಚಿನ ಸಂಗತಿಗಳನ್ನು ತಿಳಿಸಿದಲ್ಲಿ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಅನಿಸಿಕೆ, ಅಭಿಪ್ರಾಯಗಳಿಗೆ ಸ್ವಾಗತವಿದೆ. ಪೂರ್ವಾಗ್ರಹವಿಲ್ಲದ ಅಭ್ಯಾಸ, ಸಂಶೋಧನೆಗಳು ಸತ್ಯ ತಿಳಿಯಲು ಸಹಕಾರಿ. ಪುಸ್ತಕದ ಕೆಲವೇ ಪ್ರತಿಗಳು ಇದ್ದು ಜೆ.ಪಿ. ನಗರದ ರಾಗಿಗುಡ್ಡದ ಆಂಜನೇಯ ದೇವಸ್ಥಾನದ ಪುಸ್ತಕ ಮಳಿಗೆಯಲ್ಲಿ ಮತ್ತು ಲೇಖಕರಲ್ಲಿ ಲಭ್ಯವಿದೆ. ಪುಸ್ತಕದ ಬೆಲೆ ರೂ.೧೦೦/-.
ಲೇಖಕರ ವಿಳಾಸ: ಶ್ರೀ ಹೆಚ್. ಆರ್. ಸಂಪತ್‌ಕುಮಾರನ್, ಸರ್ವೋದಯ ಕಾರ್ಯಕರ್ತರು, ನಂ. ೧೪೧೦, ಸರ್ವೋದಯ ಸದನ, ಸೌತ್ ಎಂಡ್ ಎ ರಸ್ತೆ, ೯ನೆಯ ಬ್ಲಾಕ್, (ರಾಗಿಗುಡ್ಡದ ಬಳಿ), ಜಯನಗರ, ಬೆಂಗಳೂರು - ೫೬೦೦೬೯.
-ಸಂಪಾದಕ

*****************************************     . . . ತ್ರಯಾಋಷಯ ಅಥವಾ ಪಂಚಾಋಷಯ ಪ್ರವರಾನ್ವಿತ . .  ಸೂತ್ರ. . . . ಶಾಖಾಧ್ಯಾಯೀ ಎಂದು ಹೇಳಿ, ಗುರುಹಿರಿಯರಿಗೆ ನಮಸ್ಕರಿಸುವುದು. ಅರ್ಥಾತ್ ನೀನು ಯಾರು ಎಂದು ಕೇಳಿದರೆ, ಇಂತಹ ಋಷಿಗಳ ವಂಶದಲ್ಲಿ ಹುಟ್ಟಿ, ಇಂತಹ ಸೂತ್ರದ ಪ್ರಕಾರ ಷೋಡಶ ಕರ್ಮಗಳಿಗೆ ಒಳಪಟ್ಟು, ಇಂಥ ವೇದವನ್ನು ಅಧಿಕರಿಸುವವನು - ಎಂದು ಹೇಳುವುದು.     ಪ್ರವರ ಎನ್ನುವುದು ಸಾಧಾರಣವಾಗಿ ೪೫ಕ್ಕೆ ಕಾಣಬರುವುದಿಲ್ಲ. ಒಂದು ವೇಳೆ ಇದ್ದರೂ, ೬೦-೭೦ಕ್ಕೆ ಮೇಲೆ ಇರುವುದಿಲ್ಲ.
    ಗೋತ್ರವೆಂಬ ಋಷಿಯ ಹೆಸರು - ಅಸಂಖ್ಯಾತವು. ಲಕ್ಷ ಸಂಖ್ಯೆಗೆ ಮೇಲ್ಪಟ್ಟಿರುವುದು.

     ನಮ್ಮ ಸಂಸ್ಕೃತಿಯು ಪ್ರತಿಯೊಬ್ಬನೂ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಎಂದರೆ ತ್ರಿಕಾಲದಲ್ಲೂ ನಮ್ಮ ಹಿರಿಯರನ್ನು ಎಂದರೆ, ನಾವು ಬಂದ ನಮ್ಮ ಋಷಿ ಪರಂಪರೆಯಲ್ಲಿ ಮೂರು ಜನಗಳು ಅಥವಾ ಐದು ಜನಗಳನ್ನು ಜ್ಞಾಪಿಸಿಕೊಂಡು, ಅವರ ಹೆಸರನ್ನು ಹೇಳಿ, ಹಿರಿಯರಿಗೆ ಗುರುಗಳಿಗೆ ನಮಸ್ಕರಿಸಬೇಕೆಂದು ಹೇಳುವುದು. ಅದರಂತೆ ನಾವು ಸಂಧ್ಯಾವಂದನೆ, ದೇವತಾಪೂಜೆ ಕಾಲದಲ್ಲಿ ನಮ್ಮ ಹಿರಿಯರನ್ನು ನೆನೆಸಿಕೊಂಡು, ಗುರುಹಿರಿಯರಿಗೆ ನಮಸ್ಕರಿಸುತ್ತೇವೆ. ಅದನ್ನು ತೋರಿಸುವುದೇ ಈ ಗೋತ್ರ, ಪ್ರವರ ಸೂತ್ರ ಎನ್ನುವುದು.
     ಈ ಗೋತ್ರ ಪ್ರವರ ವಿಷಯದಲ್ಲಿ ಅನೇಕ ಪಂಡಿತರು ವಿಮರ್ಶನಾತ್ಮಕ ಗ್ರಂಥಗಳನ್ನು ಬರೆದಿರುವರು. ಕಮಲಾಕರಭಟ್ಟ ಬರೆದ ಗ್ರಂಥವಿದೆ. ಗೋತ್ರ ಪ್ರವರ ನಿರ್ಣಯ ಎಂಬ ಗ್ರಂಥವೂ ಇರುವುದು. ಆ ಗ್ರಂಥಗಳನ್ನು ಓದಿ ತಿಳಿಯುವುದು ಕಷ್ಟ. ಪಂಡಿತರು, ತಿಳಿದವರು ಗೋತ್ರ, ಪ್ರವರ ಸೂತ್ರ ವಿಚಾರವಾಗಿ ನಮ್ಮ ಮಕ್ಕಳಿಗೆ ಮನದಟ್ಟಾಗುವಂತೆ ವಿಮರ್ಶನವಾಗಿ ಬರೆಯಬೇಕೆಂದು ವಿಜ್ಞಾಪಿಸುತ್ತೇವೆ.

     ಗೋತ್ರ ಋಷಿಗಳ ಆವಿರ್ಭಾವ:- ಚತುರ್ಮುಖ ಬ್ರಹ್ಮನಿಂದ ಪರಂಪರೆಯಾಗಿ ಏಳು ಮಂದಿ ಋಷಿ ಪುಂಗವರು ಜನಿಸಿದರು. ೧.ಭೃಗು, ೨. ಆಂಗೀರಸ, ೩. ಮರೀಚಿ, ೪. ಅತ್ರಿ, ೫.ಪುಲಹ, ೬. ಪೌಲಸ್ತ್ಯ, ೭. ವಸಿಷ್ಠ ಎಂಬುದಾಗಿ ಏಳು ಮಂದಿ ಋಷಿಗಳು ಉದಯಿಸಿದರು. ಇವರಲ್ಲಿ ಐದನೆಯವರಾದ ಪುಲಹ ಋಷಿಯಿಂದ ರಾಕ್ಷಸರ ಉತ್ಪನ್ನವಾಯಿತು. ಆರನೆಯವರಾದ ಪೌಲಸ್ತ್ಯರಿಂದ ಪೈಶಾಚರು ಉತ್ಪನ್ನರಾದರು. ಏಳನೆಯವರಾದ ವಸಿಷ್ಠರು ಮೃತರಾಗಿ ಮೂರನೆಯವರಾದ ಮರೀಚಿಗೆ ಉತ್ತರಾಧಿಕಾರಿಯಾಗಿ ಏರ್ಪಟ್ಟರು. ಆದ್ದರಿಂದ ಈಗಿರುವ ಅಖಿಲ ಬ್ರಾಹ್ಮಣ ಸಮೂಹವೆಲ್ಲವೂ ಮೊದಲು ತಿಳಿಸಿದ ೧. ಭೃಗು, ೨. ಆಂಗೀರಸ, ೩. ಮರೀಚಿ, ೪. ಅತ್ರಿ ಈ ನಾಲ್ಕು ಋಷಿಗಳ ಪರಂಪರೆಗೆ ಸೇರಿದವರು.
     ಈ ನಾಲ್ಕು ಋಷಿಗಳು ಸೇರಿ ಸಮುದಾಯ ಅಥವಾ ಮನೆತನ ಅಥವಾ ವಂಶಪರಂಪರೆ ಎಂಬುದಾಗಿ ನಾಲ್ಕು ಭಾಗ ಮಾಡಿದರು. ಈ ರೀತಿ ಮಾಡಿದುದರಲ್ಲಿ ಎಂಟು ಪರಂಪರೆ ವಂಶಗಳಾದವು. ಅವರನ್ನೇ ಗೋತ್ರಕಾರರೆಂದು ಕರೆಯಲಾಯಿತು. ಆ ಎಂಟು ಜನ ಗೋತ್ರಕಾರರ ಮೂಲಪುರುಷರು:
೧. ಜಮದಗ್ನಿ   - ಭೃಗು ವಂಶಸ್ಥರು (೧)
೨. ಭರದ್ವಾಜ   - ಆಂಗೀರಸ ವಂಶಸ್ಥರು (೨)
೩. ಗೌತಮ    - ಮೇಲಿನಂತೆ
೪. ಕಾಶ್ಯಪ     - ಮರೀಚಿ ವಂಶಸ್ಥರು (೩)
೫. ವಸಿಷ್ಠ     -  ಮೇಲಿನಂತೆ
೬. ಅಗಸ್ತ್ಯ     -  ಮೇಲಿನಂತೆ
೭. ಅತ್ರಿ      -  ಅತ್ರಿಯೇ ಮೂಲಪುರುಷರು ಅಥವಾ ಅವರ
              ವಂಶಸ್ಥರು (೪)
೮. ವಿಶ್ವಾಮಿತ್ರ  - ಅತ್ರಿ ಋಷಿಯ ವಂಶಸ್ಥರು

     ಈ ರೀತಿ ನಾಲ್ಕು ಜನ ಮೂಲಪುರುಷರಿಂದ ಉತ್ಪನ್ನರಾದ ಗೋತ್ರಕಾರರು ಅವರವರ ವಂಶದಲ್ಲಿ (ಸಗೋತ್ರ) ಹೆಣ್ಣು ಕೊಟ್ಟು ತರುವುದು ನಿಷೇಧವು. ಒಂದು ಗೋತ್ರದವರು ಇನ್ನೊಂದು ಗೋತ್ರದವರಲ್ಲಿ ಹೆಣ್ಣು ಕೊಟ್ಟು ವಿವಾಹಾದಿಗಳನ್ನು ಮಾಡಬಹುದು.
     ಮೇಲೆ ತಿಳಿಸಿದ ಎಂಟು ಜನ ಗೋತ್ರಕಾರರು ಸ್ಥಿರಪಟ್ಟಮೇಲೆ ಹೊಸದಾಗಿ ಇನ್ನು ಹತ್ತು ಋಷಿ ವಂಶಸ್ಥರನ್ನು ಸೇರಿಸಲಾಯಿತು. ಈ ರೀತಿಯಲ್ಲಿ ಹೊಸದಾಗಿ ಬಂದ ಬ್ರಾಹ್ಮಣರು ಕ್ಷತ್ರಿಯ ಕುಲಕ್ಕೆ ಸೇರಿದವರಾಗಿ ಅನಂತರ ಕಾಲದಲ್ಲಿ ಪುನಃ ಬ್ರಾಹ್ಮಣ ಕುಲಕ್ಕೆ ಸೇರಿದವರಾದರು. ಎಂದರೆ ಭೃಗು ವಂಶ ಅಥವಾ ಆಂಗೀರಸ ವಂಶಕ್ಕೆ ಸೇರಿದವರಾದರು. ಇಂತಹವರನ್ನೆಲ್ಲಾ ಕೇವಲರು ಅಥವಾ ಪ್ರತ್ಯೇಕಿಸಲ್ಪಟ್ಟ ಭಾರ್ಗವರು ಅಥವಾ ಆಂಗೀರಸರು ಎಂದು ಕರೆಯಲ್ಪಟ್ಟವರಾದರು. ಇವರೆಲ್ಲಾ ಮೇಲೆ ತಿಳಿಸಿದವರೊಂದಿಗೆ ಹೆಣ್ಣು ಕೊಟ್ಟು ವಿವಾಹಾದಿಗಳನ್ನು ನಡೆಸಬಹುದೆಂದು ಎಲ್ಲರೂ ಒಪ್ಪಿದವರಾದರು. ಆ ಹತ್ತು ಮಂದಿ ಈ ರೀತಿಯಲ್ಲಿದ್ದಾರೆ:-
೧. ವೀತಹವ್ಯ   - ಭೃಗು ವಂಶವನ್ನವಲಂಬಿಸಿದವರು
೨. ಮೈತ್ರೇಯ  - ಮೇಲಿನಂತೆ
೩, ಶುನಕ     - ಮೇಲಿನಂತೆ
೪, ವೇನ      - ಮೇಲಿನಂತೆ
೫. ರಥೀತರ    - ಆಂಗೀರಸ ಗೋತ್ರವನ್ನವಲಂಬಿಸಿದವರು
೬. ಮುದ್ಗಲ    - ಮೇಲಿನಂತೆ
೭. ವಿಷ್ಣವೃದ್ಧ    - ಮೇಲಿನಂತೆ
೮. ಹಾರಿತ     - ಮೇಲಿನಂತೆ
೯. ಕಣ್ವ       - ಮೇಲಿನಂತೆ
೧೦.ಸಂಕೃತಿ     - ಮೇಲಿನಂತೆ

     ಪ್ರಕೃತ ಕಾಲದಲ್ಲಿ ಭರತಖಂಡದ ಅಖಿಲ ಬ್ರಾಹ್ಮಣರೆಲ್ಲರೂ ೧೮ ಗುಂಪುಗಳಾಗಿ ವಿಭಾಗಿಸಲ್ಪಟ್ಟಿರುವರು. ಇವರೆಲ್ಲರೂ ಒಂದು ಗುಂಪಿನವರು ಇನ್ನೊಂದು ಗುಂಪಿನೊಂದಿಗೆ ಹೆಣ್ಣು ಕೊಟ್ಟು ತಂದು ವಿವಾಹಾದಿಗಳನ್ನು ನಡೆಸಬಹುದು. ಆದರೆ ತಮ್ಮ ತಮ್ಮ ಗುಂಪಿನಲ್ಲೇ ಹೆಣ್ಣು ಕೊಟ್ಟು ತಂದು ವಿವಾಹಾದಿಗಳನ್ನು ನಡೆಸುವುದು ನಿಷೇಧಿಸಲ್ಪಟ್ಟಿರುವುದು.
     . . . . ಶ್ರೀಮಠದ ಆರಾಧ್ಯದೇವರು ಶ್ರೀ ಲಕ್ಷ್ಮೀನೃಸಿಂಹನಲ್ಲಿ ಪ್ರಾರ್ಥಿಸಿ ಮಾಡುವ ಮಂಗಳಾಶಾಸನಗಳು.
-ಶ್ರೀ ಯದುಗಿರಿ ಯತಿರಾಜ ಸಂಪತ್ಕುಮಾರ
 ರಾಮಾನುಜ ಜೀಯರ್ ಸ್ವಾಮಿಗಳು

*********************
-ಪುಟಗಳು 15,16-
*********************
ಆರೋಗ್ಯ
ಸ್ವಸ್ಥ ದೇಹಾರೋಗ್ಯಕ್ಕಾಗಿ ಸರಳ ಸೂತ್ರಗಳು
ನಿತ್ಯದ ಪಥ್ಯ
  

  
      ರೋಗ ಪರಿಹಾರಕ್ಕೆ ಮತ್ತು ಆರೋಗ್ಯ ರಕ್ಷಣೆಗೆ ಪಥ್ಯವು ಅತ್ಯಾವಶ್ಯವಾಗಿದೆ. ಪಥ ಎಂದರೆ ದಾರಿ - ಪಥ್ಯವೆಂದರೆ ಆರೋಗ್ಯವಾದ ದಾರಿ. ಆರೋಗ್ಯವಂತರು ಕೂಡ ನಿತ್ಯ ಪಾಲಿಸಬೇಕಾದ ಪಥ್ಯದ ನಿಯಮಗಳನ್ನು ಸಂಕ್ಷಿಪ್ರವಾಗಿ ಕೊಟ್ಟಿದೆ:
೧. ಸೂರ್ಯೋದಯಕ್ಕಿಂತ ಕನಿಷ್ಠ ಒಂದು ಗಂಟೆ ಮುಂಚೆ ಏಳುವ ಮಾತ್ರದಿಂದಲೇ ಎಷ್ಟೋ ಕಾಯಿಲೆಗಳು ಗುಣವಾಗುವುದೆಂಬುದು ಅನುಭವದ ಮಾತು. ಆ ಸಮಯದಲ್ಲಿ ಆಕಾಶದಲ್ಲಿ ಪಾಚನಾತ್ಮಕ ಅಗ್ನಿಶಕ್ತಿಯೂ, ವರ್ಧನಾತ್ಮಕ ಸೋಮ ಶಕ್ತಿಯೂ ಇರುವುದೆಂದು ಆಯುರ್ವೇದ ಹೇಳುತ್ತದೆ.  ಆಗ ಕನಿಷ್ಠ ೩-೪ ಮೈಲು ವೇಗದಿಂದ ತಿರುಗಾಡಿ ಬರುವ ವ್ಯಾಯಾಮ ಮಾಡುವುದು ಒಳ್ಳೆಯದು.
೨. ಚಹಾ-ಕಾಫಿಗಳು ಉತ್ತೇಜಕ ಪೇಯಗಳಾಗಿದ್ದು ಉತ್ತೇಜನವು ಇಳಿದೊಡನೆ ಜೀರ್ಣಶಕ್ತಿಯು ಮಂದಗೊಳ್ಳುತದೆ. ಬಹುತರ ರೋಗಗಳೆಲ್ಲ ಅಜೀರ್ಣದಿಂದಲೇ ಹುಟ್ಟಿಕೊಳ್ಳುವವಾದ್ದರಿಂದ ಬರಿ ಹೊಟ್ಟೆಯಲ್ಲಿ ಅವುಗಳನ್ನು ಕುಡಿಯದಿರುವುದು ಉತ್ತಮ. ಎದ್ದ ಮೇಲೆ ಕನಿಷ್ಠ ಎರಡು ಗಂಟೆ ಯಾವ ಆಹಾರವನ್ನೂ ಸೇವಿಸದಿರುವುದು ಒಳಿತು. ನೀರು ಕುಡಿಯಬಹುದು.
೩. ಊಟ-ತಿಂಡಿಗಳ ನಡುವೆ ಹಸಿವೆಯಾದರೆ ಹಾಲೂ ಸೇರಿ ಯಾವುದೇ ಆಹಾರ ಪೇಯಗಳನ್ನು ಎಷ್ಟೇ ಅಲ್ಪ ಪ್ರಮಾಣದಲ್ಲಿ ಸೇವಿಸಿದರೂ ಮುಂದೆ ಕನಿಷ್ಠ ೩-೪ ಗಂಟೆಗಳವರೆಗೆ ಬೇರೆ ಏನನ್ನೂ ಸೇವಿಸಬಾರದು.
೪. ಅಕಾಲದ ಆಹಾರೋಪಾಹಾರಗಳ ಸೇವನವು ಕೂಡ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಗೊತ್ತುಪಡಿಸಿದ ಸಮಯಕ್ಕೆ ಆಹಾರ ಪಾನಗಳು ಸಿಗದಿದ್ದಾಗ ಇಲ್ಲವೆ ಬಿಡುವಿಲ್ಲದಾಗ ಉಪವಾಸ ಇದ್ದು ಮುಂದಿನ ಆಹಾರ ಕಾಲದವರೆಗೆ ಬರಿಯ ನೀರನ್ನು ಕುಡಿಯುವುದು ಒಳ್ಳೆಯದು.
೫. ಉಣಿಸು ತಿನಿಸುಗಳ ಕಾಲದಲ್ಲಿ ಮತ್ತು ತಿಂದೊಡನೆ ಹೆಚ್ಚು ನೀರನ್ನು ಕುಡಿಯಬಾರದು. ೨-೩ ಗಂಟೆಗಳ ಬಳಿಕ ಮೂರು ಗಂಟೆಗೊಮ್ಮೆ ಬೇಕಾದಷ್ಟು ನೀರನ್ನು ಕುಡಿಯಬೇಕು. ನೀರನ್ನಷ್ಟೆ ಅಲ್ಲ, ಉಣ್ಣುವ ಕಾಲದಲ್ಲಿ ಹಾಲು, ಸಾರು, ಮಜ್ಜಿಗೆ ಪಾಯಸದಂತಹ ದ್ರವಾಹಾರಗಳನ್ನು ಕೂಡ ಹೆಚ್ಚು ಸೇವಿಸಿದಲ್ಲಿ ಪಾಚಕ ರಸಗಳು ದುರ್ಬಲವಾಗುವುವು.
೬. ಆಹಾರವು ಎಷ್ಟೇ ಪೌಷ್ಠಿಕವಾಗಿರಲಿ ಅದರೊಳಗಿನ ಪೋಷಕಾಂಶಗಳು ಶರೀರದಿಂದ ಹೀರಲ್ಪಡಬೇಕಾದರೆ ಅದಕ್ಕೆ ಪಾಚಕ ರಸಗಳ ಸಂಸ್ಕಾರವಾಗಲೇ ಬೇಕು. ಅದಕ್ಕಾಗಿ ಆಹಾರ ವಸ್ತುವು ಬಿರುಸಾಗಿರಲಿ, ಮಿದುವಾಗಿರಲಿ - ಪ್ರತಿಯೊಂದು ತುತ್ತನ್ನು ೩೦-೪೦ ಸಲ ನುರಿಸಬೇಕು. ಅದರಿಂದ ಆಹಾರದೊಡನೆ ಜೊಲ್ಲು ಧಾರಾಳವಾಗಿ ಸೇರಿ ಅದರ ಉತ್ತೇಜನದಿಂದ ಆಹಾರ ಮಾರ್ಗದಲ್ಲಿ ಮೇಲಿನಿಂದ ಕೆಳಗಿನವರೆಗೆ ಸ್ರವಿಸಲಿರುವ ಪಾಚಕರಸಗಳಿಗೆ ಉತ್ತೇಜನವು ಸಿಗುವುದು. ಹಾಗೆ ಆಹಾರವನ್ನು ಚೆನ್ನಾಗಿ ಅಗಿಯದಿರುವುದರಿಂದಲೇ ಅನೇಕರಿಗೆ ತುತ್ತು ತುತ್ತಿಗೂ ಬಾಯಿ ಒಣಗಿ ನೀರು ಕುಡಿಯಬೇಕೆನ್ನಿಸುವುದು. ಅಲ್ಲದೇ ಸಾಮಾನ್ಯವಾಗಿ ಹೊಟ್ಟೆ ಉರಿ, ಹುಳಿ ವಾಂತಿಗಳಿಂದ ಬಳಲುತ್ತಿರುವ ರೋಗಿಗಳಲ್ಲಿ ಬಹುತರರು ಆಹಾರವನ್ನು ಅಗಿಯದೇ ನುಂಗುವವರೆ ಆಗಿದ್ದಾರೆಂದು ತಿಳಿಯುವುದು.
೭. ಕಾಯಿಪಲ್ಲೆಗಳನ್ನು ಸಾಧ್ಯವಾದಷ್ಟು ನಿಜ ಸ್ವರೂಪದಲ್ಲಿ, ಇಲ್ಲವೇ ಅತ್ಯಲ್ಪ ಮಸಾಲೆಯೊಡನೆ ಉಪಯೋಗಿಸಬೇಕಲ್ಲದೆ, ಪಲ್ಲೆಗಳನ್ನು ಹೆಚ್ಚು ಪ್ರಮಾಣದಲ್ಲಿ ನಿತ್ಯದ ಊಟದಲ್ಲಿ ಬಳಸಬೇಕು. ಅದರಿಂದ ಮಲ ಮೂತ್ರಾದಿ ವಿಸರ್ಜನೆಗಳಿಗೆ ಅನುಕೂಲವಾಗುವುದಲ್ಲದೆ ರೋಗ ನಿರೋಧಕ ಶಕ್ತಿ ಬಲಗೊಳ್ಳುವುದು.
೮. ಆಹಾರ ಜೀರ್ಣಿಕೆಯಲ್ಲಿ ತುಂಬ ಸಹಾಯಕವಾಗಿರುವ ಮಜ್ಜಿಗೆಯನ್ನು ನಿತ್ಯದ ಊಟದಲ್ಲಿ ಬಳಸಬೇಕು. ಸಾಮಾನ್ಯರು ತಿಳಿದಿರುವಂತೆ ಮಜ್ಜಿಗೆಯು ಶೈತ್ಯವನ್ನುಂಟು ಮಾಡುವುದಿಲ್ಲ.
೯. ಯಾವುದೇ ಹಣ್ಣುಗಳನ್ನು ಮತ್ತು ಸಿಹಿ ಪದಾರ್ಥಗಳನ್ನು ಊಟಕ್ಕೆ ಮುಂಚೆ ಸೇವಿಸಬೇಕು.
೧೦. ಆರೋಗ್ಯವಾಗಿರುವವರು ಹಗಲಿನ ಸಮಯದಲ್ಲಿ ಮಲಗಬಾರದು. ರೋಗಿಗಳು, ವೃದ್ಧರು ಮತ್ತು ಬಹಳ ಆಲಸ್ಯವುಂಟಾದಾಗ ಪೂರ್ಣ ಮಲಗದೇ ಕುಳಿತಿರುವ ಭಂಗಿಯಲ್ಲಿ ಆರಾಮ ಕುರ್ಚಿಯಲ್ಲಿ ಇಲ್ಲವೇ ದಿಂಬುಗಳನ್ನಿಟ್ಟುಕೊಂಡು ವಿಶ್ರಾಂತಿ/ನಿದ್ದೆ ಮಾಡಬಹುದು.
೧೧. ರಾತ್ರಿ ಊಟವಾಗಿ ಕನಿಷ್ಟ ೨-೩ ಗಂಟೆಗಳಾದರೂ ಎಚ್ಚರವಾಗಿ ಇರಬೇಕಲ್ಲದೆ, ಸ್ವಲ್ಪ ಅತ್ತಿತ್ತ ಓಡಾಡಿಕೊಂಡು ಬರುವುದು ಕೂಡ ಹಿತಕರವಾಗಿದೆ. ಅಜೀರ್ಣದಿಂದ ಮತ್ತು ತಜ್ಜನ್ಯ ಕಾಯಿಲೆಗಳಿಂದ ಬಳಲುವವರಂತೂ ಈ ನಿಯಮವನ್ನು  ಪಾಲಿಸಲೇಬೇಕು.
೧೨. ಹಾಲು ಪುಷ್ಟಿದಾಯಕವಾದ ಆಹಾರ. ರಾತ್ರಿ ಮಲಗುವಾಗ ಹಾಲು ಕುಡಿಯುವ ಅಭ್ಯಾಸ ಸರಿಯಲ್ಲ. ಕೆಮ್ಮು, ನೆಗಡಿ, ಉಬ್ಬಸ, ಅಜೀರ್ಣಗಳುಳ್ಳವರಿಗಂತೂ ಆ ಅಭ್ಯಾಸವು ಅಪಾಯಕರ. ಹಸಿದಾಗ ಹಾಲನ್ನು ಕುಡಿಯುವುದಿದ್ದರೂ ಅದಕ್ಕೆ ಸಕ್ಕರೆಯನ್ನು ಹಾಕಬಾರದು.  ಹಸಿವಾದಾಗ ಇಲ್ಲವೇ ಊಟದ ನಂತರ ೧ ಲೋಟ ಹಾಲು ಸೇವಿಸುವುದು ಉತ್ತಮ.
೧೩. ನಿತ್ಯವೂ ಕಾಲಕಾಲಕ್ಕೆ ಸಾಕಷ್ಟು ಮಲಮೂತ್ರ ಬೆವರುಗಳು ಯಾರಿಗೆ ನೈಸರ್ಗಿಕವಾಗಿಯೇ ವಿಸರ್ಜಿಸಲ್ಪಡುತ್ತಿರುವವೋ ಅವರು ಕಾಯಿಲೆಗೆ ಒಳಗಾಗಲಾರರು. ಅವುಗಳ ಸುಖ ಪ್ರವೃತ್ತಿಗೆ ಅನುಕೂಲವಾಗುವಂತೆ ವ್ಯಾಯಾಮ ಮತ್ತು ಸಾಕಷ್ಟು ನೀರಿನ ಪಾನ ರೂಢಿಸಿಕೊಳ್ಳಬೇಕು. ಹಾಗೆಯೇ ಅವುಗಳು ಪ್ರವೃತ್ತವಾದಾಗ ಬಿಡುವಿಲ್ಲವೆಂಬ ನೆವದಿಂದ ವಿಸರ್ಜನಕ್ಕೆ ತಡ ಮಾಡಬಾರದು. ಬಹುತರ ಎಲ್ಲ ರೋಗಗಳು ಮಲಮೂತ್ರಾದಿಗಳ ತಡೆಯಿಂದಾಗುತ್ತವೆಂದು ಆಯುರ್ವೇದ ಹೇಳುತ್ತದೆ.
೧೪.  ನಮ್ಮ ಆಹಾರ-ವಿಹಾರಗಳಲ್ಲಿಯ  ತಪ್ಪುಗಳಿಂದ ಶರೀರದಲ್ಲಿ ಹುಟ್ಟಿಕೊಳ್ಳುವ ಮಲಾಧಿಕ್ಯವನ್ನು ಹೊರ ನೂಕುವ ಪ್ರಕೃತಿಯ ಪ್ರಯತ್ನವೇ ರೋಗ ರೂಪವನ್ನು ತಾಳುತ್ತದೆಂದು ಆಯುರ್ವೇದವು ಹೇಳುತ್ತದೆ. ಆದ್ದರಿಂದ ಯಾವುದೊಂದು ರೋಗವು ಕಾಣಿಸಿಕೊಂಡೊಡನೆ ಅದನ್ನು ಶರೀರದೊಳಗೆ ಅಡಗಿಸಿಬಿಡುವ ಔಷಧೋಪಚಾರ ಮಾಡಿದರೆ ಆ ಮಲ ಸಂಚಯದಿಂದ ಬೇರೆ ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ. ಎಲ್ಲ ರೋಗಗಳು ಪ್ರಾಣ ನಾಶಕವೇ ಆಗಿವೆಯೆಂಬ ಭಯವೇ ಎಲ್ಲಕ್ಕೂ ಡಾಕ್ಟರುಗಳ ಕಡೆಗೆ ಧಾವಿಸಲು ಕಾರಣವಾಗಿದೆ.
೧೫. ಸಿಟ್ಟು, ಹೊಟ್ಟೆಕಿಚ್ಚು, ಹಗೆತನ, ಚಿಂತೆಗಳುಳ್ಳವರಿಗೆ ರೋಗಗಳು ಬೇಗ ಗುಣವಾಗುವುದಿಲ್ಲ. ಆದ್ದರಿಂದ ಅವನ್ನು ವರ್ಜಿಸಿ ಮನಸ್ಸು, ಪ್ರೀತಿ, ಸಹಾನುಭೂತಿ, ಪರೋಪಕಾರೇಚ್ಛೆಗಳಿಂದ ಶಾಂತವಿರಿಸಿಕೊಳ್ಳಬೇಕು. ಮನೋಲ್ಲಾಸಕ್ಕೆ ಮತ್ತು ಆರೋಗ್ಯಕ್ಕೆ ಸಂಗೀತ ಸಹ ಒಂದು ಉತ್ತಮ ಗುಣಕಾರಿ ಸಾಧನ.
ಸಾರಾಂಶ
೧. ಎರಡು ಸಲದ ಊಟದ ಹೊರತಾಗಿ ನಡುವೆ ಏನನ್ನೂ ಸೇವಿಸಬಾರದು. ಹಸಿವಾದಲ್ಲಿ ಮಧ್ಯದಲ್ಲಿ ಒಂದು ಸಲ ಹಾಲು, ಮಜ್ಜಿಗೆ ಅಥವಾ ಹಣ್ಣು ಹಂಪಲುಗಳನ್ನು ಸೇವಿಸಬಹುದು. ನೀರನ್ನು ಕಾಲಕಾಲಕ್ಕೆ ಧಾರಾಳವಾಗಿ ಕುಡಿಯಬೇಕು. ಅರ್ಧ ಹೊಟ್ಟೆ ಘನಾಹಾರ, ಕಾಲುಭಾಗ ದ್ರವಾಹಾರ, ಮಿಕ್ಕ ಕಾಲು ಹೊಟ್ಟೆ ಹಾಗೆಯೇ ತೆರವಾಗಿಟ್ಟುಕೊಳ್ಳುವುದು ಎಲ್ಲರಿಗೂ ಹಿತಕಾರಿ.

೨. ಚಹಾ, ಕಾಫಿ, ಬೀಡಿ, ಸಿಗರೇಟು, ನಶ್ಯ, ಮದ್ಯ, ತಂಬಾಕುಗಳನ್ನು ಪೂರ್ಣವಾಗಿ ವರ್ಜಿಸಬೇಕು. ಉಪ್ಪು, ಕಾರ, ಮಸಾಲೆ, ಕರಿದ ತಿನಿಸು, ಮಿಠಾಯಿಗಳನ್ನು ಸಾಧ್ಯವಾದಷ್ಟು ಕಡಿಮೆ ಸೇವಿಸಬೇಕು.
೩. ಆಹಾರ ಸೇವಿಸುವಾಗ ಪ್ರತಿಯೊಂದು ತುತ್ತನ್ನೂ ಕನಿಷ್ಟ ೩೦-೪೦ ಸಲ ಅಗಿದು (ನುರಿಸಿ) ನುಂಗಬೇಕು. ಹಣ್ಣು,  ಅನ್ನ, ರಾಗಿಮುದ್ದೆ ಮುಂತಾದ ಮೃದು ಪದಾರ್ಥಗಳನ್ನೂ ಚೆನ್ನಾಗಿ ನುರಿಸದೆ ನುಂಗಬಾರದು.
೪. ದಿನಾ ಚೆನ್ನಾಗಿ ಮೈ ಬೆವರುವಂತೆ ತಕ್ಕಷ್ಟು ವ್ಯಾಯಾಮ, ಆಟ ಅಥವಾ ವೇಗದಿಂದ ತಿರುಗಾಟಗಳನ್ನು    (೩-೪ ಮೈಲು) ಮಾಡಬೇಕು.
೫. ಯೋಗ್ಯವಾದದ್ದು:  ಹೊತ್ತಿಗೆ ಸರಿಯಾಗಿ ಆಹಾರ ವಿಹಾರ, ಬಲಕೊಡುವ ಮತ್ತು ಬೇಗನೆ ಜೀರ್ಣವಾಗುವಂತಹ ತಾಜಾ ಆಹಾರ, ಅಕ್ಕಿ, ಗೋಧಿಹಿಟ್ಟು, ಹೆಸರು ಬೇಳೆ, ಜೋಳ, ಸಜ್ಜೆ, ರಾಗಿ, ತೊಗರಿ ಬೆಳೆಯ ಕಟ್ಟು, ಎಳೆಬದನೆಕಾಯಿ, ಪಡವಲಕಾಯಿ, ಸೌತೆಕಾಯಿ, ಮೂಲಂಗಿ, ಗಜ್ಜರಿ, ಕುಂಬಳಕಾಯಿ, ಹೀರೇಕಾಯಿ, ಬಾಳೆಯ ಹೂ-ಕಾಯಿ ದಿಂಡುಗಳು, ಸೊಪ್ಪುಗಳು, ಮೆಣಸು, ಶುಂಠಿ, ಜೀರಿಗೆ, ಕೊತ್ತಂಬರಿ ಬೀಜ, ಅರಿಸಿನ, ಹಾಲು, ತುಪ್ಪ, ತಾಜಾ ಮಜ್ಜಿಗೆ, ಕೆನೆ, ನಿಂಬೆಹಣ್ಣು, ದ್ರಾಕ್ಷಿ, ಕಿತ್ತಲೆ, ದಾಳಿಂಬೆ, ಮೊಸಂಬಿ, ಟೊಮೆಟೋ ಹಣ್ಣು, ಬೆಳಿಗ್ಗೆ ತಣ್ಣೀರಿನ ಅಥವಾ ಬೆಚ್ಚಗಾದ ನೀರಿನ ಸ್ನಾನ, ಕುಡಿಯಲಿಕ್ಕೆ ಚೆನ್ನಾಗಿ ಕಾದು ಆರಿದ ನೀರು ಇಲ್ಲವೇ ಬಾವಿಯ ಸಿಹಿ ತಣ್ಣೀರು.
೬. ಬಿಡತಕ್ಕದ್ದು:  ನಿದ್ದೆ ಕೆಡಬಾರದು, ಹೊಟ್ಟೆಯನ್ನು ಬಹಳವಾಗಿ ತುಂಬಿಸಬಾರದು; ಚಹಾ, ಕಾಫಿ, ಕೊಕೊ, ಸಾರಾಯಿ, ಗಾಂಜಾ, ಅಫೀಮು, ಹೊಗೆಸೊಪ್ಪು, ಮೊಸರು, ಹಸಿಮೆಣಸಿನಕಾಯಿ, ಸಾಸಿವೆ, ಗಡ್ಡೆ ಗೆಣಸುಗಳು ವರ್ಜ್ಯ ಮತ್ತು ರೋಗಾವಧಿಯಲ್ಲಿ ಮಾಂಸ, ಮೊಟ್ಟೆ, ಮೀನುಗಳು ಕೂಡ ಪೂರ್ಣ ವರ್ಜ್ಯ.


ವಿವಿಧ ಮೂಲಗಳಿಂದ ಸಂಗ್ರಹ ಮತ್ತು ಪ್ರಸ್ತುತಿ: 
-ಬಿ.ಎಸ್.ಆರ್. ದೀಪಕ್,ಶಿವಮೊಗ್ಗ

*********************
ಮಿನಿಕಥೆ

ಜಗಳ

     ಸಮಯವಿದ್ದುದರಿಂದ ಮೂಢ ತನ್ನ ಗೆಳೆಯ ಮಂಕನನ್ನು ಮಾತನಾಡಿಸಿಕೊಂಡು ಬರಲು ಆತನ ಮನೆಗೆ ಹೋದ. ಆ ಸಮಯದಲ್ಲಿ ಮಂಕ ಮತ್ತು ಅವನ ಪತ್ನಿಯ ನಡುವೆ ಯಾವುದೋ ವಿಷಯಕ್ಕೆ ಬಿರುಸಿನ ವಾಗ್ವಾದ ನಡೆದಿತ್ತು. ಸಂದರ್ಭ ಸರಿಯಿಲ್ಲವೆಂದು ಮೂಢ ಹಿಂತಿರುಗಿ ಹೋಗಬೇಕೆಂದಿದ್ದಾಗ ಅವನನ್ನು ನೋಡಿದ ಗೆಳೆಯ 'ಏಯ್, ಬಾರೋ' ಎಂದು ನಗುತ್ತಾ ಆಹ್ವಾನಿಸಿದ. 'ಊರಗಲ ಬಾಯಿ ಮಾಡಿಕೊಂಡು ಮಾತಾಡಿಸೋದು ನೋಡು' ಎಂದು ಮೂದಲಿಸಿದ ಪತ್ನಿ ಮೂಢನಿಗೆ 'ನೋಡಣ್ಣಾ, ಇವರು ಊರಿನವರೊಂದಿಗೆಲ್ಲಾ ನಗುನಗುತ್ತಾ ಮಾತಾಡುತ್ತಾರೆ. ನನ್ನ ಹತ್ತಿರ ಮುಖ ಗಂಟಿಕ್ಕಿಕೊಂಡು ಮಾತಾಡುತ್ತಾರೆ' ಎಂದು ದೂರಿದಳು. ಮೂಢ ಸುಮ್ಮನಿರಲಾರದೆ 'ಊರಿನವರು ನಗುತ್ತಾ ಮಾತಾಡಿಸುವಾಗ ಇವನು ಸಿಟ್ಟು ಮಾಡಿಕೊಂಡು ಮಾತಾಡಲು ಆಗುತ್ತೇನಮ್ಮಾ? ನೀನೂ ನಗುತ್ತಾ ಮಾತಾಡಿಸು. ಆಗ ನೋಡು. ಮುಖ ಗಂಟಿಕ್ಕುವುದಿರಲಿ, ಮುಡಿಯಲು ಮಾರುದ್ದಾ ಮಲ್ಲಿಗೆ ಹೂವು ತರುತ್ತಾನೆ' ಎಂದ. ಮಂಕನ ಪತ್ನಿ 'ಅದಕ್ಕೇ ನಿಮ್ಮನ್ನು ಎಲ್ಲರೂ ಮೂಢ ಅನ್ನುವುದು' ಎಂದು ಹೇಳಿ ಒಳಗೆ ಹೋದರೂ ಅವಳ  ಒಳಮನಸ್ಸು  'ಅದೂ ನಿಜ' ಎಂದು ಹೇಳುತ್ತಿತ್ತು. ಗೆಳೆಯರು ಮಾತನಾಡುತ್ತಿದ್ದಾಗ ಮಂಕನಿಗೆ ಇಷ್ಟವಾದ ತಿಂಡಿಯ ಜೊತೆಗೆ ಕಾಫಿ ಇಬ್ಬರಿಗೂ ಬಂದಿತು. ಪತಿ ಪತ್ನಿಯರ ನಡುವೆ ಕಣ್ಣುಗಳು ಮಾತಾಡಿದವು. ತಿಂಡಿಯ ರುಚಿ ಹೆಚ್ಚಾಯಿತು.
                               -  ರಾಜು.
* * * * *

****************
-ಪುಟಗಳು 17,18-
****************

ಸುದ್ದಿ - ಕಿರಣ !!
     ಸಾಗರ ತಾ. ಇತಿಹಾಸ ಸಮ್ಮೇಳನ: ದಿನಾಂಕ ೧೦-೦೧-೦೯ರಂದು ತಾ. ಇತಿಹಾಸ ವೇದಿಕೆ ಮತ್ತು ಸಹೃದಯ ಬಳಗದ ಆಶ್ರಯದಲ್ಲಿ ನಡೆಯಿತು. ಸಂಶೋಧನಾರತ್ನ ಗುಂಡಾಜೋಯಿಸರು ಸಮ್ಮೇಳನಾಧ್ಯಕ್ಷರಾಗಿದ್ದು  ಡಾ. ವೆಂಕಟೇಶ ಜೋಯಿಸರ ಮರೆಯಲಾಗದ ಕೆಳದಿ ಸಾಮ್ರಾಜ್ಯಪುಸ್ತಕ ಬಿಡುಗಡೆಯಾಯಿತು. ಶ್ರೀ ಗುಂಡಾಜೋಯಿಸ್‌ರವರನ್ನು ಸನ್ಮಾನಿಸಲಾಯಿತು.

ಸಮಾರೋಪ: ನವದೆಹಲಿಯ ರಾಷ್ಟ್ರೀಯ ಹಸ್ತಪ್ರತಿ ಅಭಿಯಾನ ಮತ್ತು ಕೆಳದಿಯ ಹಸ್ತಪ್ರತಿ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ೨೦೦೮-೦೯ರ ಹಸ್ತಪ್ರತಿ ಜಾಗೃತಿ ಅಭಿಯಾನ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಶಿವಮೊಗ್ಗದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ೨೦-೦೩-೦೯ರಂದು ನಡೆಯಿತು. ಶ್ರೀಮತಿ ಡಾ. ಉಷಾಸುರೇಶ್, ನಿರ್ದೇಶಕರು, ರಾಜ್ಯ ಪತ್ರಾಗಾರ ನಿರ್ದೇಶನಾಲಯರವರು ಶ್ರೀ ಕೆಳದಿ ಗುಂಡಾಜೋಯಿಸರು ಸಂಪಾದಿಸಿದ ಪುಸ್ತಕ ಗೋಕರ್ಣ ಶಾಸನಗಳು- ಸಂಪುಟ೧ರ ಬಿಡುಗಡೆ ಮಾಡಿದರು. ಕೆಳದಿ ವಸ್ತು ಸಂಗ್ರಹಾಲಯದ ಸಂಚಾಲಕ ಡಾ. ರಾಜಾರಾಮಹೆಗಡೆರವರು ಶ್ರೀ ಕವಿ ವೆಂ. ಸುರೇಶ್ ಇಂಗ್ಲಿಷ್ ಭಾಷೆಗೆ ಅನುವಾದಿಸಿದ ಪುಸ್ತಕ 'The Unforgettable Keladi Empire' ಪುಸ್ತಕ ಬಿಡುಗಡೆ ಮಾಡಿದರು. ಡಾ. ಗೋಪಾಲಕೃಷ್ಣ ಮತ್ತು ಡಾ. ಹೆಚ್.ಎಸ್. ಗೋಪಾಲರಾವ್‌ರವರು ಮುಖ್ಯ ಅತಿಥಿಗಳಾಗಿದ್ದರು.

ಸದಸ್ಯತ್ವ: ಶ್ರೀ ಕ.ವೆಂ. ನಾಗರಾಜ್‌ರವರು ಕರ್ನಾಟಕ ಇತಿಹಾಸ ಅಕಾಡೆಮಿಯ ಆಜೀವ ಸದಸ್ಯರಾಗಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಶುಭವಿವಾಹ: (೧)ಹೊನ್ನಾಳಿಯ ಶ್ರೀ ಹೆಚ್. ಕೃಷ್ಣಮೂರ್ತಿಜೋಯಿಸ್ ಮತ್ತು ಶ್ರೀಮತಿ ಜಯಶ್ರೀರವರ ಸುಪುತ್ರಿ ಚಿ.ಸೌ. ಹೆಚ್.ಕೆ.ಮಮತಾರವರ ವಿವಾಹ ಬೆಂಗಳೂರಿನ ಶ್ರೀ ಎಸ್.ಟಿ. ಸತ್ಯನಾರಾಯಣರಾವ್ ಮತ್ತು ಶ್ರೀಮತಿ ಸುಮಿತ್ರರವರ ಸುಪುತ್ರ ಚಿ.ರಾ. ಎಸ್. ಶ್ರೀಕಾಂತ್ ರವರೊಂದಿಗೆ ಶಿವಮೊಗ್ಗದ ಆದಿನಾಥ ಜೈನಭವನದಲ್ಲಿ ದಿನಾಂಕ ೨೨-೧೨-೨೦೦೮ರಂದು ಬಂಧುಮಿತ್ರರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.

(೨) ಶ್ರೀ ಎಂ.ಎಸ್.ನಾಗೇಂದ್ರ ಮತ್ತು ಶ್ರೀಮತಿ ನಾಗೇಂದ್ರ, ಬೆಂಗಳೂರು ಇವರ ಪುತ್ರಿ ಡಾ. ರೋಹಿಣಿರವರ ವಿವಾಹ ಡಾ. ನಾಗೇಂದ್ರರವರೊoದಿಗೆ ಬೆಂಗಳೂರಿನ ಜಯನಗರದಲ್ಲಿ ಸಂಭ್ರಮದಿಂದ ನೆರವೇರಿತು.

ಬ್ರಹ್ಮೋಪದೇಶ: (೧)ಬೆಂಗಳೂರಿನ ಶ್ರೀ ಭಾಸ್ಕರ್ ಮತ್ತು ಶ್ರೀಮತಿ ಅನುಪಮಾರವರ ದ್ವಿತೀಯ ಪುತ್ರ ಚಿ.ರಾ. ಸಾಗರನ ಬ್ರಹ್ಮೋಪದೇಶ ಕಾರ್ಯ ಜಯನಗರದ ಜಯರಾಮ ಸೇವಾಮಂಡಳಿಯಲ್ಲಿ ದಿನಾಂಕ ೧೬-೦೨-೦೯ರಂದು ಬಂಧುಮಿತ್ರರ ಸಮ್ಮುಖದಲ್ಲಿ ನೆರವೇರಿತು.

(೨) ಬೆಂಗಳೂರಿನ ಶ್ರೀ ಬಿ.ಎಲ್.ವೆಂಕಟೇಶಮೂರ್ತಿ ಮತ್ತು ಶ್ರೀಮತಿ ಪದ್ಮಲತಾರವರ ಪುತ್ರ ಚಿ.ಶಶಾಂಕನ ಬ್ರಹ್ಮೋಪನಯನ ತ್ಯಾಗರಾಜನಗರದಲ್ಲಿ ದಿನಾಂಕ ೭-೫-೨೦೦೯ರಮದು ನಡೆಯಿತು.

(೩) ಶಿವಮೊಗ್ಗದ ಶ್ರೀಮತಿ ವೀಣಾ ಮತ್ತು ಶ್ರೀ ಸೋಮೇಶ್ವರ ಜೋಷಿರವರ ಪುತ್ರ ಚಿ.ಸುನಿಲನ ಬ್ರಹ್ಮೋಪದೇಶ ದಿನಾಂಕ ೧-೫-೨೦೦೯ರಂದು ನೆರವೇರಿತು.

ಕಾರ್ಯಕ್ರಮ: ೧) ಬೆಂಗಳೂರಿನ ಶೇಷಾದ್ರಿಪುರಂ ರಾಮಸೇವಾ ಸಮಿತಿಯ ಕಾರ್ಯಕ್ರಮದಲ್ಲಿ ದಿನಾಂಕ ೨೪-೪-೨೦೦೯ರಂದು ಕು. ಬಿ.ಎಸ್.ಆರ್. ಅಂಬಿಕಾ ಮತ್ತು ವಿ. ಬಿ.ಎಸ್.ಆ. ದೀಪಕ್ ರವರ ದ್ವಂದ್ವ ವಯೊಲಿನ್ ಕಛೇರಿ ಯಶಸ್ವಿಯಾಗಿ ನಡೆಯಿತು.
೨) ದಿನಾಂಕ ೯-೫-೨೦೦೯ರಂದು ಶ್ರೀ ಕೂಡಲಿ ಜಗನ್ನಾಥಶಾಸ್ತ್ರಿಯವರು ಬರೆದ ಮತ್ತು ಶ್ರೀ ಕವಿಸುರೇಶ್ ರವರು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ ಕೂಡಲಿ ಕ್ಷೇತ್ರ ಧರ್ಶನ ಪುಸ್ತಕವನ್ನು ಶ್ರೀ ಕೂಡಲಿ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮಿಗಳವರ ಸನ್ನಿಧಿಯಲ್ಲಿ ಲೋಕಾರ್ಪಣಗೊಳಿಸಲಾಯಿತು.

ಬದಲಾದ ವಿಳಾಸ:   ಶ್ರೀ ಎನ್. ವಿನಯ, ನಂ. ೪೨೮, ರಂಗಶ್ರೀ, ೫ನೆಯ ಅಡ್ಡರಸ್ತೆ, ೪ನೆಯ ಮುಖ್ಯರಸ್ತೆ, ಜೆ.ಪಿ. ನಗರ - ೩ನೆಯ ಹಂತ, ಬೆಂಗಳೂರು - ೫೬೦೦೭೮.     ದೂ. ೯೪೪೮೮ ೭೦೯೫೯.


ಶ್ರೀಮತಿ ಸಂಧ್ಯಾ ಪ್ರಹ್ಲಾದರಾವ್, ಫ್ಲಾಟ್ ನಂ.೨೦೩, ೨ನೆ ಮಹಡಿ, ಘರೋಂಡಾ ವೆಂಕಟಾಚಲಪತಿ ಅಪಾರ್ಟ್‌ಮೆಂಟ್, ೮೧ಎ, ಟೀಚರ್ಸ್ ಕಾಲೋನಿ, ಈಸ್ಟ್ ಮರೇದಪಲ್ಲಿ, ಸಿಕಂದರಾಬಾದ್ -೫೦೦೦೨೬, ಆಂಧ್ರಪ್ರದೇಶ.             ದೂ. ೯೯೫೯೫೩೩೦೦೨

ತಿದ್ದುಪಡಿ: ಶ್ರೀ ಬಿ.ವಿ.ಹರ್ಷ  ದಕ್ಷಿಣ ಕೊರಿಯಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು ಅಮೆರಿಕೆಯ ಕೊಲಂಬೋ ವಿಶ್ವವಿದ್ಯಾನಿಲಯದ M.Tech. ಪದವಿಯನ್ನು on-line ನಲ್ಲಿ ಯಶಸ್ವಿಯಾಗಿ ಮುಗಿಸಿದ್ದಾರೆಂದು ಹಿಂದಿನ ಸಂಚಿಕೆಯಲ್ಲಿ ಪ್ರಕಟಿಸಿದ್ದು ವಿಶ್ವವಿದ್ಯಾನಿಲಯದ ಹೆಸರು ಕೊಲಂಬೋ ಬದಲಿಗೆ ಕೇಂಬ್ರಿಡ್ಜ್ ಎಂದು ಓದಿಕೊಳ್ಳಲು ಕೋರಿದೆ. ದಕ್ಷಿಣ ಕೊರಿಯಾದಲ್ಲಿನ ನಿಯೋಜಿತ ಕಾರ್ಯ ಮುಗಿಸಿ ಬೆಂಗಳೂರಿನ SAMSUNG ಸಂಸ್ಥೆಯ ಕೆಲಸಕ್ಕೆ ಮರಳಿದ್ದಾರೆ.

ದಾಂಪತ್ಯ ಜೀವನದ ೬೧ನೆಯ ವರ್ಷಕ್ಕೆ:  


  ದಿನಾಂಕ ೨೩-೫-೨೦೦೯ರಂದು ದಾಂಪತ್ಯ ಜೀವನದ ೬೧ನೆಯ ವರ್ಷಕ್ಕೆ ಕಾಲಿರಿಸಿದ ಶ್ರೀ ಕವಿ ವೆoಕಟಸುಬ್ಬರಾವ್ ಮತ್ತು ಶ್ರೀಮತಿ ಸೀತಮ್ಮನವರನ್ನು ಗೌರವಿಸಿ, ಶಿವಮೊಗ್ಗದ ಶ್ರೀ ಕವಿಸುರೇಶರವರ ಮನೆಯಲ್ಲಿ ಸರಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
     ಸುದೀರ್ಘ ಆರೋಗ್ಯ ಮತ್ತು ಆಯಸ್ಸನ್ನು ಇವರಿಬ್ಬರಿಗೂ ಭಗವಂತ ಕರುಣಿಸಲಿ ಎಂಬುದು ಕವಿಕಿರಣ ಬಳಗದ ಹಾರೈಕೆ.

********************
ಕವಿ ಪ್ರಕಾಶನದ ಪ್ರಕಟಣೆಗಳು

೧. ಹಳೇ ಬೇರು - ಹೊಸ ಚಿಗುರು - ಕವಿ ವಂಶಸ್ಥರ ಸ್ಥೂಲ ಪರಿಚಯ ಮತ್ತು ವಂಶಾವಳಿ - ಲೇ: ಕವಿ ವೆಂ. ಸುರೇಶ್, ಪು: ೧೨೬. ಬೆಲೆ: ರೂ. ೧೨೫/-
೨. Karmayogi - Kalavallabha S.K. Lingannaiya - a concise biography of Sri S.K. Lingannaiya - Author: Kavi Suresh. P:114. Price: Rs. 80/- 
೩. ಉತ್ಕೃಷ್ಟದೆಡೆಗೆ - ಲೇಖನಗಳ ಸಂಗ್ರಹ - ಲೇ: ಕವಿ ವೆಂ. ಸುರೇಶ್, ಪು:೯೮, ಬೆಲೆ: ರೂ. ೭೫/-
೪. ಕವಿಸಂಪರ್ಕವಾಹಿನಿ (ದೂರವಾಣಿಕೈಪಿಡಿ) - ಸಂ. ಕವಿ ಸುರೇಶ್, ಪು:೨೬, ಬೆಲೆ: ರೂ.೧೫/-
೫. ಕವಿ ಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ -(ವ್ಯಕ್ತಿಚಿತ್ರಣ)-   ಲೇ: ಕ. ವೆಂ. ನಾಗರಾಜ್, ಹಾಸನ. ಪು.೬೦, ಬೆಲೆ: ರೂ.೪೦/-.
* * * *
(ತಿಳಿದ ಮತ್ತು ತಿಳಿಸಲಾದ ಸುದ್ದಿಗಳನ್ನು ಪ್ರಕಟಿಸಿದೆ. -ಸಂ.)
******************

ಸ್ವೀಕರಿಸಿದ ಕೃತಿಗಳು:

೧. ಕೆಳದಿ ರಾಣಿ ಚೆನ್ನಮ್ಮ - ಮಕ್ಕಳ ಐತಿಹಾಸಿಕ ಕಾದಂಬರಿ, ಲೇ: ಮಾರ್ಪಳ್ಳಿ ಆರ್. ಮಂಜುನಾಥ್, ಪು: ೫೨, ಬೆಲೆ: ರೂ. ೩೦/-, ಪ್ರ: ಶ್ರೀ ಮಹಾಗಣಪತಿ ಪ್ರಕಾಶನ, ಶಿವಮೊಗ್ಗ.
೨. ಮರೆಯಲಾಗದ ಕೆಳದಿ ಸಾಮ್ರಾಜ್ಯ - ಸಂಕ್ಷಿಪ್ತ ಚರಿತ್ರೆ- ಲೇ: ಡಾ. ಕೆ. ವೆಂಕಟೇಶ ಜೋಯಿಸ್, ಪು: ೬೪, ಬೆಲೆ: ರೂ. ೩೫/-, ಪ್ರ: ಶ್ರೀ ಸರಸ್ವತಿ ಸೇವಾ ಸಮಿತಿ (ರಿ), ಕೆಳದಿ.
೩. The Unforgettable Keladi Empire - ಮೇಲಿನ ಪುಸ್ತಕದ ಇಂಗ್ಲಿಷ್ ಅನುವಾದ, ಅನುವಾದಕ: ಕವಿಸುರೇಶ್, ಪು: ೬೪, ಬೆಲೆ: ರೂ.೩೫/-, ಪ್ರ: ಶ್ರೀ ಸರಸ್ವತಿ ಸೇವಾ ಸಮಿತಿ (ರಿ), ಕೆಳದಿ.
೪. ಆಚೆ ಈಚೆಗಳಾಚೆ... -ಕವನ ಸಂಕಲನ- ಲೇ: ಯಶೋದಾ ಖಂಡೋಬರಾವ್, ಪು:೧೦೩, ಬೆಲೆ:ರೂ.೮೦ ಪ್ರ: ಮಗರ್ ಪಬ್ಲಿಕೇಶನ್, ಶಿವಮೊಗ್ಗ.
೫. ಕೆಳದಿ ವಸ್ತು ಸಂಗ್ರಹಾಲಯದಲ್ಲಿರುವ ಗೋಕರ್ಣ ಇತಿಹಾಸ ಶಾಸನಗಳು-ಭಾಗ-೧. ಸಂ: ಕೆಳದಿ ಗುಂಡಾಜೋಯಿಸ್, ಪು:೧೫೬, ಬೆಲೆ: ರೂ.೧೩೦/-. ಪ್ರ: ಕರ್ನಾಟಕ ರಾಜ್ಯ ಪತ್ರಾಗಾರ ನಿರ್ದೇಶನಾಲಯ, ಕೆಳದಿ ವ.ಸಂ.ಇ.ಸಂ.ಕೇಂದ್ರ, ಕೆಳದಿ.
೬. ಕೂಡಲಿ ಕ್ಷೇತ್ರ ದರ್ಶನ - ಶ್ರೀ ಕೂಡಲಿ ಜಗನ್ನಾಥಶಾಸ್ತ್ರಿ (ಕನ್ನಡದಲ್ಲಿ) - ಶ್ರೀ ಕವಿ ಸುರೇಶ್ (ಆಂಗ್ಲಭಾಷೆಯಲ್ಲಿ) ಪುಟ:, ಬೆಲೆ -೪೦ರೂ. ಪ್ರ. ಶ್ರೀ ಕೃಪಾ ಪ್ರಕಾಶನ.
***********************

ಶ್ರದ್ಧಾಂಜಲಿ



    ದಿನಾಂಕ ೧೪-೫-೨೦೦೯ರಂದು ಶಿಕಾರಿಪುರದ ಶ್ರೀಮತಿ ವಿನೋದಾಬಾಯಿ ಗೋಪಾಲರಾವ್ ರವರು (ಕವಿ ಶ್ರೀಕಂಠಯ್ಯ ಮತ್ತು ಶ್ರೀಮತಿ ಭಾಗೀರಥಮ್ಮನವರ ಪುತ್ರಿ) ವಿಧಿವಶರಾಗಿದ್ದು ಅವರ ಅಪಾರ ಬಂಧುವರ್ಗದವರ ದುಃಖದಲ್ಲಿ ಕವಿಕಿರಣ ಬಳಗ ಭಾಗಿಯಾಗಿರುವುದಲ್ಲದೆ, ಅವರ ಆತ್ಮಕ್ಕೆ ಶಾಂತಿ ಬಯಸುತ್ತದೆ.
*******************

ಪತ್ರಿಕೆಯ ಸಂಚಿಕೆಗಳನ್ನು ಸಂಗ್ರಹಿಸಿಡಿ


 ಕವಿ ಕುಟುಂಬಗಳ ಕುರಿತು ಅಮೂಲ್ಯ ಮಾಹಿತಿಗಳು ಪ್ರತಿ ಸಂಚಿಕೆಯಲ್ಲೂ ಇರುವುದರಿಂದ ಎಲ್ಲಾ ಸಂಚಿಕೆಗಳನ್ನು ಕವಿ ಕುಟುಂಬಗಳವರು ಕುಟುಂಬದ ದಾಖಲೆಯಾಗಿ ಸಂರಕ್ಷಿಸಿಡಲು ಕೋರಿದೆ. ಮುಂದಿನ ಪೀಳಿಗೆಗೂ ಇದು ಉಪಯುಕ್ತವಾಗಲಿದೆ.
-ಸಂ.

**************************************
ನೀವು ಈಗ ಇರುವುದರಲ್ಲಿ ಸಂತೋಷ ಕಾಣಲಾಗದಿದ್ದರೆ ನೀವು ಹೆಚ್ಚು ಪಡೆದಾಗಲೂ ಸಂತೋಷ ಕಾಣಲಾರಿರಿ.
********************
-ಪುಟಗಳು 19,20-


********************


                                                                                  ರಕ್ಷಾಪುಟ - 3

*****************************************************

    

-ರಕ್ಷಾಪುಟ - 4 -
********************************************

ಓದಿದ್ದಕ್ಕೆ ಧನ್ಯವಾದಗಳು.  ಪ್ರತಿಕ್ರಿಯೆಗಳಿಗೆ ಸ್ವಾಗತ.

********************************************




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ